ಉ.ಕ ಸುದ್ದಿಜಾಲ ಬೆಳಗಾವಿ :

ಬೆಳಗಾವಿಯಲ್ಲಿ ಇಂದಿನಿಂದ ಚಳಿಗಾಲದ ಅಧಿವೇಶನ ಹಿನ್ನೆಲೆ. ಸುವರ್ಣ ಸೌಧ ಸೇರಿ ಬೆಳಗಾವಿಯಲ್ಲಿ ಕಟ್ಟೆಚ್ಚರ ವಹಿಸಿದ ಪೊಲೀಸ್ ಇಲಾಖೆ. ನಗರ ಪೊಲೀಸ್ ಆಯುಕ್ತ ಭೂಷಣ್ ಬೊರಸೆ ನೇತೃತ್ವದಲ್ಲಿ ಬೀಗಿ ಭದ್ರತೆ. ಸುವರ್ಣ ಸೌಧದ ಮೂರು ಕಿ ಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ.

ಭದ್ರತೆಗಾಗಿ 6 ಸಾವಿರ ಪೊಲೀಸರ ನಿಯೋಜನೆ ಮಾಡಿದ ಸರ್ಕಾರ. 6 ಜನ ಎಸ್ಪಿ, 146 ಡಿವೈಎಸ್ಪಿ, ಸಿಪಿಐ ಹಾಗೂ ಪಿಎಸ್ಐ ನೇಮಕ. 3820 ಪೊಲೀಸ್ ಸಿಬ್ಬಂದಿ, 500 ಗೃಹ ರಕ್ಷದ ದಳ ಸಿಬ್ಬಂದಿ 8 ಕ್ವೀಕ್ ರೆಸ್ಪಾನ್ಸ್ ಟೀಂ, 10 ಡಿ ಆರ ಪ್ರಹಾರ ದಳ, 35 ಕೆ ಎಸ್ ಆರ್ ಪಿ ತುಕಡಿ ಭದ್ರತೆಗಾಗಿ ನಿಯೋಜನೆ.

1 ಬಿ ಡಿ ಡಿಎಸ್ ತಂಡ, 1ಗರುಡಾ ಫೋರ್ಸ್ ಭದ್ರತೆಗೆ ನಿಯೋಜನೆ. 16 ವಿಧ್ವಸಂಕ ಕೃತ್ಯ ತಪಾಸಣ ತಂಡ ನೇಮಕ. ಸುವರ್ಣ ಸೌಧ ಸೇರಿ ನಗರದಲ್ಲಿ 800 ಸಿಸಿಟಿವಿ ಕ್ಯಾಮರಾ ಅಳವಡಿಕೆ.

ಸರ್ಕಾರದ ವಿರುದ್ಧ ಹೋರಾಟಕ್ಕೆ ಸಜ್ಜುಗೊಂಡ ಸಂಘ- ಸಂಸ್ಥೆಗಳು. 10 ದಿನಗಳ ಅಧಿವೇಶನದಲ್ಲಿ 84 ವಿವಿಧ ಸಂಘಟನೆಗಳಿಂದ ಪ್ರತಿಭಟನೆ. ಪ್ರತಿಭಟನೆಗಾಗಿ ಸುವರ್ಣ ಗಾರ್ಡನ್ ಬಳಿಯಲ್ಲಿ ತಾತ್ಕಾಲಿಕ ಟೆಂಟ್ ನಿರ್ಮಾಣ. ಒಂದೇ ಕಡೆಯಲ್ಲಿ ಪ್ರತಿಭಟನೆಗೆ 6 ಟೆಂಟ್ ಗಳ ನಿರ್ಮಾಣ.

ಪ್ರತಿಭಟನಾಕಾರರ ಸಂಖ್ಯೆ ಆಧರಿಸಿ ಟೆಂಟ್ ನೀಡಲು ತೀರ್ಮಾನ. ಬೃಹತ್ ಪ್ರತಿಭಟನೆಗಾಗಿ ಓಲ್ಡ್ ಪಿಬಿ ರಸ್ತೆಯ ಬಳಿಯಲ್ಲಿ ಪ್ರತ್ಯೇಕ ವ್ಯವಸ್ಥೆ. ರೈತರು, ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರು, ಮೀಸಲಾತಿ ಹೋರಾಟ. ಉಪನ್ಯಾಸಕರು, ಉಕ ಪ್ರತ್ಯೇಕ ರಾಜ್ಯ, ಬೆಳಗಾವಿ ಜಿಲ್ಲೆ ವಿಭಜನೆ. ರಾಜ್ಯದ ಹಲವು ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಹೋರಾಟ

ಬೆಳಗಾವಿಯಲ್ಲಿ ಇಂದಿನಿಂದ ಚಳಿಗಾಲದ ಅಧಿವೇಶನ ಹಿನ್ನೆಲೆ. ಅಧಿವೇಶನಕ್ಕೆ ವಿರುದ್ಧವಾಗಿ ಮತ್ತೆ ಎಂಇಎಸ್ ಕ್ಯಾತೆ. ಇಂದು ನಗರದಲ್ಲಿ ಮಹಾಮೇಳಾವ್ ಆಯೋಜಿಸಲು ಸರ್ಕಸ್. ಎಂಇಎಸ್ ಮಹಾಮೇಳಾವ್ ಆಯೋಜನೆ ಇಲ್ಲ ಅನುಮತಿ. ಕನ್ನಡ ಪರ ಸಂಘಟನೆಗಳ ಒತ್ತಾಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕ್ರಮ.

ಎಂಇಎಸ್ ಮಹಾಮೇಳಾವ್ ಅನುಮತಿ ನೀಡದ ಪೊಲೀಸ್ ಇಲಾಖೆ. ಎಂಇಎಸ್, ಶಿವಸೇನೆಯಿಂದ ನಗರದಲ್ಲಿ ಇಂದು ಹೈಡ್ರಾಮಾ ‌ಸಾಧ್ಯತೆ. ಬಾಲ ಬಿಚಿದ್ರೆ ಅರೆಸ್ಟ್ ಮಾಡಲು ಸಿದ್ದರಾಗಿರೋ ಪೊಲೀಸರು. ನಿಪ್ಪಾಣಿ, ಶಿನ್ನೋಳಿ ಗಡಿ ಭಾಗದಲ್ಲಿ ಕಟ್ಟೆಚ್ಚರ ವಹಿಸಿರುವ ಪೊಲೀಸರು. ಶಿವಸೇನೆ ಮುಖಂಡರು ಬೆಳಗಾವಿ ಗಡಿ ಪ್ರವೇಶ ಮಾಡದಂತೆ ತಡೆಯಲು ಕ್ರಮ.