ಉ.ಕ ಸುದ್ದಿಜಾಲ :
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ದೇಶದ ಮಹತ್ವದ ಸಂಸ್ಥೆಯಾಗಿದ್ದು ಇಲ್ಲಿ ಕೆಲಸ ಮಾಡಲು ಸಾಕಷ್ಟು ಆಕಾಂಕ್ಷಿಗಳು ಕಾಯುತ್ತಿರುತ್ತಾರೆ. ಅದರಂತೆ ಬ್ಯಾಂಕ್ ದೊಡ್ಡ ಮಟ್ಟದಲ್ಲಿ ಅರ್ಜಿಗಳನ್ನು ಆಹ್ವಾನ ಮಾಡಿದೆ. ಈಗಾಗಲೇ ಅರ್ಜಿಗಳು ಆರಂಭವಾಗಿದ್ದು ಆಸಕ್ತರು ಜನವರಿ 7ರ ಒಳಗಾಗಿ ಅಪ್ಲೇ ಮಾಡಬಹುದು.
13,735 ಉದ್ಯೋಗಗಳನ್ನು ಸದ್ಯ ಎಸ್‌ಬಿಐ ಭರ್ತಿ ಮಾಡಲು ನಿರ್ಧರಿಸಿದೆ. ಈ ಬೃಹತ್ ಪ್ರಮಾಣದ ನೇಮಕಾತಿಯಲ್ಲಿ ಕರ್ನಾಟಕಕ್ಕೂ 203 ಹುದ್ದೆಗಳು ಇವೆ. 2024ರ ಕೊನೆಯಲ್ಲಿ ಎಸ್‌ಬಿಐ ದೊಡ್ಡ ಮಟ್ಟದ ಉದ್ಯೋಗ ನೇಮಕ ಬಗ್ಗೆ ನೋಟಿಫಿಕೆಶನ್ ಹೊರಡಿಸಿತ್ತು.
ಅದರಂತೆ ಕೊನೆ ದಿನಾಂಕ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಇಷ್ಟು ದಿನ ಅರ್ಜಿ ಸಲ್ಲಿಸದೇ ಇರುವವರು ಈ ಕೂಡಲೇ ಸಲ್ಲಿಸಬಹುದು.
ಎಸ್‌ಬಿಐ ಜೂನಿಯರ್ ಅಸೋಸಿಯೇಟ್ (Customer Support & Sales)/ Clerk ಈ ಕೆಲಸಕ್ಕೆ ತಿಂಗಳಿಗೆ 24,050 ರಿಂದ 64,480 ರೂಪಾಯಿಗಳ ಸ್ಯಾಲರಿ ನೀಡಲಾಗುತ್ತದೆ. ದೇಶದ್ಯಾಂತ ಒಟ್ಟು 13,735 ಹುದ್ದೆಗಳು ಇವೆ. ಕೇಂದ್ರಾಡಳಿತ ಪ್ರದೇಶ ಲಡಾಖ್‌ನಲ್ಲಿ 50 ಹುದ್ದೆಗಳಿವೆ. ಕರ್ನಾಟಕಕ್ಕೆ 203 ಹುದ್ದೆಗಳು ಇರುತ್ತವೆ.
ಪದವಿಯನ್ನು ಪೂರ್ಣಗೊಳಿಸಿರಬೇಕು
ಈ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಬೇಕು ಎಂದರೆ ಅಭ್ಯರ್ಥಿ ಯಾವುದೇ ವಿಷಯದಲ್ಲಿ ಪದವಿಯನ್ನು ಪೂರ್ಣಗೊಳಿಸಿರಬೇಕು. 20 ರಿಂದ 28 ವಯಸ್ಸು ಆಗಿರಬೇಕು. ಎಸ್‌ಸಿ, ಎಸ್‌ಟಿ, ವಿಶೇಷ ಚೇತನರಿಗೆ ಯಾವುದೇ ಶುಲ್ಕ ಇರುವುದಿಲ್ಲ. ಆದರೆ ಜನರಲ್, ಒಬಿಸಿ ಹಾಗೂ ಇಡಬ್ಲ್ಯುಎಸ್ ಸೇರಿ ಉಳಿದವರು 750 ರೂಪಾಯಿಗಳನ್ನು ಬ್ಯಾಂಕ್‌ಗೆ ಪಾವತಿಸಬೇಕು.
ಇನ್ನು ಆಯ್ಕೆ ಪ್ರಕ್ರಿಯೆಗೆ ಬಂದರೆ ಮೊದಲು ಪೂರ್ವಭಾವಿ ಪರೀಕ್ಷೆ (Preliminary Exam), ಬಳಿಕ ಮುಖ್ಯ ಪರೀಕ್ಷೆ (Mains Exam) ಹಾಗೂ ಭಾಷಾ ಪ್ರಾವೀಣ್ಯತೆ ಪರೀಕ್ಷೆ ಎಂದು 3 ಹಂತದಲ್ಲಿ ಎಕ್ಸಾಂ ಇರುತ್ತವೆ. ಈ ಪರೀಕ್ಷೆಗಳಲ್ಲಿ 4 ಪ್ರಶ್ನೆಗಳನ್ನು ತಪ್ಪಾಗಿ ಟಿಕ್ ಮಾಡಿದರೆ 1 ಅಂಕ ಕಡಿತ ಮಾಡಲಾಗುತ್ತದೆ. ಈ ಎಸ್‌ಬಿಐ ಅರ್ಜಿಗಳು 17 ಡಿಸೆಂಬರ್‌ನಲ್ಲಿ ಆರಂಭವಾಗಿದ್ದು 7 ಜನವರಿಯಂದು ಕೊನೆಗೊಳ್ಳುತ್ತವೆ. ಅರ್ಜಿ ಸಲ್ಲಿಕೆಗೆ ವೆಬ್‌ಸೈಟ್- https:// ibpsonline.ibps.in/sbidrjadec24/