ಉ.ಕ ಸುದ್ದಿಜಾಲ ಬೆಳಗಾವಿ :

ನಾಡಿನ ಅನ್ನ ತಿಂದು ದ್ರೋಹ ಬರೆಯುವವರು ಕರ್ನಾಟಕದಲ್ಲಿರಲು ಅವಶ್ಯಕತೆ ಇಲ್ಲ, ನಾಡದ್ರೋಹಿ ಎಂಇಎಸ್ ವಿರುದ್ಧ ಶಾಸಕಿ ಅಂಜಲಿ‌ ನಿಂಬಾಳ್ಕರ್ ವಾಗ್ದಾಳಿ ನಡೆಸಿದ ಭಾಷಣದ ವಿಡಿಯೋ ವೈರಲ್. ಬೆಳಗಾವಿ ಜಿಲ್ಲೆ ಖಾನಾಪುರ ಕಾಂಗ್ರೆಸ್ ಶಾಸಕಿ ಅಂಜಲಿ‌ ನಿಂಬಾಳ್ಕರ್ ಅವರು ಇಟಗಿ ಗ್ರಾಮದ ದೊಡ್ಡಕೆರೆ ತುಂಬಿಸುವ ಯೋಜನೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದ್ದಾರೆ. ಶಾಸಕಿ ಅಂಜಲಿ ನಿಂಬಾಳ್ಕರ್ ಭಾಷಣಕ್ಕೆ ಕನ್ನಡಿಗರ ಮೆಚ್ಚುಗೆ ವ್ಯಕ್ತವಾಗಿದೆ.