ಉ.ಕ ಸುದ್ದಿಜಾಲ ಹುಕ್ಕೇರಿ :
ಕೆಲ ದಿನಗಳ ಹಿಂದೆ ತೀವ್ರ ಕೂತುಹಲಕ್ಕೆ ಕಾರಣವಾಗಿದ್ದ ಹುಕ್ಕೇರಿ ತಾಲೂಕಿನ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿ ಮಾಜಿ ಸಂಸದ ರಮೇಶ ಕತ್ತಿ ವಿರುದ್ಧ ಸೋಲನ್ನಪ್ಪಿದ್ದ ಸಹಕಾರಿ ಧುರೀಣ ರಾಜೇಂದ್ರ ಪಾಟೀಲ ಅವರಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ಬಂಪರ್ ಕೊಡುಗೆ ನೀಡಿದ್ದಾರೆ.
ರಾಜೇಂದ್ರ ಪಾಟೀಲ ಅವರನ್ನ ನಾಮನಿರ್ದೇಶಿತ ಸದಸ್ಯ ಮಾಡುವ ಮೂಲಕ ನಂಬಿದವರನ್ನ ಕೈ ಬಿಡುವದಿಲ್ಲ ಎನ್ನುವ ಸಂದೇಶವನ್ನ ಶಾಸಕ ಬಾಲಚಂದ್ರ ಜಾರಕಿಹೊಳಿ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ರವಾನಿಸಿ ಮಾದರಿಯಾಗಿದ್ದಾರೆ.
ಬೆಳಗಾವಿ ಡಿಸಿಸಿ ಬ್ಯಾಂಕಿನ ಹುಕ್ಕೇರಿ ತಾಲೂಕಿನ ನಿರ್ದೇಶಕ ಸ್ಥಾನವನ್ನ ರಮೇಶ ಕತ್ತಿ ವಿರುದ್ಧ ಗೆಲ್ಲುವದು ಕಷ್ಟವೆಂದು ಗೊತ್ತಿದ್ದರೂ ಬಾಲಚಂದ್ರ ಜಾರಕಿಹೊಳಿ ಹಾಗೂ ಅಣ್ಣಾಸಾಹೇಬ ಜೊಲ್ಲೆ ಅವರ ಮಾತಿಗೆ ಬೆಲೆ ಕೊಟ್ಟು ಚುನಾವಣೆಗೆ ರಾಜೇಂದ್ರ ಪಾಟೀಲ ಸ್ಪರ್ಧೆ ಮಾಡಿದ್ದರು.
ಸೋತಿದ್ದ ರಾಜೇಂದ್ರ ಪಾಟೀಲ ಅವರಿಗೆ ಈಗ ಮತ್ತೆ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನವನ್ನ ಕೊಡುವದ ಮೂಲಕ ರಮೇಶ ಕತ್ತಿ ಅವರಿಗೆ ಬಾಲಚಂದ್ರ ಜಾರಕಿಹೊಳಿ ಕೌಂಟರ್ ನೀಡಿದ್ದಾರೆ.
ಹುಕ್ಕೇರಿ ತಾಲೂಕಿನಲ್ಲಿ ಸಂಘಟನೆ ದೃಷ್ಟಿ ಹಾಗೂ ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ಕತ್ತಿ ಕುಟುಂಬಕ್ಕೆ ಪ್ರಭಲ ಪೈಪೋಟಿ ನೀಡಲು ಈಗಿನಿಂದಲೇ ಜೆ ಜೆ ಕಂಪನಿ ತಯಾರಿ ಆರಂಭಿಸಿದಂತಾಗಿದೆ.
ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕರು ಸರ್ವಾನುಮತದಿಂದ ರಾಜೇಂದ್ರ ಪಾಟೀಲ ಅವರನ್ನ ಕೊ ಆಪ್ಪ ಕಾಯ್ದೆಯಡಿ ನಾಮನಿರ್ದೇಶಿತ ನಿರ್ದೇಶಕರನ್ನಾಗಿ ಇತ್ತಿಚೆಗೆ ನಡೆದ ಸಭೆಯಲ್ಲಿ ಆಯ್ಕೆ ಮಾಡಿದ್ದಾರೆ
ಸಹಕಾರಿ ಧುರೀಣ ರಾಜೇಂದ್ರ ಪಾಟೀಲಗೆ ಒಲಿದ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನ – ನಂಬಿದವರನ್ನ ಕೈ ಬಿಡದ ಜೊಲ್ಲೆ & ಜಾರಕಿಹೊಳಿ


