ಉ.ಕ ಸುದ್ದಿಜಾಲ ಧಾರವಾಡ‌ :

ಅಯ್ಯಪ್ಪನ ದರ್ಶನಕ್ಕೆ ತೆರಳಿದ್ದ ಧಾರವಾಡದ 10 ವರ್ಷ ಬಾಲಕ ಅಪಘಾತದಲ್ಲಿ ಸಾವನಪ್ಪಿದ್ದಾನೆ. ಕೇರಳದ ಮಣ್ಣಪುರಂ ಜಿಲ್ಲೆಯ ಎಡಪ್ಪಾಲ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸಾವು.

ಜನೆವರಿ 01 ರಂದು ಧಾರವಾಡದ ಸೈದಾಪುರದಿಂದ ಅಯಪ್ಪ ದರ್ಶನಕ್ಕೆ ತೆರಳಿದ್ದರು. ದರ್ಶನ ಪಡೆದು ವಾಪಸ್ ಬರುವಾಗ ಅಪಘಾತ ಅಪಘಾತದಲ್ಲಿ 10ವರ್ಷದ ಮಗು ಸುಮಿತ ಪಾಂಡೆ ಸ್ಥಳದಲ್ಲೇ ಸಾವನಪ್ಪಿದ ಬಾಲಕ.

ಇನ್ನು ಅಪಘಾತದಲ್ಲಿ ಮೂವರಿಗೆ ಗಂಭೀರ ಗಾಯ, ಅವರನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾದಲ್ಲಿ ಸೂರಜ್ ಪಾಂಡೆ, ನಿಖಿಲ ಪಾಂಡೆ, ಸುಶಾಂತ ಪಾಂಡೆಗೆ ತೀವ್ರ ಗಾಯ.

ವಿಷಯ ತಿಳಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕೇರಳದ ಆರೋಗ್ಯ ಇಲಾಖೆ ಹಾಗೂ ಜಿಲ್ಲಾಧಿಕಾರಿಗಳ ಜೊತೆ ಚರ್ಚೆ ತೀವ್ರ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಕೇಂದ್ರ ಸಚಿವರಿಂದ ಸೂಚನೆ. ಮೃತ ಸುಮಿತ್ ಪಾಂಡೆಯ ಪಾರ್ಥಿವ್ ಶರೀರ ಧಾರವಾಡಕ್ಕೆ ತರಲು ಸಿದ್ಧತೆ.