ಉ.ಕ ಸುದ್ದಿಜಾಲ ಬೆಳಗಾವಿ :
ಎಂಇಎಸ ಮುಖಂಡ, ರೌಡಿಶೀಟರ್Vidio ಗೆ ಗಡಿ ಪಾರು ತೂಗುಗತ್ತಿ ಬೆಳಗಾವಿ ನಗರ ಪೊಲೀಸರಿಗೆ ಚಾಲೆಂಜ್ ಮಾಡಿದ್ದ ನಾಡದ್ರೋಹಿ ಜೈಲಿನಿಂದ ಹೊರ ಬಂದ ತಕ್ಷಣವೇ ಗಡಿ, ಭಾಷಾ ವಿವಾದ ಹೋರಾಟ ನಿಲ್ಲಿಸುವುದಿಲ್ಲ ಎಂದಿದ್ದ ಎಷ್ಟೇ ಎಚ್ಚರಿಕೆ, ವಾರ್ನಿಂಗ್ ಕೊಟ್ಟರೂ ಪುಂಡಾಟ್ ನಿಲ್ಲಿಸದ ಎಂಇಎಸ ಪುಂಡ.
ಎಂಇಎಸ ಮುಖಂಡ, ರೌಡಿಶೀಟರ್ ಶುಭಂ ಶಳಕೆ ಗಡಿ ಪಾರು ನೋಟಿಸ್ ಜಾರಿ ಬೆಳಗಾವಿ ಡಿಸಿಪಿ ರೋಹನ್ ಜಗದೀಶ್ ಮುಂದೆ ಹಾಜರಾಗಲು ಸೂಚನೆ ಏಪ್ರಿಲ್ 2 ರಂದ ಬೆಳಗ್ಗೆ 10 ಗಂಟೆಗೆ ಖುದ್ದು ಅಥವಾ ವಕೀಲರ ಮೂಲಕ ಹಾಜರಾಗಲು ಸೂಚನೆ.
ಮೊನ್ನೆಯಷ್ಟೇ ಕನ್ನಡಿಗರನ್ನ ನಿಂದಿಸಿದ್ದ ಶುಭಂ ಶಳಕೆಯನ್ನ ಜೈಲಿಗೆ ಕಳುಹಿಸಿದ್ದ ಪೊಲೀಸರು. ಜಾಮೀನಿನ ಮೇಲೆ ಹೊರ ಬಂದ ಬಳಿಕವು ಜೈಲು ಮುಂದೆ ನಿಂತು ಜೈ ಮಹಾರಾಷ್ಟ್ರ ಘೋಷಣೆ ಹಾಕಿದ್ದ ಪದೇ ಪದೇ ಕನ್ನಡ ಮರಾಠಿ ಭಾಷಿಕರ ಮಧ್ಯೆ ಶಾಂತತೆ ಕದಡುವ ಯತ್ನ.
ಖಡೇಬಜಾರ್ ಎಸಿಪಿ ಕೊಟ್ಟ ವರದಿ ಆಧರಿಸಿ ಗಡಿಪಾರು ನೋಟಿಸ್ ಜಾರಿ ಈತನ ವಿರುದ್ಧ ಮಾಳಮಾರುತಿ, ಕ್ಯಾಂಪ್, ಖಡೇಬಜಾರ್, ಟಿಳಕವಾಡಿ ಪೊಲೀಸ್ ಠಾಣೆ ಸೇರಿ 8 ಕೇಸ್ ಗಳಿವೆ. ಮೊನ್ನೆಯಷ್ಟೇ ಕೋಮುಗಲಭೆ ಸೃಷ್ಟಿಸುವ 12 ಜನ ರೌಡಿಶೀಟರ್ ಗಳನ್ನ ಗಡಿ ಪಾರು ಮಾಡಿರೋ ಪೊಲೀಸರು.
ಬೆಳಗಾವಿ ಪೊಲೀಸ್ ಕಮೀಷನರ್ ಯಡಾ ಮಾರ್ಟಿನ್ ರಿಂದ ಗಡಿ ಪಾರು ಗಡಿ, ಭಾಷಾ ಹೆಸರಿನಲ್ಲಿ ಶಾಂತಿ ಭಂಗ ಮಾಡ್ತಿರೋ ಪುಂಡನಿಗೆ ಗಡಿ ಪಾರು ನೋಟಿಸ್ ಜಾರಿ. ಗಡಿ ಪಾರು ನೋಟಿಸ್ ಜಾರಿ ಮಾಡ್ತಿದ್ದಂತೆ ಮಹಾರಾಷ್ಟ್ರ ಪಲಾಯನ ಮಾಡಿರೋ ಆರೋಪಿ.

