https://www.facebook.com/share/v/17eJNE76px

ಉ.ಕ ಸುದ್ದಿಜಾಲ ಐನಾಪೂರ :

ಭಾರತ ದೇಶದಲ್ಲಿ ಬೇರೆ ಬೇರೆ ಸಮುದಾಯದ ಜನರು ಬಾಳುತ್ತಾರೆ ಅದರಲ್ಲಿ ಭೇದಭಾವ ಇರಬಹುದು ಆದರೆ ಕಾಗವಾಡ ತಾಲೂಕಿನ ಐನಾಪುರ್ ಪಟ್ಟಣದ ಜಾತ್ಯತೀತ ವಾಗಿರುವ ಅಮೋಘಸಿದ್ಧ ಧರ್ಮ ವಿಶೇಷವಾಗಿದೆ ಸುಮಾರು ಮೂರು ಲಕ್ಷ ಜನ ಇಲ್ಲಿ ಒಂದೇ ಸ್ಥಳದಲ್ಲಿ ಕೂಡಿ ಸಿದ್ದೇಶ್ವರ ದೇವರ ಪೌಳಿ ವಾಸ್ತು ಪೂಜೆ, 46 ಸತ್ಯಸಿದ್ಧರ ಭವ್ಯ ಭೇಟಿ ಕಾರ್ಯಕ್ರಮದ ದೃಶ್ಯಗಳನ್ನು ಕಂಡರೆ ಸಾಕ್ಷಾತ್ ಭಗವಂತನ ಧರಿಗೆ ಬಂದಂತಾಗಿದೆ. ಎಂದು ವಿಜಯಪುರ ಜಿಲ್ಲೆಯ ಮಾನ್ಕಾಪುರ್ ಗುರುಪೀಠದ ಸೋಮೇಶ್ವರ ಮಹಾರಾಜರು ಐನಾಪುರದಲ್ಲಿ ಹೇಳಿದರು.

ಸೋಮವಾರ ರಂದು ಐನಾಪುರದಲ್ಲಿ ಜರುಗಿರುವ ಪೌಳಿ ವಾಸ್ತು ಶಾಂತಿ ಕಾರ್ಯಕ್ರಮ ನಿಮಿತ್ಯವಾಗಿ ವಿಧಿ ಪೂಜೆ ಸಲ್ಲಿಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಸ್ವಾಮೀಜಿ ಮುಂದೆವರೆಗೂ ಹೇಳುವಾಗ ದೇಶದಲ್ಲಿ ಭಕ್ತಿಯಲ್ಲಿ ವಾಸಿವಾದ ಯಾವುದೇ ಧರ್ಮ ಇದ್ದರೆ ಅದು ಅಮೋಘಸಿದ್ಧ ಧರ್ಮ, ಇಲ್ಲಿಯ ಮೂರು ದಿನಗಳಲ್ಲಿ ಜರುಗಿರುವ ಕಾರ್ಯಕ್ರಮದಲ್ಲಿ ಯಾವುದೇ ಜಾತಿ, ಧರ್ಮ, ಅನ್ನದೆ ಒಂದಾಗಿ ಕಾರ್ಯಕ್ರಮ ಆಚರಿಸುತ್ತಿದ್ದಾರೆ.

ಆಶ್ಚರ್ಯ ಅಂದರೆ ಹಿಂದೂ ಸಮಾಜದ ಭಕ್ತರು ಅಷ್ಟೇ ಇದರಲ್ಲಿ ಭಾಗವಹಿಸದೆ ಮುಸ್ಲಿಂ ಬಾಂಧವರು ಇಲ್ಲಿಯ ಪಲ್ಲಕ್ಕಿ ಸೇವೆ ಮಾಡಿದ್ದಾರೆ. ಸುಮಾರು ಮೂರು ಲಕ್ಷ ಜನ ಭಕ್ತರು ಇಲ್ಲಿಗೆ ಪಾಲುಗೊಂಡಿದ್ದು ಎಲ್ಲರೂ ಒಂದುಗೂಡಿ ನಿರ್ಮಿಸಿದ ಮಹಾಪ್ರಸಾದ ಹಂಚಿಕೆ ಮತ್ತು ಸೇವನೆ ಏಕಕಾಲಕ್ಕೆ ಮಾಡುತ್ತಿದ್ದಾರೆ. ಇದು ಇನ್ನುಳಿದ ಗ್ರಾಮಗಳಿಗೆ ಮಾದರಿಯಾಗಿದೆ ಎಂದು ಸೋಮೇಶ್ವರ ಮಾರದರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಶ್ರೀ ಸಿದ್ದೇಶ್ವರ ದೇವಸ್ಥಾನ ಸಮಿತಿಯ ಉಪಾಧ್ಯಕ್ಷ ರಾಜುಗೌಡ ಪಾಟೀಲ್ ಮಾಹಿತಿ ನೀಡುವಾಗ ಐನಾಪುರದಲ್ಲಿ ಜರುಗುತ್ತಿರುವ ಐತಿಹಾಸಿಕ ಕಾರ್ಯಕ್ರಮ ಯಶಸ್ವಿಗೊಳುತ್ತಿದೆ 46 ಸತ್ಯ ಸಿದ್ದರ ಭವ್ಯ ಭೇಟಿ ಕಾರ್ಯಕ್ರಮ ಯಶಸ್ವಿಗೊಂಡಿದ್ದು ಲಕ್ಷಾಂತರ ಭಕ್ತರು ಪಾಲ್ಗೊಂಡಿದ್ದರು. ಬೆಳಿಗ್ಗೆ ಪೌಳಿ ವಾಸು ಶಾಂತ ಕಾರ್ಯಕ್ರಮ ನೆರವೇರಿಧೆ. ಕಾರ್ಯಕ್ರಮ ಯಶಸ್ವಿ ಗೊಳಿಸಲು ಪಟ್ಟಣದ ಎಲ್ಲ ಯುವಕರು ವಿವಿಧ ಸಂಸ್ಥೆಗಳ ಮುಖಂಡರು ಒಂದುಗೂಡಿ ಸುಮಾರು ಮೂರು ಲಕ್ಷ ಭಕ್ತರಿಗೆ ಮಹಾಪ್ರಸಾದ ನೀಡಿದ್ದಾರೆ. ಈ ಕಾರ್ಯಕ್ರಮ ನಾ ಭೂತೊ ನಾ ಭವಿಷ್ಯ ದಂತಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಐನಾಪುರ್ ಪಟ್ಟಣ ಪಂಚಾಯಿತಿಯ ಸದಸ್ಯರು ಹಿರಿಯ ನ್ಯಾಯವಾದಿ ಸಂಜಯ್ ಕುಚುನೂರೆ ಮಾಹಿತಿ ನೀಡುವಾಗ ಐನಾಪುರದಲ್ಲಿ ಜರುಗುತ್ತಿರುವ ಈ ಕಾರ್ಯಕ್ರಮದಲ್ಲಿ ಏಕಕಾಲಕ್ಕೆ 25 ಸ್ಥಾನಗಳಲ್ಲಿ ಮಹಾಪ್ರಸಾದ ನೀಡುವ ವ್ಯವಸ್ಥೆ ಮಾಡಿದ್ದು 10 ಟ್ರ್ಯಾಕ್ಟರ್ ಟ್ರಾಲಿ ಗಳಲ್ಲಿ ತಯಾರಿಸಿದ ಆಹಾರವನ್ನು ತೆಗೆದುಕೊಂಡು ಬಡಿಸುಲಾಗುತ್ತಿದೆ. ಕಳೆದ ಮೂರು ದಿನಗಳಲ್ಲಿ ಬೆಳಗ್ಗೆಯಿಂದ ಸಂಜೆವರೆಗೆ ಬೇರೆ ಬೇರೆ ರೀತಿಯ ಆಹಾರವನ್ನು ಭಕ್ತರು ಸೇವಿಸುತ್ತಿದ್ದಾರೆ. ಇಲ್ಲಿಯ ಯುವಕರ ಸೇವೆ ವಿಶೇಷವಾಗಿದೆ ಎಂದರು.