ಉ.ಕ ಸುದ್ದಿಜಾಲ ಕಾಗವಾಡ :
ಕಬ್ಬು ಬಲ ಬೆಲೆ ಹೋರಾಟ ರಾಜ್ಯ ಸರ್ಕಾರದಿಂದ 3,600 ದರ ನಿಗಧಿ, ಈ ಮದ್ಯ ಇಲ್ಲೊಂದು ಸಕ್ಕರೆ ಕಾರ್ಖಾನೆ ಪ್ರತಿಟನ್ ಕಬ್ಬಿಗೆ 4,000 ದರ ಘೋಷಣೆ ಕಾಗವಾಡದ ಶಿರಗುಪ್ಪಿ ಶುಗರ್ ವರ್ಕ್ಸ್ನಿಂದ 2026-27ನೇ ಸಾಲಿನ ಹಂಗಾಮಿಗೆ ಪ್ರತಿ ಟನ್ ಕಬ್ಬಿಗೆ 4,000 ದರ ಘೋಷಣೆ.
ರಾಜ್ಯದ ಗಡಿ ಭಾಗದಲ್ಲಿರುವ ಶಿರಗುಪ್ಪಿ ಶುಗರ್ ವರ್ಕ್ಸ್ ಸಕ್ಕರೆ ಕಾರ್ಖಾನೆ ಬೆಳಗಾವಿ ಜಿಲ್ಲೆಯ ಕಾಗವಾಡ ಪಟ್ಟಣದ ಹೊರವಲಯದಲ್ಲಿರುವ ಶಿರಗುಪ್ಪಿ ಶುಗರ್ಸ ಸಕ್ಕರೆ ಕಾರ್ಖಾನೆ ಪ್ರಸಕ್ತ 2026-27ನೇ ಸಾಲಿನ ಕಬ್ಬು ನುರಿಸುವ ಹಂಗಾಮಿಗೆ ಪ್ರತಿ ಟನ್ ಕಬ್ಬಿಗೆ ಒಟ್ಟು 4,000 ದರ ನೀಡಲು ನಿರ್ಧಾರ. ಕಬ್ಬು ಬೆಳೆಗಾರರಿಗೆ ಮೊದಲ ಕಂತಾಗಿ ಪ್ರತಿ ಮೆಟ್ರಿಕ್ ಟನ್ಗೆ ₹3,700 ನೀಡಲಾಗುವುದು.
ಕಬ್ಬು ನುರಿಸುವ ಹಂಗಾಮು ಮುಕ್ತಾಯವಾದ ನಂತರ ಎರಡನೇ ಕಂತಾಗಿ ₹100 ನೀಡಲಾಗುವುದು. ಸಕ್ಕರೆಯ ಮಾರಾಟ ದರ ಪ್ರತಿ ಕ್ವಿಂಟಾಲ್ಗೆ ₹50 ಹೆಚ್ಚಳವಾದಲ್ಲಿ ಮುಂದಿನ ಹಂಗಾಮು ಪ್ರಾರಂಭವಾಗುವ ಮೊದಲು ಮೂರನೇ ಕಂತಾಗಿ ಪ್ರತಿ ಟನ್ಗೆ ₹200 ನೀಡಲಾಗುವುದು.
ಈ ಮೂಲಕ ಒಟ್ಟು ಪ್ರತಿ ಮೆಟ್ರಿಕ್ ಟನ್ ಕಬ್ಬಿಗೆ ₹4,000 ದರ ಪಾವತಿಸಲಾಗುವುದು ಎಂದು ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ತಿಳಿಸಿದೆ.
ಮಾಹಿತಿ ನೀಡಿದ ಕೆ.ಪಿ. ಮಗ್ಗೆನವರ್ ಅವರು, 2026-27ನೇ ಸಾಲಿನ ಕಬ್ಬು ನುರಿಸುವ ಹಂಗಾಮು ಪ್ರಾರಂಭವಾಗಿದ್ದು, ಕಾರ್ಖಾನೆಯ ಕಾರ್ಯವ್ಯಾಪ್ತಿಯಲ್ಲಿ ಅಲ್ಪ ಪ್ರಮಾಣದ ಮಳೆಯಾಗಿರುವುದು, ಪ್ರಸಕ್ತ ಸಾಲಿನ ಕಬ್ಬಿನ ಬೆಳೆ ಪರಿಸ್ಥಿತಿ, ನಿರೀಕ್ಷಿತ ಕಬ್ಬಿನ ಇಳುವರಿ ಸೇರಿದಂತೆ ವಿವಿಧ ಅಂಶಗಳನ್ನು ಪರಿಗಣಿಸಿ ಆಡಳಿತ ಮಂಡಳಿಯು ಕಬ್ಬಿನ ದರ ನಿಗದಿಪಡಿಸಿದೆ ಎಂದರು.
ಪ್ರಸಕ್ತ ಹಂಗಾಮಿನಲ್ಲಿ ಎಲ್ಲ ಕಬ್ಬು ಬೆಳೆಗಾರ ರೈತರು ಹೆಚ್ಚಿನ ಪ್ರಮಾಣದಲ್ಲಿ ತಮ್ಮ ಕಬ್ಬನ್ನು ಶಿರಗುಪ್ಪಿ ಸಕ್ಕರೆ ಕಾರ್ಖಾನೆಗೆ ಪೂರೈಸಿ ಸಹಕರಿಸಬೇಕು ಎಂದು ಅಧ್ಯಕ್ಷಾರ ಕೆ ಪಿಮಗ್ಗೆಣ್ಣವರ ಮನವಿ ಮಾಡಿದರು.
ಕಾರ್ಖಾನೆಯ ಉಪಾಧ್ಯಕ್ಷ ಅರುಣ್ ಪರಾಂಡೆ ಮಾತನಾಡಿ, ರಾಜ್ಯದ ಗಡಿ ಭಾಗದಲ್ಲಿ ಕಳೆದ 15 ವರ್ಷಗಳಿಂದ ಅತ್ಯುತ್ತಮ ಸಕ್ಕರೆ ಕಾರ್ಖಾನೆ ಎಂಬ ಹೆಗ್ಗಳಿಕೆಗೆ ಶಿರಗುಪ್ಪಿ ಶುಗರ್ ವರ್ಕ್ಸ್ ಪಾತ್ರವಾಗಿದೆ. ಕಾರ್ಖಾನೆಯಲ್ಲಿ ಕೋ-ಜನರೇಷನ್ ಘಟಕದ ಮೂಲಕ ವಿದ್ಯುತ್ ಉತ್ಪಾದನೆ ಹಾಗೂ ಎಥನಾಲ್ ಉತ್ಪಾದನೆಯನ್ನೂ ಮಾಡಲಾಗುತ್ತಿದೆ ಎಂದರು.
ಪ್ರಸಕ್ತ ಹಂಗಾಮಿನಲ್ಲಿ ಕಬ್ಬಿನ ದರ ಹೆಚ್ಚಿಸುವ ಕುರಿತು ಕಾರ್ಖಾನೆಯ ಅಧ್ಯಕ್ಷ ಕೆ.ಪಿ. ಮಗ್ಗೆನವರ್, ವ್ಯವಸ್ಥಾಪಕ ನಿರ್ದೇಶಕ ಡಾ. ರಮೇಶ್ ಗೌಡನವರ್ ಹಾಗೂ ನಿರ್ದೇಶಕ ಮಂಡಳಿಯವರು ಸಮಗ್ರವಾಗಿ ಚರ್ಚಿಸಿ ಪ್ರತಿ ಟನ್ ಕಬ್ಬಿಗೆ ₹4,000 ದರ ನೀಡಲು ನಿರ್ಧರಿಸಿದ್ದಾರೆ.
ರೈತ ಬಾಂಧವರು ಈ ನಿರ್ಧಾರದ ಸದುಪಯೋಗ ಪಡೆದುಕೊಂಡು ಹಿಂದಿನಂತೆಯೇ ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಪೂರೈಸಿ ಕಾರ್ಖಾನೆಯೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
