ಉ.ಕ ಸುದ್ದಿಜಾಲ ಬೆಳಗಾವಿ :

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ತವರು ಕ್ಷೇತ್ರದಲ್ಲಿ ಸಿಗ್ತಿಲ್ಲ ಸಂತ್ರಸ್ತ ಬಾಲಕಿಗೆ ನ್ಯಾಯ? ಪೋಕ್ಸೋ ಪ್ರಕರಣದ ಆರೋಪಿಗೆ ಸ್ಟೇಷನ್ ಬೆಲ್ ಕೊಟ್ಟು ಕಳುಹಿಸಿದ ಪೊಲೀಸರು. ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರ ನಡೆಗೆ ಆಕ್ರೋಶ ಮಾಜಿ ಶಾಸಕ ಸಂಜಯ ಪಾಟೀಲ್ ಆಕ್ರೋಶ

ಬೆಳಗಾವಿಯಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು ಬಾಲಕಿಗೆ ಅಶ್ಲೀಲ ಮೆಸೇಜ್ ಮಾಡುವುದು, ಶಾಲೆಯಲ್ಲಿ ಆಕೆಯ ಮೈಕೈ ಮುಟ್ಟುತ್ತಿದ್ದ ಶಿಕ್ಷಕನಿಗೆ ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದ ಗ್ರಾಮಸ್ಥರು. ವಾರದ ಹಿಂದೆ ಬೆಳಗಾವಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಘಟನೆ.

ಪೋಕ್ಸೋ ಕಾಯ್ದೆಯಡಿಯ ಕೇಸ್ ದಾಖಲಿಸಿಕೊಂಡಿದ್ದೇವೆ ಎಂದಿದ್ದ ಪೊಲೀಸ್ ಕಮಿಷನರ್. ಆರೋಪಿಯನ್ನು ಈವರೆಗೆ ಬಂಧಿಸುವ ಕೆಲಸ ಪೊಲೀಸರು ಮಾಡಿಲ್ಲ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಒತ್ತಡಕ್ಕೆ ಮಣಿದು ಆರೋಪಿ ಬಿಟ್ಟು ಕಳುಹಿಸಿದ್ದಾರೆಂದು ಮಾಜಿ ಶಾಸಕ ಸಂಜಯ್ ಪಾಟೀಲ್ ಗಂಭೀರ ಆರೋಪ‌‌.

ಘಟನೆ ಬಗ್ಗೆ ಒಂದು ಮಾತು ಸಹ ಹೆಬ್ಬಾಳ್ಕರ್ ಆಡಿಲ್ಲ. ಕೇಸ್ ಹಾಕಿಬೇಡಿ ಎಂದು ಹೆಬ್ಬಾಳ್ಕರ್ ಪೊಲೀಸರ ಮೇಲೆ ಒತ್ತಡ ತಂದಿದ್ದಾರೆ. ಸಚಿವೆ ಹೆಬ್ಬಾಳ್ಕರ್ ಗೆ ಬೆಳಗಾವಿಯ ಲೇಡಿ ಹಿಟ್ಲರ್ ಎಂದ ಪಾಟೀಲ್.

ತಹಶಿಲ್ದಾರ ಕಚೇರಿಯಲ್ಲಿ ಆಗಿರೋ ಆತ್ಮಹತ್ಯೆ ‌ಮುಚ್ಚಿ ಹಾಕಿದ್ರು. ಯಾವುದ್ಯಾವುದಕ್ಕೆ ಹೋರಾಟ ಮಾಡುವವರು ಎಲ್ಲಿ ಮಲಗಿದಿರೋ ಮಕ್ಕಳಾ. ಇದರ ಬಗ್ಗೆ ಯಾರು ಹೋರಾಟ ಮಾಡುತ್ತಿಲ್ಲ ಏನ್ ವಿಶೇಷ. ಮಹಿಳೆಯ ಅಪಮಾನ ಎಂದು ನಮ್ಮ ಮನೆಯಲ್ಲಿ ಡ್ಯಾನ್ಸ್ ಮಾಡಿದ್ರಿ. ಈಗ ಎಲ್ಲಿ ಹೋಗಿದ್ದೀರಿ ಎಂದು ಕಾಂಗ್ರೆಸ್ ‌ಕಾರ್ಯಕರ್ತರಿಗೆ ಟಾಂಗ್.