ಉ.ಕ ಸುದ್ದಿಜಾಲ ರಾಯಬಾಗ :

ನಾನೂ ಸಚಿವನಾಗುವುದಿಲ್ಲ, ಕೆಎಂಎಫ್ ಅಧ್ಯಕ್ಷನಾಗಿ ಆರಾಮಾಗಿದ್ದೇನೆ, ಒಂದು ವರ್ಷದಿಂದ ನಾನೂ ಸಚಿವಸ್ಥಾನಕ್ಕಾಗಿ ಪ್ರಯತ್ನ ಮಾಡಿಲ್ಲ‌‌ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಬೆಳಗಾವಿ ಜಿಲ್ಲೆ ರಾಯಬಾಗ ಹಾಲು ಸಂಸ್ಕರಣಾ ಘಟಕ ಉದ್ಘಾಟನೆ ಬಳಿಕ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ನನಗೆ ಯಾವುದೇ ರೀತಿ ಸಚಿವನಾಗಬೇಕೆನ್ನುವ ಆಸೆಯಿಲ್ಲ‌ ನಮ್ಮ ಅಣ್ಣ ರಮೇಶ ಜಾರಕಿಹೊಳಿ ಆದಷ್ಟ ಬೇಗ ಆತನ ಮೇಲೆ ಇರುವ ಕೇಸ್ ಮುಗಿಲಿ, ಆದಷ್ಟು ಬೇಗ ಸಚಿವನಾಗಲಿ ನಮ್ಮದೆಲ್ಲ ಪ್ರಯತ್ನ ಇದೆ ಎಂದರು.

ಲಕ್ಷ್ಮಣ ಸವದಿ ಅವರು ಡಿ ಕೆ ಶಿವಕುಮಾರ ಸಂಪರ್ಕದಲ್ಲಿದ್ದಾರೆ ವಿಚಾರ ನಗೆ ಮೂಲಕ ಪ್ರತಿಕ್ರಿಯಿಸಿದ ಅವರು ನನಗೆ ಈ ವಿಚಾರ ಗೊತ್ತೇ ಇಲ್ಲ ಎಂದರು. ಕತ್ತಿ ಮನೆಯಲ್ಲಿ ಬಿಜೆಪಿ ಸಭೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಶಾಸಕರು ಇಬ್ಬರು ಪೊಸ್ಟ ಹಾಕಿದ್ದರು ಇದು ವ್ಯಯಕ್ತಿಕ ಸಭೆ ಅಂತಾ ಅದಕ್ಕಾಗಿ ನಾನೂ ವ್ಯಯಕ್ತಿಕ ಸಭೆ ಅಂದುಕೊಂಡೆ ನಾವು, ರಮೇಶ ಜಾರಕಿಹೋಳಿ ಉಮೇಶ ಕತ್ತಿ ಸಭೆ ಮಾಡಬೇಕು ಇಲ್ಲವಾದರೆ ಬಿಜೆಪಿಗೆ ಡ್ಯಾಮೆಂಜ ಆಗುತ್ತೆ ಎಂದರು.

ಇಲ್ಲ ಸಲ್ಲದವರೂ ಏನೆನೂ ಉಹಾಪೋಹ ಎಬ್ಬಿಸುತ್ತಿದ್ದಾರೆ. ಬಿಜೆಪಿಯಲ್ಲಿ ಯಾವುದೇ ಒಡಕಿಲ್ಲ. ನಮ್ಮ ನಮ್ಮ ನಡುವೆ ಭಿನ್ನಾಭಿಪ್ರಾಯ ಇರಬಹುದು ನಾವೆಲ್ಲ ಒಗ್ಗಟ್ಟಾಗಿ ಸಮಸ್ಯೆ ಸಾಲೊ ಮಾಡಕೊಬೇಕು. ನಮ್ಮಗ ಯಾವುದೇ ಜಗಳ ಬ್ಯಾಡ ನಮ್ಮಗೆ ಯಾವುದೇ ಜಗಳ ಬೇಕಾಗಿಲ್ಲ. ಉಮೇಶ ಕತ್ತಿನೇ ಹೇಳಿದ್ದು ಈ ಸಭೆ ನಾನ ಕರೆದಿಲ್ಲ ಮಹಾಂತೇಶ ಕವಟಗಿಮಠ ಅವರು ಸಭೆ ಕರೆದಿದ್ದಾರೆ ಅಂತಾ ಉಮೇಶ ಕತ್ತಿ ಹಾಗೂ ನಾವೂ ಸ್ನೇಹಿತರು ಎಂದರು.

ರಮೇಶ ಜಾರಕಿಹೊಳಿ ಹೊಸ ಪಕ್ಷ ಸಂಘಟನೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ‌ಇದು ಬರಿ ಉಹಾಪೊಹ ಮಾತ್ರ ಯಾವುದೇ ಪಕ್ಷ ಸಂಘಟನೆ ಮಾಡುತ್ತಿಲ್ಲ, ರುಮರ ಎಬಿಸುತ್ತಿದ್ದಾರೆ ಎಂದು ಹೇಳಿದರು.