ಉ.ಕ ಸುದ್ದಿಜಾಲ ಕಾಗವಾಡ :
ಬಸ್ ಹತ್ತುವ ಒಂಟಿ ಮಹಿಳೆಯರನ್ನೇ ಟಾರ್ಗೆಟ್ ಮಾಡ್ತಿದ್ದ ಗ್ಯಾಂಗ್. ರಶ್ ಇರೋ ಸರ್ಕಾರಿ ಬಸ್ಸಿನಲ್ಲೇ ಮಹಿಳೆಯರ ಬ್ಯಾಗ್ ಗೆ ಕನ್ನಾ ಹಾಕ್ತಿದ್ದ ಗ್ಯಾಂಗ್. ಕರ್ನಾಟಕ ಮಹಾರಾಷ್ಟ್ರ ಗಡಿಯಲ್ಲಿ ಇರೋ ಬಸ್ ನಿಲ್ದಾಣದಲ್ಲಿ ಕೃತ್ಯ. ಬೆಳಗಾವಿ ಜಿಲ್ಲೆ ಕಾಗವಾಡ ತಾಲೂಕಿನಲ್ಲೇ ಕೃತ್ಯ ಎಸಗುತ್ತಿದ್ದ ಖದೀಮರು.
ಚೆನ್ನವ್ವಾ, ವೈಶಾಲಿ ಎಂಬ ಮಹಿಳೆಯರಿಂದ ಕಾಗವಾಡ ಠಾಣೆಯಲ್ಲಿ ಕೇಸ್. ಕೇಸ್ ಬೆನ್ನುಬಿದ್ದ ಪೊಲೀಸರಿಗೆ ಸಿಸಿಟಿವಿಯಲ್ಲಿ ಸಿಕ್ಕತ್ತು ಸುಳಿವು. ಉತ್ತರ ಪ್ರದೇಶ ಎರಡು ಪ್ರತ್ಯೇಕ ಗ್ಯಾಂಗ್ ಆಕ್ಟಿವ್ ಆಗಿರೋದು ಪತ್ತೆ. 33 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದಿದ್ದ ಗ್ಯಾಂಗ್ ಉತ್ತರ ಪ್ರದೇಶದಲ್ಲೇ ಅರೇಸ್ಟ್. ಮಹಿಳೆ ಸೇರಿ 11 ಜನ ಖರ್ತನಾಕ್ ಆರೋಪಿಗಳನ್ನ ಬಂಧಿಸಿದ ಕಾಗವಾಡ ಪೊಲೀಸರು.
ಅಪಸಾನ್, ಜಾಕಿ, ಮೊಬಿನಖಾನ್,ಇಂದ್ರಜೀತ್, ಮಹಮ್ಮದ್ ಯೂಸುಫ್ ಗ್ಯಾಂಗ್ ನಿಂದ 25 ಲಕ್ಷ 80 ಸಾವಿರ ಮೌಲ್ಯದ 172 ಗ್ರಾಂ ಚಿನ್ನಾಭರಣ ಜಪ್ತಿ. ಮತ್ತೊಂದು ಗ್ಯಾಂಗ್ ಮೊಹಮ್ಮದ್, ಜಪರಯಾಬ್, ಮಹಮ್ಮದ್ ಅಕೀಲ್, ರಾಜಪಾಲ್,ದೌಜಿ, ಕೈರಾತಿ ಗ್ಯಾಂಗ್ ನಿಂದ 7 ಲಕ್ಷ 90 ಸಾವಿರ ಮೌಲ್ಯದ 53 ಗ್ರಾಂ ಚಿನ್ನಾಭರಣ ಜಪ್ತಿ. ಪೊಲೀಸರ ಕಾರ್ಯಾಚರಣೆಗೆ ಎಸ್ಪಿ ರಾಮರಾಜನ್ ಮೆಚ್ಚುಗೆ.
ಕಾಗವಾಡ ಪೋಲಿಸರ ಭರ್ಜರಿ ಬೇಟೆ, 33 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದಿದ್ದ ಗ್ಯಾಂಗ್ ಉತ್ತರ ಪ್ರದೇಶದಲ್ಲೇ ಅರೆಸ್ಟ್
