ಉ.ಕ ಸುದ್ದಿಜಾಲ ಕಾಗವಾಡ :

ಲೋಕಾಯುಕ್ತ ಅಧಿಕಾರಿ ಮುಂದೆ ಮಗಳನ್ನು ಕಳೆದುಕೊಂಡು ನ್ಯಾಯಕ್ಕಾಗಿ ಅಂಗಲಾಚಿದ ತಂದೆ-ತಾಯಿ..! ನಮ್ಮ ಮಗಳು ಎಂಎಸ್‌ಸಿ ಪದವೀಧರೇ, ಆತ್ಮಹತ್ಯ ಮಾಡುಕೊಳ್ಳುವ ಹೇಡಿಯಲ್ಲ. ಅವಳ ಸಾವು ಆತ್ಮಹತ್ಯೆಯಲ್ಲ. ಅದು ಕೊಲೆಯಾಗಿದ್ದು, ರಾಜಕೀಯ ಒತ್ತಡದಿಂದಾಗಿ ಪೋಲಿಸರು ಸರಿಯಾಗಿ ತನಿಖೆ ಮಾಡದೇ ಆರೋಪಿಗಳನ್ನು ರಕ್ಷಿಸುವ ಕಾರ್ಯ ಮಾಡುತ್ತಿದ್ದಾರೆ.

ನನ್ನ ಮಗಳ ಸಾವಿಗೆ ನ್ಯಾಯ ಕೊಡಿಸಬೇಕು. ಸಾವಿಗೆ ಕಾರಣರಾದವರಿಗೆ ಕಠಿಣ ಶಿಕ್ಷೆಯಾಗಬೇಕೆಂದು ಮಹಾರಾಷ್ಟçದ ಶಿರೋಳ ತಾಲೂಕಿನ ಕವಟೆಸಾರ ಗ್ರಾಮದ ತಂದೆ-ತಾಯಿಗಳು ಕಣ್ಣಿರು ಹಾಕುತ್ತ ಅಂಗಲಾಚಿರುವ ಘಟನೆಗೆ ಪಟ್ಟಣದ ಪ್ರವಾಸಿ ಮಂದಿರ ಸಾಕ್ಷಿಯಾಗಿದೆ.

ಗುರುವಾರ ಕಾಗವಾಡ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಲೋಕಾಯುಕ್ತ ಪೋಲಿಸ್ ಬೆಳಗಾವಿಯ ಡಿವೈಎಸ್‌ಪಿ ಭರತ ರೆಡ್ಡಿ ನೇತೃತ್ವದಲ್ಲಿ ತಾಲೂಕಿನ ಅಧಿಕಾರಿಗಳ ಉಪಸ್ಥಿತಿಯಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಈ ದೃಷ್ಯ ಕಂಡುಬAದಿತು.

ಈ ವೇಳೆ ತಂದೆ ಸತ್ಯಪ್ಪಾ ಪಾಟೀಲ ಮಾತನಾಡಿ, ನಮ್ಮ ಮಗಳು ಧನಶ್ರೀ ಇವಳನ್ನು ಮಂಗಸೂಳಿ ಗ್ರಾಮದ ಚೇತನ ಮಾಲದಾರ ಇತನ ಜೊತೆ ವಿವಾಹ ಮಾಡಿದ್ದು, ಕಳೆದ ಡಿಸೆಂಬರ್ ತಿಂಗಳಲ್ಲಿ ನನ್ನ ಮಗಳು ಸಾವನ್ನಪ್ಪಿದ್ದು, ಗಂಡನ ಮನೆಯವರು ಧನಶ್ರೀ ಅವಳು ಆತ್ಮಹತ್ಯ ಮಾಡಿಕೊಂಡಿದ್ದಾಳೆAದು ಹೇಳುತ್ತಿದ್ದಾರೆ.

ಆದರೇ ಅದು ಆತ್ಮಹತ್ಯೆ ಅಲ್ಲ. ಅದು ಕೊಲೆಯಾಗಿದ್ದು, ಈ ಕುರಿತು ಕಾಗವಾಡ ಪೋಲಿಸರು ನಮಗೆ ನ್ಯಾಯ ಕೊಡುತ್ತಿಲ್ಲ. ರಾಜಕೀಯ ಒತ್ತಡದಿಂದ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡಲಾಗುತ್ತಿದೆ. ನಮಗೆ ನ್ಯಾಯ ಒದಗಿಸಬೇಕೆಂದು ಬೇಡಿಕೊಂಡರು.

ಲೋಕಾಯುಕ್ತ ಅಧಿಕಾರಿ ಸ್ಥಳದಲ್ಲಿಯೇ ಸ್ಪಂದಿಸಿ, ಅಥಣಿ ಡಿವೈಎಸ್‌ಪಿ ಅವರಿಗೆ ಪ್ರಕರಣದ ತನಿಖೆಯ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.

ಸಭೆಯಲ್ಲಿ ತಾಲೂಕಿನ ಐದಾರು ಜನರು ಮಾತ್ರ ದೂರು ಸಲ್ಲಿಸಿದ್ದು, ಸಭೆಗೆ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡದೇ ಇರುವುದರಿಂದ ಕಾಟಾಚಾರದ ಜನಸಂಪರ್ಕ ಸಭೆ ನಡೆಸಲಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ಈ ವೇಳೆ ಲೋಕಾಯುಕ್ತ ಡಿವೈಎಸ್‌ಪಿ ಭರತ ರೆಡ್ಡಿ ಮಾತನಾಡಿ, ಕಾಗವಾಡ ಹೊಸ ತಾಲೂಕು ರಚನೆಯಾದ ಬಳಿಕ ಪ್ರಥಮ ಬಾರಿಗೆ ಸಭೆ ಹಮ್ಮಿಕೊಳ್ಳಲಾಗಿದೆ. ಸಭೆಯ ಬಗ್ಗೆ ಬಹಳಷ್ಟು ಜನರಿಗೆ ಮಾಹಿತಿ ಇರಲಿಲ್ಲ. ಇದರಿಂದ ಕಡಿಮೆ ಜನ ಸಭೆಗೆ ಆಗಮಿಸಿದ್ದಾರೆ. ಇನ್ನೂ ಮುಂದೆ ಜನರಿಗೆ ಸೂಚನೆ ನೀಡಿ, ಸಭೆ ಹಮ್ಮಿಕೊಳ್ಳಲಾಗುವುದು. ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸಬೇಕು. ವಿನಾಕಾರಣ ಸಾರ್ವಜನಿಕರನ್ನು ಕಚೇರಿಗಳಿಗೆ ಅಲೆದಾಡುವಂತೆ ಮಾಡಬಾರದು ಎಂದು ಸೂಚನೆ ನೀಡಿದರು.

ಲೋಕಾಯುಕ್ತ ಪಿಐ ರವಿಕುಮಾರ ಧರ್ಮಟ್ಟಿ ಮಾತನಾಡಿ, ತಾಲೂಕಿನ ಅನೇಕ ಇಲಾಖೆಗಳ ಕಾರ್ಯ ವೈಖರಿಯ ಕುರಿತು ಅನೇಕ ದೂರುಗಳು ಬಂದಿದ್ದು, ಶೀರ್ಘವಾಗಿ ತನಿಖೆ ಮಾಡಲಿದ್ದೇವೆ ಎಂದು ಎಚ್ಚರಿಕೆ ನೀಡಿದರು.

ಈ ವೇಳೆ ತಹಶೀಲ್ದಾರ ರಾಜೇಶ ಬುರ್ಲಿ, ಡಿವೈಎಸ್‌ಪಿ ಪ್ರಶಾಂತ ಮುನ್ನೋಳ್ಳಿ, ಸಿಪಿಐ ಸಂತೋಷ ಹಳ್ಳೂರ, ಪಿಎಸ್‌ಐ ಗಂಗಾ ಬಿರಾದರ, ಸಿಡಿಪಿಓ ಸಂಜೀವಕುಮಾರ ಸದಲಗಿ, ಬಿಇಓ ಎಂ.ಆರ್. ಮುಂಜೆ, ನೀರಾವರಿ ಇಲಾಖೆಯ ಪ್ರಶಾಂತ ಪೋತರಾರ, ಪ್ರವೀಣ ಪಾಟೀಲ, ರವೀಂದ್ರ ಮುರಗಾಲಿ, ಕೃಷಿ ಇಲಾಖೆಯ ನಿಂಗನಗೌಡಾ ಬಿರಾದರ, ಸಮಾಜ ಕಲ್ಯಾಣ ಇಲಾಖೆಯ ಬಸವರಾಜ ಯಾದವಾಡ, ಬಿಸಿಎಂನ ವೆಂಕಟೇಶ ಕುಲಕರ್ಣಿ, ಪಶು ಇಲಾಖೆಯ ಎಂ.ಎನ್. ಕಾಂಬಳೆ, ಸಬ್ ರಜಿಸ್ಟçರ್ ರಾಜಶೇಖರ ಮುಕ್ಕನ್ನವರ, ವೈದ್ಯಾಧಿಕಾರಿ ಡಾ. ಬಸಗೌಡಾ ಕಾಗೆ, ಪ.ಪಂ.ನ ಮುಖ್ಯಾಧಿಕಾರಿಗಳಾದ ಮಹಾಂತೇಶ ಕೌಲಾಪೂರ, ಕೆ.ಕೆ. ಗಾವಡೆ ಸೇರಿದಂತೆ ತಾಲೂಕಿನ ಹಲವು ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.