ಉ.ಕ ಸುದ್ದಿಜಾಲ ಬೆಳಗಾವಿ :
ಬೆಳಗಾವಿ ಮರಾಠಾ ರೆಜಿಮೆಂಟ್ ಮೂಲಕ ಸೇನಾ ನೇಮಕಾತಿ ರ್ಯಾಲಿ ಬೆಳಗಾವಿ ನಗರದ ಕ್ಯಾಂಪ್ ಪ್ರದೇಶದಲ್ಲಿ ನಡೆಯುತ್ತಿರುವ ಓಪನ್ ರ‌್ಯಾಲಿ ಇಂದು ಮಹಾರಾಷ್ಟ್ರ ಮತ್ತು ಉತ್ತರ ಕರ್ನಾಟಕ ಭಾಗದ ಅಭ್ಯರ್ಥಿಗಳ ಆಯ್ಕೆ.
ಓಪನ್ ರ‌್ಯಾಲಿ ಹಿನ್ನೆಲೆ ಸುಮಾರು ಮೂವತ್ತು ಸಾವಿರಕ್ಕೂ ಅಧಿಕ ಯುವಕರು ಭಾಗಿ. ಏಕಾಏಕಿ ಯುವಕರು ಸೇರಿದ್ದರಿಂದ ನೂಕು ನುಗ್ಗಲು, ತಳ್ಳಾಟ ನೂಕಾಟ ವೇಳೆ ಇಬ್ಬರು ಯುವಕರಿಗೆ ಗಾಯ. ನೂಕು ನುಗ್ಗಲು ಹಿನ್ನೆಲೆ ಪೊಲೀಸರು ಹಾಗೂ ಸೈನಿಕರಿಂದ ಲಘು ಲಾಠಿ ಪ್ರಹಾರ
ಲಾಠಿ ಬೀಸಿ ಮೂಲಕ ಅಭ್ಯರ್ಥಿಗಳನ್ನು ಸಾಲಾಗಿ ನಿಲ್ಲಿಸುತ್ತಿರುವ ಪೊಲೀಸರು, ಮಿಲಿಟರಿ ಸಿಬ್ಬಂದಿ. ಲಾಠಿ ಬೀಸುತ್ತಿದ್ದಂತೆ ಅತ್ತಿಂದಿತ್ತ ಓಡಾಡಿದ ಯುವಕರು ಕ್ಯಾಂಪ್ ಪೊಲೀಸರಿಂದ ಸ್ಥಳದಲ್ಲಿ ಬಂದೋಬಸ್ತ್.