ಉ.ಕ ಸುದ್ದಿಜಾಲ ವಿಜಯಪುರ :
ಪತ್ನಿ ಪ್ರಿಯಕರನೊಂದಿಗೆ ಸೇರಿ ಪತಿ ಕೊಲ್ಲಲು ಯತ್ನ ಕೇಸ್ ಗಂಡನ ಕೊಲೆ ಯತ್ನ, ಪತ್ನಿ ಅರೆಸ್ಟ್, ಪತ್ನಿಯ ಪ್ರೇಮಿ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ. ಲವ್ವರ್ ಜೊತೆ ಸೇರಿ ಗಂಡನನ್ನೇ ಕೊಲೆ ಮಾಡಲು ಯತ್ನಿಸಿದ ಪತ್ನಿ ಪ್ರಕರಣ.
ವಿಜಯಪುರ ಜಿಲ್ಲೆ ಇಂಡಿ ಪಟ್ಟಣದಲ್ಲಿ ಕಳೆದ ಸಪ್ಟೆಂಬರ್ 1 ರಂದು ನಡೆದಿದ್ದ ಘಟನೆ. ಬೀರಪ್ಪ ಮಾಯಪ್ಪ ಪೂಜಾರಿ (36) ಕೊಲ್ಲಲು ಪ್ರಿಯಕರನೊಂದಿಗೆ ಸೇರಿ ಯತ್ನಿಸಿದ ಪತ್ನಿ ಸುನಂದಾ. ಇಂಡಿ ಪಟ್ಟಣದ ಅಕ್ಕಮಹಾದೇವಿ ನಗರದಲ್ಲಿ ನಡೆದಿದ್ದ ಘಟನೆ. ಸುನಂದಾ ಪ್ರಿಯಕರ ಸಿದ್ದಪ್ಪ ಕ್ಯಾತಕೇರಿಯಿಂದ ಪತಿ ಕೊಲೆ ಮಾಡಿಸಲು ಯತ್ನ.
ಮೂಲತಃ ಅಂಜುಟಗಿ ಗ್ರಾಮದ ಕುಟುಂಬ ಇಂಡಿ ಪಟ್ಟಣದ ಅಕ್ಕಮಹಾದೇವಿ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಬೀರಪ್ಪ ಕುಟುಂಬ. ಘಟನೆ ಬಹಿರಂಗವಾಗಿ ಈಗಾಗಲೇ ಜೈಲು ಪಾಲಾಗಿರೋ ಸುನಂದಾ. ಈ ವೇಳೆ ನಾಪತ್ತೆಯಾಗಿ ಅಜ್ಞಾತ ಸ್ಥಳದಿಂದ ವಿಡಿಯೋ ಮಾಡಿ ಸುನಂದಾಳದ್ದೇ ತಪ್ಪು ಎಂದಿದ್ದ ಸಿದ್ದಪ್ಪ.
ನಿನ್ನೆ ನೇಣು ಬಿಗಿದ ಸ್ಥಿತಿಯಲ್ಲಿ ಸಿದ್ದಪ್ಪ ಕ್ಯಾತಕೇರಿ ಶವ ಪತ್ತೆ, ಇಂಡಿ ತಾಲೂಕಿನ ಅಂಜುಟಗಿ ಗ್ರಾಮದ ಹೊರ ವಲಯದಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಸಿದ್ದಪ್ಪ ಶವ ಪತ್ತೆ. ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರೋ ಸಿದ್ದಪ್ಪ ಕ್ಯಾತಕೇರಿ ಶವ. ಸ್ಥಳಕ್ಕೆ ಝಳಕಿ ಪೊಲೀಸರು ಹಾಗೂ ಹಿರಿಯ ಅಧಿಕಾರಿಗಳ ಭೇಟಿ.
ಸ್ಥಳದಲ್ಲಿ ಸಿದ್ದಪ್ಪ ಕುಟುಂಬಸ್ಥರ ಆಕ್ರಂದನ. ಝಳಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ. ಬೀರಪ್ಪನ ಪತ್ನಿ ಸುನಂದಾ, ಸಿದ್ದಪ್ಪ ಕ್ಯಾತಕೇರಿ ಎಂಬಾತನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು. ತಮ್ಮ ಸಂಬಂಧಕ್ಕೆ ಪತಿ ಅಡ್ಡವಾಗುತ್ತಿದ್ದಾನೆಂದು ಪ್ಲ್ಯಾನ್ ಮಾಡಿದ ಪತ್ನಿ ಸುನಂದಾ. ಪತಿ ಮಲಗಿದ್ದಾಗ ಪ್ರಿಯಕರ ಸಿದ್ದಪ್ಪನ ಜೊತೆಗೆ ಮತ್ತೊಬ್ಬನನ್ನು ಕರೆಯಿಸಿ ಕೊಲೆಗೆ ಯತ್ನವಾಗಿತ್ತು.
ಕೊಲೆ ಮಾಡಿವಾಗ ಶಬ್ದವಾದ ಕಾರಣ ಮನೆ ಮಾಲೀಕರು ಬಂದಿದ್ದ ಕಾರಣ ಬೀರಪ್ಪ ಕೊಲೆ ವಿಫಲ ನಂತರ ಪೊಲೀಸರು ತನಿಖೆ ನಡೆಸಿ ಬೀರಪ್ಪನ ಪತ್ನಿ ಸುನಂದಾ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಈ ವೇಳೆ ಅಜ್ಞಾತ ಸ್ಥಳದಿಂದ ವಿಡಿಯೋ ಮಾಡಿ ಹರಿಬಿಟ್ಟಿದ್ದ ಸಿದ್ದಪ್ಪ ಕ್ಯಾತಕೇರಿ.
ಸುನಂದಾ ಮಾತು ಕೇಳಿಯೇ ನಾನು ಹಾಗೆ ಮಾಡಿದ್ದು. ಸುನಂದಾಳೆ ಆಕೆಯ ಗಂಡನನ್ನು ಕೊಲೆ ಮಾಡೋ ಪ್ಲ್ಯಾನ್ ಮಾಡಿದ್ದಳು. ನಾಲ್ಕಾರು ಜನರು ಕೂಡಿ ಕೊಲೆ ಮಾಡೋಣವೆಂದು ಹೇಳಿದ್ದರೂ ನೀನೊಬ್ಬನೇ ಬಾ ಎಂದು ಹೇಳಿದ್ದಳು ಎಂದು ಮಾತನಾಡಿದ್ದ ಸಿದ್ದಪ್ಪ.
ಬೀರಪ್ಪ ಕೊಲೆ ಪ್ರಕರಣದಲ್ಲಿ ನನ್ನ ಸಿಲುಕಿಸಲಾಗುತ್ತಿದೆ ಎಂದು ಸಂಶಯ ವ್ಯಕ್ತಪಡಿಸಿದ್ದ ಸಿದ್ದಪ್ಪ. ಪ್ರೇಯಸಿ ಸುನಂದಾ, ಆಕೆಯ ಸಹೋದರ,ಸ್ಥಳೀಯ ಗ್ರಾಮ ಪಂಚಾಯತಿ ಸದಸ್ಯನೋರ್ವ ನನ್ನ ಸಿಲುಕಿಸುತ್ತಿದ್ದಾರೆ. ಸುನಂದಾ ಮೇಲೆ ಅನುಮಾನ ಹೊರ ಹಾಕಿದ್ದ ಸಿದ್ದಪ್ಪ.
ಪೊಲೀಸರ ಕೈಗೆ ಸಿಗದೇ ಅಜ್ಞಾತ ಸ್ಥಳದಿಂದಲೇ ಮಾತನಾಡಿ ವಿಡಿಯೋ ಹರಿ ಬಿಟ್ಟಿದ್ದ ಸಿದ್ದಪ್ಪ. ಈಗ ನೇಣು ಬಿಗಿದ ಸ್ಥಿತಿಯಲ್ಲಿ ಸಿದ್ದಪ್ಪ ಶವ ಪತ್ತೆ. ಪೊಲೀಸರ ತನಿಖೆಯಲ್ಲಿ ಇಡೀ ಪ್ರಕರಣ ಸತ್ಯಾಸತ್ಯತೆ ಬಯಲಿಗೆ ಬರಲಿದೆ…
ಗಂಡನ ಕೊಲೆ ಯತ್ನ, ಪತ್ನಿ ಅರೆಸ್ಟ್, ಪತ್ನಿಯ ಪ್ರೇಮಿ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ – ಇಲ್ಲಿದೆ ಸಂಪೂರ್ಣ ಮಾಹಿತಿ
