ಉ.ಕ ಸುದ್ದಿಜಾಲ ಕುಡಚಿ :

ಕುಡಚಿ ಶಾಸಕ‌ ಪಿ. ರಾಜೀವ ಕುಡಚಿ ಕ್ಷೇತ್ರದಿಂದ ಸ್ಪರ್ಧಿಸಲ್ಲ, ಚಿತ್ತಾಪೂರದಿಂದ ಸ್ಪರ್ಧೆ ಮಾಡುತ್ತಾರೆ ಎಂದು ಕಳೆದ ಎರಡ್ಮೂರು ತಿಂಗಳಿನಿಂದ ಉಹಾಪೊಗಳು, ವದಂತಿಗಳು ಹರದಾಡುತ್ತಿದ್ದು, ಈ ವಿಚಾರವಾಗಿ ಕುಡಚಿ‌ ಶಾಸಕ ಪಿ.ರಾಜೀವ ತೆರೆ ಎಳೆದಿದ್ದಾರೆ

ನಾನು ಯಾವುದೇ ಕಾರಣಕ್ಕೂ ಬೇರೆ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ ಕುಟಚಿ ವಿಧಾನಸಭಾ ಮತಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ ಎಂದು ಕಾರ್ಯಕ್ರಮದಲ್ಲಿ ಮತದಾರರಿಗೆ ಮಾತು ಕೊಟ್ಟಿದ್ದಾರೆ.

ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಕುಡಚಿ ಮತಕ್ಷೇತ್ರ ಅಲಕನೂರನಲ್ಲಿ ಬೃಹತ್ ಕಾರ್ಯಕರ್ತರ ಸಭೆ ಮಾಡಿದ ಪಿ ರಾಜೀವ್ ಮತಕ್ಷೇತ್ರದ ಜನರಿಗೆ ಸ್ಪಷ್ಟನೆ ನೀಡಿದ್ದು, ನಾನು ಕುಡಚಿ ಬಿಟ್ಟು ಹೋಗಲ್ಲ.

ನನ್ನ ಕುಟುಂಬಕ್ಕೆ ಮೋಸ ಮಾಡಬಹುದು, ಆದರೆ ನಿಮಗೆ ನಾನು ಮೋಸ ಮಾಡುವುದಿಲ್ಲ. ನಿಮ್ಮ ಸೇವೆ ಮಾಡುತ್ತಾ ನಾನು ಪ್ರಾಣಾ ಬಿಡುತ್ತೇನೆ. ನನನೆ ರಾಜಕೀಯ ನೆಲೆ ನೀಡಿದ ನಿಮ್ಮ ಸೇವೆ ಮಾಡುತ್ತೇನೆ.

ನಮ್ಮ ತಾಯಿ ಸನ್ನಿಧಿ ಇಲ್ಲೆ ಇದೆ, ನಾನು ಅವರ ಸನ್ನಿಧಾನದಲ್ಲಿ ನಿಂತು ಮಾತು ಹೇಳುತ್ತೇನೆ. ನಾನು ಕೊನೆ ಉಸಿರು ಇರುವವರೆಗೂ ನಿಮ್ಮ ಸೇವೆ ಮಾಡುತ್ತೇನೆ. ನಿಮ್ಮ ಸೇವೆ ನಾನು ಲಾಯಕ್ಕ ಇದ್ದರೆ ಬೆಂಬಲ ನೀಡಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದ ಶಾಸಕ ಪಿ.ರಾಜೀವ.

ಮೊಬೈಲ್ ಫ್ಲ್ಯಾಶ್ ಲೈಟ್ ಹಚ್ಚಿ ಬೆಂಬಲ ನೀಡಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದ್ದು ಕ್ಷೇತ್ರ ತೋರೆಯುತ್ತಾರೆ ಎಂಬ ವದಂತಿಗೆ ತೆರೆ ಎಳೆದ ಪಿ.ರಾಜೀವ