ಉ.ಕ‌ ಸುದ್ದಿಜಾಲ ರಾಯಬಾಗ :

ಕುಡಚಿ ಪಟ್ಟಣದಲ್ಲಿ ನಿನ್ನೆ ಸುರಿದ ಧಾರಾಕಾರ ಮಳೆ,‌ಒಂದೇ ಗಂಟೆಯಲ್ಲಿ ಜಲಾವೃತಾದ ಕುಡಚಿ ಪಟ್ಟಣ. ಮಳೆ ಆರ್ಭಟಕ್ಕೆ ಬೆಚ್ಚಿಬಿದ್ದ ಕುಡಚಿ ಪಟ್ಟಣದ ನಿವಾಸಿಗಳು‌ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಪಟ್ಟಣ.

ನಿನ್ನೆ ಸಾಯಂಕಾಲ ಸುರಿದ ಭೀಕರ ಮಳೆಗೆ ಜನ ಹೈರಾಣು, ನದಿಯಂತೆ ಹರಿದು ಬಂದ ಮಳೆ ನೀರು ಅಲ್ಲೋಲ ಕಲ್ಲೋಲ ಸೃಷ್ಟಿ. ಹಳ್ಳಕೊಳ್ಳದಿಂದ ಹರಿದು ಅಪಾರ ಪ್ರಮಾಣದ ಮಳೆ ನೀರು. ಮಳೆ ನೀರಿನ ಸೆಳೆತಕ್ಕೆ ಕೊಚ್ಚಿ ಹೋಗುತ್ತಿದ್ದ ಜಾನುವಾರುಗಳು.

ತಗ್ಗು ಪ್ರದೇಶದ ಮನೆಗಳಿಗೆ ನುಗ್ಗಿದ ಮಳೆ ನೀರು ಕುಟುಂಬಸ್ಥರ ಪರದಾಟ. ಎರೆಡು ಗಂಟೆಗೂ ಅಧಿಕ ಸುರಿದ ಭೀಕರ ಮಳೆಗೆ ಜನ ಜೀವನ ಸಂಪೂರ್ಣ ಅಸ್ತವ್ಯಸ್ತ. ಹಳ್ಳ-ಕೊಳ್ಳ, ಚರಂಡಿಯಿಂದ ಮನೆಗಳಿಗೆ ನುಗ್ಗಿದ ಮಳೆ ನೀರು.

ಹೊಲ ಗದ್ದೆಗಳು ತುಂಬಿ ಜಮೀನುಗಳಿಂದ ರಸ್ತೆಗೆ ಹರಿದು ಬಂದ ಮಳೆ ನೀರು. ಮಳೆ ನೀರಿಗೆ ರಸ್ತೆ ಚರಂಡಿಗಳೆಲ್ಲ ಸಂಪೂರ್ಣ ಜಲಾವೃತ. ಇತ್ತ ರಸ್ತೆ ಕಾಣಿಸದೆ ಪರದಾಡಿದ ವಾಹನ ಸವಾರರು. ಜಲಪಾತದಂತೆ ತುಂಬಿ ಹರಿದ ರಸ್ತೆ ಬ್ರಿಡ್ಜ್ ಗಳು.

ಕುಡಚಿ- ಚಿಂಚಲಿ ಮಧ್ಯದ ರಸ್ತೆ ಸಂಚಾರ ಬಂದ್ ಆಗಿ ಪ್ರಯಾಣಿಕರ ಪರದಾಟ. ಅಪಾಯವನ್ನು ಲೆಕ್ಕಿಸದೆ ರಸ್ತೆ ಬ್ರಿಡ್ಜ್ ದಾಟಿದ ವಾಹನ ಸವಾರರು. ರೈಲು ನಿಲ್ದಾಣದಲ್ಲಿಯೂ ಹಳಿ ತುಂಬಿ ನಿಂತ ಮಳೆ ನೀರು. ಮಳೆ ಅವಾಂತರಕ್ಕೆ ಪಟ್ಟಣದಲ್ಲಿ ಅಪಾರ ಪ್ರಮಾಣದ ಹಾನಿ.