ಉ.ಕ ಸುದ್ದಿಜಾಲ ಬೆಳಗಾವಿ :
ಪತ್ನಿ, ಅಳಿಯನ ಎದುರೇ ಕತ್ತು ಕೊಯ್ದುಕೊಂಡು ಪತಿ ಸಾವು. ಕುಡಗೋಲಿನಿಂದ ಕತ್ತು ಕೊಯ್ದು ಸಾವನ್ನಪ್ಪಿದ ಗಂಡ. ಬೆಳಗಾವಿ ತಾಲೂಕಿನ ಹೊನ್ನಿಹಾಳ ಗ್ರಾಮದಲ್ಲಿ ಘಟನೆ.
ಮಲ್ಲಪ್ಪ ಕಟಬುಗೋಳ(35) ತನ್ನ ಕತ್ತ ತಾನೇ ಕೊಯ್ದುಕೊಂಡ ಸತ್ತ ವ್ಯಕ್ತಿ. ನಿನ್ನೆ ದಿನ ಮನೆಯಲ್ಲಿದ್ದ ಅಕ್ಕಿ ಮಾರಿ ಸಾರಾಯಿ ಕುಡಿದು ಬಂದು ಗಂಡ ಗಲಾಟೆ. ರಾತ್ರಿಯಿಡೀ ಹೆಂಡತಿ ರೇಖಾ ಜೊತೆಗೆ ಗಲಾಟೆ ಮಾಡಿ ಹಲ್ಲೆ.
ಸಹೋದರನ ಕರೆಯಿಸಿ ಬುದ್ದಿ ಹೇಳಿಸಿದ್ದ ಪತ್ನಿ. ಈ ವೇಳೆ ಅಳಿಯ ಮಲ್ಲಿಕಾರ್ಜುನ ನಿಂದ ಮಾವನ ಮೇಲೆ ಕಟ್ಟಿಗೆಯಿಂದ ಹಲ್ಲೆ. ಹಲ್ಲೆ ಮಾಡ್ತಿದ್ದಂತೆ ಮನೆಯಲ್ಲಿದ್ದ ಕುಡಗೋಲು ಹಿಡಿದು ಸಾಯುವ ಬೆದರಿಕೆ.
ನೀನು ಸತ್ರೆ ಅಕ್ಕ ಚೆನ್ನಾಗಿರ್ತಾಳೆ ಎಂದ ಅಳಿಯ ಮಲ್ಲಿಕಾರ್ಜುನ. ಹೀಗೆ ಹೇಳ್ತಿದ್ದಂತೆ ಕ್ಷಣಾರ್ಧದಲ್ಲೇ ಕತ್ತು ಕೊಯ್ದುಕೊಂಡು ತೀವ್ರ ರಕ್ತಸ್ರಾವವಾಗಿ ಮಲ್ಲಪ್ಪ ಸಾವು. ಮಲ್ಲಪ್ಪ ಸಾಯುತ್ತಿದ್ದಂತೆ ಪರಾರಿಯಾದ ಅಳಿಯ ಮಲ್ಲಿಕಾರ್ಜುನ.
ಸ್ಥಳಕ್ಕೆ ಮಾರಿಹಾಳ ಠಾಣೆ ಪೊಲೀಸರು ಭೇಟಿ ಪರಿಶೀಲನೆ. ಆತ್ಮಹತ್ಯೆಗೆ ಪ್ರಚೋದನೆ ಕೇಸ್ ದಾಖಲಿಸಿಕೊಂಡು ಪೊಲೀಸರ ತನಿಖೆ. ಮರಣೋತ್ತರ ಪರೀಕ್ಷೆಗೆ ಬಿಮ್ಸ್ ಆಸ್ಪತ್ರೆ ಶವಾಗಾರಕ್ಕೆ ಮೃತದೇಹ ಶಿಪ್ಟ್.
ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಅಳಿಯ ಮಲ್ಲಿಕಾರ್ಜುನ ವಿರುದ್ಧ ಎಫ್ಐಆರ್.
ಪತ್ನಿ, ಅಳಿಯನ ಎದುರೇ ಕತ್ತು ಕೊಯ್ದುಕೊಂಡು ಪತಿ ಸಾವು
