ಉ.ಕ ಸುದ್ದಿಜಾಲ ಹುಬ್ಬಳ್ಳಿ : 

ಬೇಸಿಗೆ ಅವಧಿಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಿಸಲು ನೈಋತ್ಯ ರೈಲ್ವೆಯು ಬೆಳಗಾವಿ- ಮವೂ (Belagavi-Mau) ನಡುವೆ 6 ಟ್ರಿಪ್ ಮತ್ತು ಹುಬ್ಬಳ್ಳಿ – ಕಟಿಹಾರ್ (Hubli – Katihar) ನಡುವೆ 4 ಟ್ರಿಪ್ ಬೇಸಿಗೆ ವಿಶೇಷ ರೈಲುಗಳನ್ನು ಓಡಿಸಲಿದೆ. ಈ ವಿಶೇಷ ರೈಲುಗಳ ಸೇವೆ ಈ ಕೆಳಗಿನಂತಿವೆ.

1. ಬೆಳಗಾವಿ-ಮವೂ ನಡುವೆ 6 ಟ್ರಿಪ್ ವಿಶೇಷ ರೈಲು (07327/07328) ಸಂಚಾರ: ರೈಲು ಸಂಖ್ಯೆ 07327 ಏಪ್ರಿಲ್ 6 ರಿಂದ ಮೇ 11, 2025ರವರೆಗೆ ಪ್ರತಿ ಭಾನುವಾರ ಬೆಳಗಾವಿಯಿಂದ ಬೆಳಿಗ್ಗೆ 11:30 ಗಂಟೆಗೆ ಹೊರಟು, ಮಂಗಳವಾರ ಬೆಳಿಗ್ಗೆ10:30 ಗಂಟೆಗೆ ಉತ್ತರ ಪ್ರದೇಶದ ಮವೂ ನಿಲ್ದಾಣ ತಲುಪಲಿದೆ. ಇದೇ ರೈಲು (07328) ಏಪ್ರಿಲ್ 9 ರಿಂದ ಮೇ 14, 2025ರವರೆಗೆ ಪ್ರತಿ ಬುಧವಾರ ಮವೂ ನಿಲ್ದಾಣದಿಂದ ರಾತ್ರಿ 8:00 ಗಂಟೆಗೆ ಹೊರಟು, ಶುಕ್ರವಾರ ಸಾಯಂಕಾಲ 5:00 ಗಂಟೆಗೆ ಬೆಳಗಾವಿ ನಿಲ್ದಾಣಕ್ಕೆ ಆಗಮಿಸಲಿದೆ.

ಈ ರೈಲು ಎರಡೂ ಮಾರ್ಗಗಳಲ್ಲಿ ಲೋಂಡಾ, ಧಾರವಾಡ, ಎಸ್ಎಸ್ಎಸ್ ಹುಬ್ಬಳ್ಳಿ, ಬದಾಮಿ, ಬಾಗಲಕೋಟ, ಆಲಮಟ್ಟಿ, ವಿಜಯಪುರ, ಸೋಲಾಪುರ, ಕುರ್ದುವಾಡಿ, ದೌಂಡ್, ಅಹ್ಮದ್ ನಗರ, ಕೋಪರಗಾಂವ್, ಮನ್ಮಾಡ್, ಜಲಗಾಂವ್, ಭೂಸಾವಲ್, ಖಾಂಡ್ವಾ, ಇಟಾರ್ಸಿ, ಜಬಲ್ಪುರ್, ಕಟ್ನಿ, ಸತ್ನಾ, ಪ್ರಯಾಗರಾಜ್ ಚಿಯೋಕಿ, ಮಿರ್ಜಾಪುರ, ವಾರಣಾಸಿ, ಜೌನ್ಪುರ, ಶಹಗಂಜ್ ಮತ್ತು ಅಜಂಗಢ ನಿಲ್ದಾಣಗಳಲ್ಲಿ ನಿಲ್ಲಲಿದೆ.

ನಿಲುಗಡೆ : ಈ ರೈಲು 2-ಎಸಿ ಟು ಟೈರ್, 5-ಎಸಿ ತ್ರಿ ಟೈರ್, 10-ಸ್ಲೀಪರ್ ಕ್ಲಾಸ್, 2-ಸಾಮಾನ್ಯ ದ್ವಿತೀಯ ದರ್ಜೆ ಮತ್ತು 2-ಎಸ್ಎಲ್ಆರ್ಡಿ ಸೇರಿದಂತೆ 21 ಬೋಗಿಗಳನ್ನು ಒಳಗೊಂಡಿರುತ್ತದೆ.

2. ಹುಬ್ಬಳ್ಳಿ – ಕಟಿಹಾರ್ ನಡುವೆ 4 ಟ್ರಿಪ್ ವಿಶೇಷ (07325/07326) ರೈಲು ಸಂಚಾರ : ರೈಲು ಸಂಖ್ಯೆ 07325 ಏಪ್ರಿಲ್ 9 ರಿಂದ 30, 2025 ರವರೆಗೆ ಪ್ರತಿ ಬುಧವಾರ ಹುಬ್ಬಳ್ಳಿಯಿಂದ ಮಧ್ಯಾಹ್ನ 3:15 ಗಂಟೆಗೆ ಹೊರಟು, ಶುಕ್ರವಾರ ಮಧ್ಯಾಹ್ನ 1:00 ಗಂಟೆಗೆ ಬಿಹಾರ ರಾಜ್ಯದ ಕಟಿಹಾರ್ ನಿಲ್ದಾಣ ತಲುಪಲಿದೆ. ಹಿಂದಿರುಗುವಾಗ ಈ ರೈಲು (07326) ಏಪ್ರಿಲ್ 12 ರಿಂದ ಮೇ 3, 2025 ರವರೆಗೆ ಪ್ರತಿ ಶನಿವಾರ ಕಟಿಹಾರ್ನಿಂದ ಮಧ್ಯಾಹ್ನ 2:30 ಗಂಟೆಗೆ ಹೊರಟು, ಸೋಮವಾರ ಬೆಳಗ್ಗೆ 10:50 ಗಂಟೆಗೆ ಎಸ್ಎಸ್ಎಸ್ ಹುಬ್ಬಳ್ಳಿಗೆ ಆಗಮಿಸಲಿದೆ.

ಈ ರೈಲು ಗದಗ, ಕೊಪ್ಪಳ, ಹೊಸಪೇಟೆ, ತೋರಣಗಲ್ಲು, ಬಳ್ಳಾರಿ, ಗುಂತಕಲ್, ಧೋಣೆ, ನಂದ್ಯಾಳ, ದಿಗುವಮೆಟ್ಟ, ಗುಂಟೂರು, ವಿಜಯವಾಡ, ರಾಜಮಂಡ್ರಿ, ದುವ್ವಾಡ, ಕೊತ್ತವಲಸಾ, ವಿಜಯನಗರಂ, ಶ್ರೀಕಾಕುಳಂ ರೋಡ್, ಪಾಲಸಾ, ಬ್ರಹ್ಮಪುರ, ಖುರ್ದಾ ರೋಡ್, ಭುವನೇಶ್ವರ, ಕಟಕ್, ಭದ್ರಕ್, ಬಾಲೇಶ್ವರ, ಖರಗ್ಪುರ, ಭಟ್ಟನಗರ, ಡನಕುನಿ, ಬೋಲ್ಪುರ್, ರಾಂಪುರ್ ಹಟ ಮತ್ತು ಮಾಲ್ಡಾ ಟೌನ್ ನಿಲ್ದಾಣಗಳಲ್ಲಿ ನಿಲ್ಲಲಿದೆ.

ನಿಲುಗಡೆ ಈ ರೈಲು 2-ಎಸಿ ಟು ಟೈರ್, 16-ಎಸಿ ತ್ರಿ ಟೈರ್ ಮತ್ತು 2-ಲಗೇಜ್/ಜನರೇಟರ್ ಕಾರ್/ ಬ್ರೆಕ್-ವ್ಯಾನ್ ಸೇರಿದಂತೆ 20 ಬೋಗಿಗಳನ್ನು ಒಳಗೊಂಡಿರುತ್ತದೆ.

ಆಸನ ಕಾಯ್ದಿರಿಸುವಿಕೆ, ಪ್ರತಿ ನಿಲ್ದಾಣದಲ್ಲಿ ರೈಲುಗಳ ಆಗಮನ ಮತ್ತು ನಿರ್ಗಮನ ಸಮಯದ ಕುರಿತು ಮತ್ತು ಇತರೇ ಮಾಹಿತಿ ತಿಳಿದುಕೊಳ್ಳಲು, ಪ್ರಯಾಣಿಕರು ಅಧಿಕೃತ ರೈಲ್ವೆ ವೆಬ್ಸೈಟ್ಗೆ ಭೇಟಿ ನೀಡಿ ಅಥವಾ ಹತ್ತಿರದ ರೈಲ್ವೆ ಬುಕಿಂಗ್ ಕೌಂಟರ್ಗಳನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಮಂಜುನಾಥ ‌ಕನಮಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.