ಉ.ಕ ಸುದ್ದಿಜಾಲ ಗದಗ :
ಪದೇ ಪದೇ ಕೈಕೊಟ್ಟ ಮೈಕ್, ಸಿಟ್ಟೆಗೆದ್ದ ಸಚಿವ ಸಿ ಸಿ ಪಾಟೀಲ್, ಕಾರ್ಯಕ್ರಮ ಆಯೋಜಕರನ್ನ ಬಿಟ್ಟು ಕೆಇಬಿಯವರ ಮೇಲೆ ಗರಂ ಆದ ಸಚಿವರು, ಮೈಕ್ ಕೈ ಕೊಟ್ಟಿದ್ದಕ್ಕೆ ಕೆಇಬಿ ಸಿಬ್ಬಂದಿ ಮೇಲೆ ಸಚಿವರ ಸಿಟ್ಟು, ಕೆಇಬಿಯವರು ಎಲ್ಲಿದ್ದೀರಿ, ದನಾ ಕಾಯ್ತಿದ್ದೀರಾ… ? ಎಂದ ಸಚಿವ ಸಿ ಸಿ ಪಾಟೀಲ.
ಗದಗ ಜಿಲ್ಲೆಯ ರೋಣ ತಾಲೂಕಿನ ಯರೇಬೇಲೆರಿ ಗ್ರಾಮದಲ್ಲಿ ಪ್ರಧಾನಿ ಮೋದಿಯವರ 72 ನೇ ಹುಟ್ಟುಹಬ್ಬದ ಪ್ರಯುಕ್ತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಸಾರ್ವಜನಿಕರನ್ನ ಉದ್ದೇಶಿಸಿ ಮಾತನಾಡುವಾಗ ಕಟ್ಟಡ ಮೈಕ್ ಮತ್ತೆ ಮಾತು ಮುಂದುವರೆಸಿದಾಗ ಮತ್ತೆ ಕೈ ಕೊಟ್ಟ ಮೈಕ್, ಬಳಿಕ ಮೈಕ್ ಸಮಸ್ಯೆ ಅಂತ ಅರಿತು ಮೈಕ್ ನ್ಯಾವ ಯಾವ ಅವ ಅಂತಾ ಆಯೋಜಕರಿಗೆ ತರಾಟೆಗೆ ತೆಗೆದುಕೊಂಡರು. ಕೆಲ ಸಮಯ ಮೈಕ್ ಇಲ್ಲದೇ ಅಸಹಾಯಕರಂತೆ ಭಾಷಣ ಮಾಡದೇ ನಿಂತ ಸಚಿವರು. ಮೈಕ್ ದುರಸ್ತಿಗೆ ಅತ್ತಿಂದಿತ್ತ ಓಡಾಡಿದ ಕಾರ್ಯಕರ್ತರು.