ಉ.ಕ ಸುದ್ದಿಜಾಲ ಕಾಗವಾಡ :
ನಾನು ಮಂತ್ರಿ ಸ್ಥಾನ ಬೇಡಿಲ್ಲ. ಕೊಟ್ಟರೆ ತೆಗೆದುಕೊಳ್ಳುತ್ತೇನೆ, ಕ್ಷೇತ್ರದ ಜನ ಹಾಗೂ ಅವರ ಕೆಲಸ ಮಾಡುತ್ತೇನೆ. ಸಂಪುಟ ವಿಸ್ತರಣೆ ಯಾವಾಗ ಮಾಡಯತ್ತಾರೆ ಅದು ಕೂಡಾ ನನಗೆ ಗೊತ್ತಿಲ್ಲ ಎಂದು ಕಾಗವಾಡ ಶಾಸಕ, ಮಾಜಿ ಸಚಿವ ಶ್ರೀಮಂತ ಪಾಟೀಲ ಹೇಳಿದರು.
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರ ಗ್ರಾಮದಲ್ಲಿ ವಿವಿಧ ಕಾಮಗಾರಿಗೆ ಗುದ್ದಲಿ ಪೂಜೆ ಹಾಗೂ ಶಾಲೆಗಳ ಕಟ್ಟಡ ಉದ್ಗಾಟನಾ ಸಮಾರಂಭ ಬಳಿಕ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು ನಾನು ನನ್ನ ಕ್ಷೇತ್ರದ ಜನರ ಕೆಲಸಕ್ಕಾಗಿ ದುಡಿಯುತ್ತಿದ್ದೇನೆ ಹೊರತೆ ಸಂಪಿಟ ವಿಸ್ತರಣೆ ಬಗ್ಗೆ ತೆಲೆ ಕೆಡಸಿಕೊಂಡಿಲ್ಲ. ಮಹೇಶ ಕುಮಟಳ್ಳಿ ಸಚಿವ ಸ್ಥಾನದ ವಿಚಾರ, ನನಗೆ ಸಚಿವನಾಗಬೇಕೆನ್ನುವ ಆಸೆ ನನಗಿಲ್ಲ. ನನಗೆ ಸಚಿವ ಸ್ಥಾನದ ಚಿಂತೆಯಿಲ್ಲ ಎಂದು ಹೇಳಿದರು.
ಕೊವೀಡ್ ನಿಯಮಗಳನ್ನ ಗಾಳಿಗೆ ತೂರಿ ಕಾಗವಾಡ ಚಕ್‌ಪೊಸ್ಟ್‌ದಿಂದ ಜನ ಬರುತ್ತಿದ್ದಾರೆ ಈ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಈಗಾಗಲೇ ಆರೋಗ್ಯ ಇಲಾಖೆ ಪೋಲಿಸ್ ಇಲಾಖೆ ಜೊತೆ ಚರ್ಚೆ ಮಾಡಲಾಗಿದೆ ಗಡಿಯಲ್ಲೂ ಕೂಡಾ ಕಟ್ಟುನಿಟ್ಟಾಗಿ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.
ನೆರೆ ಸಂತ್ರಸ್ಥರಿಗೆ ಪರಿಹಾರ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಈಗಾಗಲೇ ಕಾಗವಾಡ ಮತಕ್ಷೇತ್ರದ ಜನರಿಗೆ ನೆರೆ ಪರಿಹಾರ ಬಂದೊದಗಿದ್ದು ನದಿ ತೀರದ ಜನರಿಗೆ ಯಾರಾದರೂ ಅಧಿಕಾರಿಗಳು ತೊಂದರೆ ಮಾಡಿದರೆ ನನಗೆ ತಿಳೊಸಿ ಎಂದು ಹೇಳಿದರು.