ಉತ್ತರ ಕರ್ನಾಟಕ ಸುದ್ದಿಜಾಲ ಬಾಗಲಕೋಟೆ :

ಆಸ್ತಿ ವಿವಾದ ಹಿನ್ನಲೆ ಒಂದು ಲಕ್ಷ ರೂಪಾಯಿ ಸುಫಾರಿ ನೀಡಿ ಮಗನಿಂದಲೇ ತಂದೆ ಕೊಲೆ‌ ಮಾಡಿರುವ ಹೃದಯ ವಿದ್ರಾವಕ ಘಟನೆ ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಕಾತರಕಿ ಗ್ರಾಮದಲ್ಲಿ ನಡೆದಿದೆ.

ತಂದೆಯನ್ನ ಕೊಲೆಮಾಡಿಸಿದ ಮಗ

ಕಾತರಕಿ ಗ್ರಾಮದ ಗ್ರಾಮ ಚೆನ್ನಪ್ಪ ವಜ್ರಮಟ್ಟಿ ಕೊಲೆಯಾದ ತಂದೆ. ಬಸವರಾಜ ಕೊಲೆ ಮಾಡಿಸಿದ ಮಗ. ಬರಮಪ್ಪ ಜಂಬಗಿ, ಗೋಪಾಲ ರೊಡ್ಡಪ್ಪನವರ, ಪರಶುರಾಮ ಮಾದರ, ದುರ್ಗಪ್ಪ ಹುಗ್ಗಿ, ಮಾರುತಿ ಜಾನಮಟ್ಟಿ ಎಂಬುವರಿಂದ ಕೊಲೆ‌‌ ಮಾಡಲಾಗಿದೆ‌.

ಕೊಲೆ ಮಾಡಿದ ಅಪರಾಧಿಗಳು

ನವೆಂಬರ್ 19 ರಂದು ಈ ಘಟನೆ ನಡೆದಿದ್ದು, ಕಟ್ಟಿಗೆಯಿಂದ ಮಾರಣಾಂತಿಕ ಹಲ್ಲೆಗೈದು ಎಸ್ಕೇಪ್ ಆಗಿದ್ದ ಆರೋಪಿಗಳು. ಗಂಭೀರ ಗಾಯಗೊಂಡಿದ್ದ ಚೆನ್ನಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವನಪ್ಪಿದ್ದಾರೆ. ಬೀಳಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ‌. ತಾನೆ ಕೊಲೆ ಮಾಡಿಸಿ ತಂದೆ ಮೇಲೆ‌ ಯಾರೋ ಹಲ್ಲೆ ಮಾಡಿದ್ದಾರೆ ಎಂದು ದೂರು ನೀಡಿದ್ದ ಮಗ. ಇದೀಗ ಬೀಳಗಿ ಪೊಲೀಸರ ತನಿಖೆಯಲ್ಲಿ‌ ಮಗನ ಅಸಲಿ ಬಣ್ಣ ಬಯಲಾಗಿದೆ.

ಕೊಲೆ ಮಾಡಿದ ಅಪರಾಧಿಗಳು

ಮಗನ ಕಪಟ ನಾಟಕ‌ ಬಯಲಿಗೆಳೆದ ಬೀಳಗಿ ಪೊಲೀಸರು, ಮಗ ಬಸವರಾಜ ಹಾಗೂ ಆರೋಪಿಗಳನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವ ಪೊಲೀಸರು. ತಂದೆ ಮಗನ ಮಧ್ಯೆ ಮೂರು ಎಕರೆ ಆಸ್ತಿ, ಹಣಕ್ಕಾಗಿ ಆಗಾಗ ಜಗಳ‌ ನಡೆಯುತ್ತಿತ್ತು. ಇದೇ ದ್ವೇಷದಿಂದ ತಂದೆಯ ಜೀವವನ್ನೇ ತೆಗೆದ ಮಗ ಎನ್ನುವುದು ತನಿಖೆ ಬಳಿಕ ತಿಳಿಬೇಕಿದೆ‌.

ಕೊಲೆ ಮಾಡಿದ ಅಪರಾಧಿ