ಉ.ಕ ಸುದ್ದಿಜಾಲ ರಾಯಬಾಗ :

ಗಂಡ ಹೆಂಡತಿ ಜಗಳ, ಹೆಂಡತಿ ಹೊಟ್ಟೆಗೆ ಚೂರಿ ಇರಿತ, ಭಯಗೊಂಡು ಆತ್ಮಹತ್ಯೆಗೆ ಶರಣಾದ ಗಂಡ ಇತದೊಂದು ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕಪ್ಪಲಗುದ್ದಿ ಗ್ರಾಮದಲ್ಲಿ ನಡೆದಿದೆ.

ಕಪ್ಪಲಗುದ್ದಿ ಗ್ರಾಮದ ನಿವಾಸಿ ಪರಪ್ಪ (ಪ್ರಭು) ರಾಮಪ್ಪ ಮೇತ್ರಿ (48) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಗಂಡ -ಹೆಂಡತಿ ಮಧ್ಯದಲ್ಲಿ ಆಗಾಗ ಸಣ್ಣ ಪುಟ್ಟ ಜಗಳ ಹಿನ್ನಲೆ ಜಗಳವು ವಿಕೋಪಕ್ಕೆ ಹೋದ ಕಾರಣ ಪತ್ನಿ ಪಾರ್ವತಿ ಮೇತ್ರಿ ಹೊಟ್ಟೆಗೆ ಚೂರಿಯಿಂದ ಇರಿದು ಪ್ರಭು ಮೇತ್ರಿ ಪರಾರಿಯಾಗಿದ್ದ.

ರಕ್ತದ ಮಡುವಿನಲ್ಲಿ ಬಿದ್ದ ಪಾರ್ವತಿಯನ್ನು ಹತ್ತಿರದ ಸಂಬಂಧಿಕರು ಗೋಕಾಕ ಖಾಸಗಿ ಆಸ್ಪತ್ರೆಗೆ ದಾಖಲಿಸದ್ದರು. ಈ ಘಟನೆಯಿಂದ ಮನನೊಂದು, ಭಯಗೊಂಡ ಪ್ರಭು ಮಧ್ಯರಾತ್ರಿ ಕಪ್ಪಲಗುದ್ದಿ ಗ್ರಾಮದ ಹತ್ತಿರ ಗುರು ಮರಡಿ ಅವರ ತೋಟದ ಬೇವಿನ ಗಿಡಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣು. ಈ ಕುರಿತು ಹಾರೂಗೇರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು