ಉ.ಕ ಸುದ್ದಿಜಾಲ ರಾಯಬಾಗ :
ರಾಜ್ಯದಲ್ಲಿ ಸಾರ್ವತ್ರಿಕ ಚುನಾವಣೆ ಕಾವು. ಕುಡಚಿ ಮತಕ್ಷೇತ್ರದಲ್ಲಿ ಆಣೆ ಪ್ರಮಾಣಕ್ಕೆ ಮುಂದಾದ ಮತದಾರರು. ಶಾಸಕ ಪಿ ರಾಜೀವ್ ಗೆಲುವಿಗೆ ಆಣೆ ಪ್ರಮಾಣ.
ದುರ್ಗಾದೇವಿ ಬಂಡಾರ ಮುಟ್ಟಿ ಪಿ ರಾಜೀವ್‌ಗೆ ಮತ ನೀಡುತ್ತೇವೆ ಎಂದು ಪ್ರಮಾಣ. ಸಮುದಾಯದ ಮುಖಂಡರಿಂದ ಪ್ರಮಾಣ. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣ ಆಣೆ ಪ್ರಮಾಣ ಜೋರು. ದುರ್ಗಾದೇವಿ ದೇವಾಲಯ ಕಾಮಗಾರಿ ಅರ್ಧಕ್ಕೆ ನಿಂತಿತ್ತು. ಈ ಕಾಮಗಾರಿ ಪೂರ್ಣಕ್ಕೆ ಪಿ ರಾಜೀವ್ ಹಣ ನೀಡಿದ್ದಾರೆ.
ಇದರಿಂದಾಗಿ ನಾವು ಪಿ ರಾಜೀವ್ ಮತ ನೀಡುತ್ತೇವೆ. ಇದು ದುರ್ಗಾದೇವಿ ಸಾಕ್ಷಿಯಾಗಿ ಆಣೆ ಎಂದು ಪ್ರಮಾಣ. ಸಾಮೂಹಿಕವಾಗಿ ಗ್ರಾಮದ ಪ್ರಮುಖರು ಆಣೆ ಪ್ರಮಾಣ. ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಮುಗಳಖೋಡ ಪಟ್ಟಣ ನಡೆದ ಆಣೆ ಪ್ರಮಾಣ.