ಉ.ಕ ಸುದ್ದಿಜಾಲ ಬೆಳಗಾವಿ :

ಗಡಿ ಜಿಲ್ಲೆ ಬೆಳಗಾವಿಯಲ್ಲಿ ರೌಡಿಶೀಟರ್ ಗಳಲ್ಲಿ ನಡುಕ. ರೌಡಿಗಳಿಗೆ ಬೆಳಗಾವಿ ಎಸ್ಪಿ ಕೆ.ರಾಮರಾಜನ್ ಖಡಕ್ ವಾರ್ನಿಂಗ್. ಗ್ಯಾಂಗ್ ಕಟ್ಟಿಕೊಂಡ ರೌಡಿಗಳ ವಿರುದ್ಧ ಗೂಂಡಾ ಕಾಯ್ದೆ ಅಸ್ತ್ರ ಪ್ರಯೋಗ. ಸಿನಿಮಾ ಸ್ಟೈಲ್ ನಲ್ಲಿ ಜನರಲ್ಲಿ ಭಯ ಸೃಷ್ಟಿಸುತ್ತಿದ್ದವನಿಗೆ ಕಾನೂನಿನ ಬಿಸಿ.

ಹವಾ ಮಾಡಲು ಡಾನ್ ರೀತಿ ರೀಲ್ಸ್ ಮಾಡಿದ್ದವನು ಬಳ್ಳಾರಿ ಜೈಲು ಪಾಲು. ಗೂಂಡಾ ಕಾಯ್ದೆಯಡಿ ರೌಡಿಶೀಟರ್ ಬಾಳೇಶ್ ಹೊಂಡಪ್ಪನವರ ವಿರುದ್ಧ ಕ್ರಮ. ಮುನ್ನಜಾಗೃತ ಕ್ರಮವಾಗಿ ಒಂದು ವರ್ಷ ಅರೇಸ್ಟ್ ಆದೇಶ ಹೊರಡಿಸಿ ಆದೇಶ ಬೆಳಗಾವಿ ಜಿಲ್ಲೆ ಯರಗಟ್ಟಿ ತಾಲೂಕಿನ ನುಗ್ಗಾನಟ್ಟಿ ಗ್ರಾಮದ ಬಾಳೇಶ್.

ಬಾಳೇಶ್ ಅಲ್ಲದೇ ಇನ್ನೂ ನಾಲ್ಕು ಜನ ರೌಡಿಶೀಟರ್ ವಿರುದ್ಧ ಗೂಂಡಾ ಕಾಯ್ದೆಯಡಿ ಬಂಧಿಸಲು ಸಿದ್ಧತೆ. ಬೆಳಗಾವಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಕಠಿಣ ಕ್ರಮ.

ಬೆಳಗಾವಿ ಜಿಲ್ಲೆ ಮುರುಗೋಡ್ ಪೊಲೀಸರಿಂದ ಕ್ರಮ. ಆರೋಪಿ ವಿರುದ್ಧ 9 ಅಪರಾಧಿಕ ಕೇಸ್ ಜೊತೆಗೆ 12 ಬಾರೀ ಮುನ್ನಜಾಗೃತ ಕ್ರಮವಾಗಿ ಅರೇಸ್ಟ್.