ಉ.ಕ ಸುದ್ದಿಜಾಲ ಅಥಣಿ :
ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನಿರ್ದೇಶಕ ಸ್ಥಾನದ ನಾಮಪತ್ರ ಸಲ್ಲಿಕೆಯ ವೇಳೆ ಜೋಡೆತ್ತು ಹಾಗೆ ಬಂದ ಶಾಸಕ ಲಕ್ಷ್ಮಣ ಸವದಿ ಹಾಗೂ ರಾಜು ಕಾಗೆ ಬಳಿಕ ಸವದಿ ಬಿಟ್ಟು ಅವಿರೋಧವಾಗಿ ಆಯ್ಕೆಯಾಗಿದ್ದ ಕಾಗೆಗೆ ಸವದಿ ಅಭಿಮಾನಿ ಕರೆ ಮಾಡಿ ಸಿಕ್ಕಾಪಟ್ಟೆ ತರಾಟೆಗೆ ತೆಗೆದುಕೊಂಡ ಆಡಿಯೋ ವೈರಲ್ ಆಗಿದೆ.
ಬೆಳಗಾವಿ ಜಿಲ್ಲೆಯ ಅಥಣಿಯ ಮಲ್ಲಿಕನಾಜ್ ನಧಾಫ್ ಹಾಗೂ ಕಾಗೆ ನಡುವಿನ ಸಂಭಾಷಣೆ ಸಧ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸವದಿಗೆ ಮೋಸ ಮಾಡಿದ್ದೀರಿ ಎಂದು ಅವರ ಅಭಿಮಾನಿ ಕಾಗೆ ಜೊತೆ ಮಾತಿನ ಚಕಮಕಿ ನಡೆಸಿದ್ದಾನೆ.