ಉ.ಕ ಸುದ್ದಿಜಾಲ ಬೆಳಗಾವಿ :

ಕ್ಷುಲಕ ಕಾರಣಕ್ಕೆ ಪತ್ನಿಯನ್ನೇ ಭೀಕರವಾಗಿ ಹತ್ಯೆಗೈದು ತಾನು ಆತ್ಮಹತ್ಯೆಗೆ ಶರಣಾದ ಪತಿ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ತುರಕರಶೀಗಿಹಳ್ಳಿ ಗ್ರಾಮದಲ್ಲಿ ಘಟನೆ. ಶಿವಪ್ಪ ಸಣ್ಣಬಸಪ್ಪ ಕಂಬಳಿ( 46) ಕೊಲೆ ಮಾಡಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಯಲ್ಲವ್ವ ಶಿವಪ್ಪ ಕಂಬಳಿ(40) ಕೊಲೆಯಾದ ದುರ್ದೈವಿ.

ತವರು ಮನೆಗೆ ಹೋಗುವ ಹೆಂಡತಿ ಜೊತೆಗೆ ಗಲಾಟೆ ಮಾಡಿದ್ದ ಶಿವಪ್ಪ. ತಾಯಿ ಸತ್ತು ಒಂದು ವಾರದ ಆಗಿದೆ, ಹೋಗಿ ಬರ್ತೇನಿ ಎಂದಿದ್ದನಂತೆ ಯಲ್ಲವ್ವ. ಸಾವಿನ ನಂತರ ಧಾರ್ಮಿಕ ವಿಧಿ ವಿಧಾನಗಳನ್ನು ಪೂರೈಸಲು ಸಿಹಿ ಅಡುಗೆ ಮಾಡಿಕೊಂಡು ತವರು ಮನೆಗೆ ಹೊರಟ್ಟಿದ್ದ ಯಲ್ಲವ್ವ.

ಆದರೇ ತವರು ಮನೆಗೆ ಹೋಗದಂತೆ ತಾಕೀತು ಮಾಡಿದ್ದ ಕೊಲೆ ಆರೋಪಿ ಶಿವಪ್ಪ. ಈ ವೇಳೆ ಸ್ನಾನಕ್ಕೆ ಹೋಗುವಾಗ ಕುತ್ತಿಗೆ, ಬೆನ್ನಿಗೆ ಕೊಡ್ಲಿಯಿಂದ ಹಲ್ಲೆಗೈದು ಭೀಕರ ಹತ್ಯೆ. ಬೆಳಿಗ್ಗೆ ಮಗನಿಗೆ ಅಡುಗೆ ಮಾಡಿಟ್ಟು ತಾನೂ ಊರಿಗೆ ಹೊರಟ್ಟಿದ್ದ ಯಲ್ಲವ್ವ. ಘಟನಾ ಸ್ಥಳಕ್ಕೆ ಕಿತ್ತೂರು ಸಿಪಿಐ ಶಿವಾನಂದ ಗುಡಗನಟ್ಟಿ ಭೇಟಿ,ಪರಿಶೀಲನೆ. ಕಿತ್ತೂರು ಪೊಲೀಸರ ಠಾಣಾ ವ್ಯಾಪ್ತಿಯಲ್ಲಿ ಘಟನೆ.