ಉ.ಕ‌ ಸುದ್ದಿಜಾಲ ಬೆಳಗಾವಿ :

ನೈಋತ್ಯ ರೈಲ್ವೆಯು ಗುಡ್ ಫ್ರೈಡೇ ಹಾಗೂ ಈಸ್ಟರ್ ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸಲು ಬೆಂಗಳೂರು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (SMVT) ಮತ್ತು ಬೆಳಗಾವಿ (BGM) ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಓಡಿಸಲು ನಿರ್ಧರಿಸಿದೆ.

ರೈಲು ಸಂಖ್ಯೆ 06503, ಏಪ್ರಿಲ್ 2ರ ಗುರುವಾರ ಸಂಜೆ 7:00 ಗಂಟೆಗೆ ಬೆಂಗಳೂರಿನ ಎಸ್‌ಎಂವಿಟಿ ನಿಲ್ದಾಣದಿಂದ ಹೊರಟು, ಮರುದಿನ ಶುಕ್ರವಾರ ಬೆಳಿಗ್ಗೆ 7:35ಕ್ಕೆ ಬೆಳಗಾವಿಗೆ ತಲುಪಲಿದೆ (ಏಕಮುಖ ಸಂಚಾರ).

ರೈಲು ಸಂಖ್ಯೆ 06504, ಏಪ್ರಿಲ್ 5ರ ಭಾನುವಾರ ಸಂಜೆ 5:30ಕ್ಕೆ ಬೆಳಗಾವಿ ನಿಲ್ದಾಣದಿಂದ ಹೊರಟು, ಮರುದಿನ ಸೋಮವಾರ ಬೆಳಿಗ್ಗೆ 5:00 ಗಂಟೆಗೆ ಬೆಂಗಳೂರು ಎಸ್‌ಎಂವಿಟಿ ನಿಲ್ದಾಣಕ್ಕೆ ಆಗಮಿಸಲಿದೆ (ಏಕಮುಖ ಸಂಚಾರ).

ಈ ವಿಶೇಷ ರೈಲುಗಳು ಒಟ್ಟು 19 ಐಸಿಎಫ್ (ICF) ಬೋಗಿಗಳನ್ನು ಹೊಂದಿದ್ದು , ತನ್ನ ಮಾರ್ಗ ಮಧ್ಯೆದ ಸಂಚಾರದಲ್ಲಿ ಚಿಕ್ಕಬಾಣಾವರ (BAW) ತುಮಕೂರು, (TK), ಅರಸೀಕೆರೆ (ASK), ಬೀರೂರು (RRB), ದಾವಣಗೆರೆ (DVG) , ಹರಿಹರ, (HRR), ಹಾವೇರಿ (HVR), SSS ಹುಬ್ಬಳ್ಳಿ (UBL) ಧಾರವಾಡ (DWR), ಅಳ್ನಾವರ (LWR), ಲೋಂಡಾ (LD) ಹಾಗೂ ಖಾನಾಪುರ ರೈಲು ನಿಲ್ದಾಣ (KNP) ಗಳ ಮೂಲಕ ಸಂಚರಿಸಲಿವೆ.