ಉ.ಕ ಸುದ್ದಿಜಾಲ ಐನಾಪೂರ :

ಮುಂದಿನ ಸ್ಪರ್ಧಾತ್ಮಕ ಯುಗದಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಆಂಗ್ಲ ಭಾಷೆಯಲ್ಲಿ ಪ್ರಭುತ್ವ ಹೊಂದುವುದು ಸ್ವಲ್ಪ ಕಷ್ಟ ಆದರೆ ಐನಾಪೂರ ಪದ್ಮಾವತಿ ಸೆಂಟ್ರಲ್ ಶಾಲೆಯಲ್ಲಿ ಸಿಬಿಎಸ್‌ಸಿ ಸೇರಿದಂತೆ ಕನ್ನಡದೊಂದಿಗೆ ಇಂಗ್ಲಿಷ್ ಭಾಷೆಯಲ್ಲಿ ಒಳ್ಳೆಯ ಶಿಕ್ಷಣ ನೀಡುತ್ತಿದ್ದರಿಂದ ಈ ಶಾಲೆಯ ವಿದ್ಯಾರ್ಥಿಗಳು ಸಾಧನೆ ಮಾಡಲು ಸಿದ್ದರಾಗಿದ್ದಾರೆ ಎಂದು ಅಂಕಲಿ ಪಟ್ಟಣ ಗೊಮ್ಮಟೇಶ ಶಿಕ್ಷಣ ಸಂಸ್ಥೆ ಆಧ್ಯಕ್ಷ ಎನ್ ಎ ಮಗದುಮ್ಮ ಹೇಳಿದರು.

ಕಾಗವಾಡ ತಾಲೂಕಿನ ಐನಾಪೂರ ಪಟ್ಟಣದ ಪದ್ಮಾವತಿ ವಿದ್ಯಾವರ್ಧಕ ಸಂಸ್ಥೆ ಯ ಸಿಬಿಎಸ್‌ಸಿ ಶಾಲೆ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನ ಉದ್ದೇಶಿಸಿ ಮಾತನಾಡಿದರು ಮಕ್ಕಳ ಬೆಳವಣಿಗೆ ಪ್ರಮುಖವಾದ ಪಾತ್ರ ವಹಿಸುವುದು ತಾಯಿಯ ಆದ್ಯ ಕರ್ತವ್ಯವಾಗಿದೆ. ಒಂದ ವೇಳೆ ತಾಯಿ ತನ್ನ ಕರ್ತವ್ಯ ಮರೆತರೆ ಮಗುವಿನ‌ ಶಿಕ್ಷಣದ ಮೇಲೆ ಪ್ರಭಾವ ಬೀರುವುದು ನಿಶ್ಚಿತ ಹೀಗಾಗಿ ತಾಯಂದಿರು ಮಕ್ಕಳ ಭವಿಷ್ಯ ನಿರ್ಮಾಣ ಮಾಡುವುದು ನಿಮ್ಮ ಕೈಯಲ್ಲಿ ಇದೆ ಎಂದು ಹೇಳಿದರು.

ಸಮಾರಂಭದಲ್ಲಿ ಸಂಸ್ಥೆಯ ನೂತನ ಅಧ್ಯಕ್ಷ ನ್ಯಾಯವಾದಿ ಸಂಜಯ ಕುಚನೂರೆ ಉಪಾಧ್ಯಕ್ಷ ರವೀಂದ್ರ ಬನಜವಾಡ ಇವರನ್ನ ಸನ್ಮಾನಿಸಲಾಯಿತು.

ಕಳೆದ ಒಂದು ವರ್ಷದಲ್ಲಿ ಬೇರೆ ಬೇರೆ ವರ್ಗದ ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅತಿಥಿಗಳಿಂದ ಗೌರವಿಸಲಾಯಿತು

ಸಂಸ್ಥೆಯ ಅಧ್ಯಕ್ಷ್ಯ ನ್ಯಾಯವಾದಿ ಸಂಜಯ ಕುಚನೂರೆ ಮಾತನಾಡಿ ಪದ್ಮಾವತಿ ಸಂಸ್ಥೆ ಕಟ್ಟಲು ಹಲವಾರು ಹಿರಿಯರ ಶ್ರಮ ಇದೆ. ಈ ಸಂಸ್ಥೆಗೆ ಯಾವುದೇ ಚುತಿ ಬರದಂತೆ ನಾನೂ ಮುಂದುವರೆಸಿಕೊಂಡು ಹೋಗುತ್ತೇನೆ ಒಬ್ಬ ವಿದ್ಯಾರ್ಥಿಗೆ ಗುರು, ಗುರಿ, ಛಲ ಈ ಮೂರು ಇದ್ದಾಗ ಮಾತ್ರ ಒಬ್ಬ ವಿದ್ಯಾರ್ಥಿ ಏನಾದರು ಸಾಧನೆ ಮಾಡಲು ಸಾಧ್ಯ ಎಂದರು

ಐನಾಪೂರ ಪಟ್ಟಣ ಪಂಚಾಯತಿ‌ ಅಧಿಕಾರಿ ಮಹಾಂತೇಶ ಕವಲಾಪೂರಮುಖ್ಯ ಅತಿಥಿಯಾಗಿ ಅಲಂಕರಿಸಿದ್ದರು. ಕಾರ್ಯದರ್ಶಿ ಪ್ರಮೋದ ಲಿಂಬಿಕಾಯಿ, ಗಜಕುಮಾರ ಪಾಟೀಲ, ಬಾಬುಸಾಬ ಪಾಟೀಲ, ಪ್ರಹ್ಲಾದ ತೋರೊ, ಮಹಾವೀರ ಪಾಟೀಲ, ಚಿನ್ನಪ್ಪ ತೆರದಾಳೆ, ವಸಂತ ಹುದ್ದಾರ, ಜಯಕುಮಾರ ಪಾಟೀಲ, ಮಹಾವೀರ ಲಿಂಬಿಕಾಯಿ, ಶೀತಲ ಪಾಟೀಲ, ಮೋಹನ ಪಾಟೀಲ, ಮಂಜುನಾಥ ಕುಚನೂರೆ, ಸಿದ್ದಾಂತ ಬಣಜವಾಡ, ಭರತೇಶ ತೆರದಾಳ, ಶಾಂತಿನಾಥ ಪಾಟೀಲ, ಶ್ರೀಕಾಂತ ಪಾಟೀಲ, ಸಂತೋಷ ತೇರದಾಳೆ, ರಾಹುಲ ಕೋಟಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.