ಉ.ಕ ಸುದ್ದಿಜಾಲ ಅಥಣಿ :

ಪಂಚಮಸಾಲಿ 2ಎ ಮೀಸಲಾತಿ ಒತ್ತಾಯಿಸಿ ಸಿಎಂ ಮನೆ ಮುತ್ತಿಗೆ ನಿರ್ಣಯ ಮಾಡಿದ ಪಂಚಮಸಾಲಿ ಸಮಾಜದ ಮುಖಂಡರು ಇದೇ ಸೆ. 20 ರಂದು ಹಾವೇರಿ ಜಿಲ್ಲೆ ಶಿಗ್ಗಾಂವಿಯಲ್ಲಿ ಇರುವ ಸಿಎಂ ಮನೆಗೆ ಮುತ್ತಿಗೆ ತೀರ್ಮಾನ ಮಾಡಿದ್ದಾರೆ.

ಬೆಳಗಾವಿ ಜಿಲ್ಲೆ ಅಥಣಿ ಪಟ್ಟಣದಲ್ಲಿ ಪಂಚಮಸಾಲಿ ಸಮಾಜ ಮುಖಂಡರಿಂದ ಸರ್ಕಾರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಒಂದು ಲಕ್ಷಕ್ಕೂ ಅಧಿಕ ಸಾಮಾಜದ ಬಾಂಧವರು ಸೇರಿ ಪ್ರತಿಭಟನೆ ಎಚ್ಚರಿಕೆ ನೀಡಿದ ಪಂಚಮಸಾಲಿ ಸಮಾಜದ ಮುಂಖಡರು. ಚಿಕ್ಕೋಡಿ ಉಪವಿಭಾಗದ ಪಂಚಮಸಾಲಿ ಸಮಾಜದಿಂದ ಸರ್ಕಾರ ಮೇಲೆ ಆಕ್ರೋಶ. ಸರ್ಕಾರ ಹಲವು ಗಡುವುಗಳು ಮುಗಿದಿದೆ. 2ಎ ಮೀಸಲಾತಿ ನೀಡದೆ ಸತಾಯಿಸುತ್ತಿರು ಸರ್ಕಾರ ಮೇಲೆ ಆಕ್ರೋಶ ವ್ಯಕ್ತಪಡಿಸಿದ ಪಂಚಮಸಾಲಿ ಸಮಾಜದ ತಾಲೂಕು ಅಧ್ಯಕ್ಷ ರಮೇಶ್‌ಗೌಡ ಪಾಟೀಲ.

ರಮೇಶ್‌ಗೌಡ ಪಾಟೀಲ್ – ಪಂಚಮಸಾಲಿ ಸಮಾಜದ ತಾಲೂಕು ಅಧ್ಯಕ್ಷ

ಈ ತಿಂಗಳಲ್ಲಿ ಸರ್ಕಾರ 2ಎ ಮೀಸಲಾತಿ ಘೋಷಣೆ ಮಾಡದಿದ್ದರೆ ಬೃಹತ್ ಪ್ರತಿಭಟನೆ ಮಾಡಲಾಗುವುದು. ಬರುವ ನವೆಂಬರ್ ತಿಂಗಳಲ್ಲಿ ಬೆಂಗಳೂರಿನಲ್ಲಿ 25 ಲಕ್ಷ ಜನ ಸೇರಿ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ ಪಂಚಮಸಾಲಿ ಮುಖಂಡರು.