ಉ.ಕ ಸುದ್ದಿಜಾಲ ಬೆಳಗಾವಿ :

ವಿವಾಹಿತೆಯನ್ನು ಓಡಿಸಿಕೊಂಡು ಹೋದ ಯುವಕನ ಮನೆ ಸಂಪೂರ್ಣ ದ್ವಂಸ – ಮಾರಕಾಸ್ತ್ರ ಸಮೇತ ಇನ್ನೂರಕ್ಕೂ ಅಧಿಕ ಜನರಿಂದ‌ ಯುವಕನ‌ ಮನೆ ಮೇಲೆ ಅಟ್ಯಾಕ್ ಸಚಿವ ಸತೀಶ್ ಜಾರಕಿಹೊಳಿ‌ ಪ್ರತಿನಿಧಿಸುವ ಯಮಕನಮರಡಿ ಕ್ಷೇತ್ರದಲ್ಲಿ ಮತ್ತೊಂದು ಕ್ರೂರ ಕೃತ್ಯ.

ಮಾರಕಾಸ್ತ್ರ ಸಮೇತ ಇನ್ನೂರಕ್ಕೂ ಅಧಿಕ ಜನರಿಂದ‌ ಯುವಕನ‌ ಮನೆ ಮೇಲೆ ಅಟ್ಯಾಕ್. ಬೆಳಗಾವಿ ತಾಲೂಕಿನ ಭರಮ್ಯಾನಟ್ಟಿ ಗ್ರಾಮದಲ್ಲಿ ನಡೆಯ ಹ್ಯೇಯ ಕೃತ್ಯ. ತಳವಾರ, ಜಂಬೆ, ಕುಡಗೋಲು, ಬಡಿಗೆ ಸಮೇತ ‌ಆಗಮಿಸಿ ಅಟ್ಟಹಾದ ಮೆರೆದ ದುಷ್ಕರ್ಮಿಗಳು.

ಮನೆಯಲ್ಲಿದ್ದ ಯುವಕನ ಕುಟುಂಬಸ್ಥರ ಹತ್ಯೆಗೆ ದುಷ್ಕರ್ಮಿಗಳ ಯತ್ನ. ವಿವಾಹಿತೆಯ ಪೋಷಕರು, ಪತಿಯ ಪೋಷಕರಿಂದ‌ ಯುವಕನ ಮನೆ ಮೇಲೆ ದಾಳಿ. ವಿವಾಹಿತೆ ನಾಗವ್ವ ಜೊತೆಗೆ ‌ಎರಡು ದಿನಗಳ ಹಿಂದೆ ಓಡಿ ಹೋಗಿರುವ ಯುವಕ ಯಲ್ಲಪ್ಪ. ಕಳೆದ ವರ್ಷ ಬಸಪ್ಪ ನಾಯಕ ‌ಜೊತೆಗೆ ವಿವಾಹವಾಗಿದ್ದ ನಾಗವ್ವ ನಾಯಕ.

ಬಸಪ್ಪ ನಾಯಕ ಹಾಗೂ ಯಲ್ಲಪ್ಪ ನಾಯಕ ಇಬ್ಬರೂ ಆತ್ಮೀಯ ಸ್ನೇಹಿತರು. ಬೆಳಗಾವಿಯ ಒಂದೇ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಬಸಪ್ಪ ದಂಪತಿ, ಯಲ್ಲಪ್ಪ ನಾಯಕ. ಉದ್ಯಮಭಾಗದ ಅಶೋಕ್ ಐರನ್ ಕಂಪನಿಯಲ್ಲಿ ಕೆಲಸ‌ ಮಾಡ್ತಿದ್ದ ಮೂವರು. ಈ ವೇಳೆ ಸಲುಗೆ ಬೆಳೆದು ನಾಗವ್ವ ಜೊತೆಗೆ ಓಡಿ ಹೋಗಿರುವ ಯಲ್ಲಪ್ಪ ನಾಯಕ.

ಇದರಿಂದ ಆಕ್ರೋಶಗೊಂಡು ಯಲ್ಲಪ್ಪ ನಾಯಕ ಕುಟುಂಬಸ್ಥರನ್ನು ಟಾರ್ಗೆಟ್ ಮಾಡಿ ದಾಳಿ. ದಾಳಿ ವೇಳೆ ಮನೆಯ ಹಂಚುಗಳು ಪುಡಿ ಪುಡಿ, ಅಲ್ಮಾರಿ, ಟಿವಿ ದ್ವಂಸ. ಓಡಿ ಹೋಗಿ ಪ್ರಾಣ ಉಳಿಸಿಕೊಂಡ ಯಲ್ಲಪ್ಪನ ಪೋಷಕರು.

ದಾಳಿ ನಂತರ ಮನೆಯಲ್ಲಿದ್ದ ಚಿನ್ನಾಭರಣ, ಹಣ, 25 ಕುರಿ ಜೊತೆಗೆ ದುಷ್ಕರ್ಮಿಗಳು ಪರಾರಿ. ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕಾಗಿ ಪೊಲೀಸ್ ಕಮೀಷ್ನರ್ ಮೊರೆ ಇಟ್ಟ ‌ಸಂತ್ರಸ್ತ ಕುಟುಂಬ.