ಉ.ಕ ಸುದ್ದಿಜಾಲ ರಾಯಬಾಗ :

ವಕೀಲ ಸಂತೋಷ ಮರ್ಡರ್ ಪ್ರಕರಣ ಪತ್ತೆ ಆಗಿದ್ದೇ ರಣರೋಚಕ. ಬೇರೆ ಪ್ರಕರಣದ ಆರೋಪಿ ಕರೆತಂದು ತೀವ್ರ ವಿಚಾರಣೆಗೆ ಒಳಪಡಿಸಿದ್ದ ರಾಯಭಾಗ ಪೊಲೀಸರು. ಈ ಆರೋಪಿ ನ್ಯಾಯವಾದಿ ಶಿವನಗೌಡ ಪಾಟೀಲರಿಂದ ಸುಪಾರಿ ಪಡೆದ ಹಂತಕರ ಸ್ನೇಹಿತ.

ತೀವ್ರ ‌ವಿಚಾರಣೆ ವೇಳೆ ಸಂತೋಷ ಪಾಟೀಲ ಹಂತಕರ ಹೆಸರು ಪೊಲೀಸರಿಗೆ ನೀಡಿದ್ದ ಆರೋಪಿ. ಬೇರೆ ಪ್ರಕರಣದ ಆರೋಪಿ ನೀಡಿದ ಮಾಹಿತಿ ಆಧರಿಸಿ ನ್ಯಾಯವಾದಿ ಹಂತಕರ ಹೆಡೆಮುರಿ ಕಟ್ಟಿದ ಪೊಲೀಸರು. ಪ್ರಕರಣ ಸಂಬಂಧ ವಕೀಲರಾದ ಶಿವನಗೌಡ ಪಾಟೀಲ, ಭರತ್ ಕೋಳಿ, ಕಿರಣ್ ಕೆಂಪವಾಡೆ ಮಹಾವೀರ ಹಂಜೆ.
ಸುರೇಶ ನಂದಿ, ಉದಯ ಮುಶೆನ್ನವರ, ಸಂಜಯ್ ಹಳಬಣ್ಣವರ, ರಾಮು ದಂಡಾಪುರ ಬಂಧಿತರು.

ತಲೆಮರೆಸಿಕೊಂಡಿರುವ ಮಂಜುನಾಥ ತಳವಾರ ಕಾನೂನು ಪಾಲಿಸಬೇಕಾದ ವಕೀಲರೇ ಸೂಪಾರಿ ಕೊಟ್ಟು ವಕೀಲನ ಕೊಲೆ ಬೆಚ್ಚಿಬೀಳಿಸುವಂತಿದೆ ಬೆಳಗಾವಿಯ ನ್ಯಾಯವಾದಿಯ ಮರ್ಡರ್ ಮಿಸ್ಟರಿ. ನ್ಯಾಯವಾದಿ ಅಪಹರಿಸಿ ಕೊಲೆ ಮಾಡಿದ್ದ ದುಷ್ಕರ್ಮಿಗಳು. ರಾಯಭಾಗದಲ್ಲಿ ಅಪಹರಣ, ಉತ್ತರ ಕನ್ನಡದ ರಾಮನಗರದಲ್ಲಿ ನ್ಯಾಯವಾದಿಯ ಕೊಲೆ.

ರಾಮನಗರ ಅರಣ್ಯ ಪ್ರದೇಶದಲ್ಲಿ ಬರ್ಬರ ಹತ್ಯೆಗೈದು ಮೃತದೇಹ ಸುಟ್ಟಿದ್ದ ಆರೋಪಿಗಳು. ನ್ಯಾಯವಾದಿ ಕೊಲೆಗೆ 14 ಲಕ್ಷ ಸೂಪಾರಿ ನೀಡಿದ್ದ ನಾಲ್ವರು ವಕೀಲರು. ವಕೀಲನ ಕಗ್ಗೊಲೆಗೆ ಕಾರಣವಾಯಿತು ಕೋಟ್ಯಂತರ ಬೆಲೆಬಾಳುವ 1.4 ಎಕರೆ ಜಮೀನು.

ರಾಯಭಾಗ ಪಟ್ಟಣದಲ್ಲಿ ಸಂತೋಷ ಪಾಟೀಲ ಅಪಹರಿಸಿ ಕೊಲೆ ಮಾಡಿದ ಆರೋಪಿಗಳು. ರಾಯಭಾಗ ಪಟ್ಟಣದ ನ್ಯಾಯವಾದಿ ಶಿವಾನಂದ ಪಾಟೀಲ ಸೇರಿ ನಾಲ್ವರಿಂದ ಕೃತ್ಯ.

ಕಳೆದ 2025ರ ಏಪ್ರಿಲ್ 29ರಂದು ಸಂಜೆ 4 ಸವಸುದ್ದಿ ಗ್ರಾಮದ ರೇಖಾ ಪಾಟೀಲ ಅವರು ರಾಯಬಾಗ ಪೊಲೀಸ್ ಠಾಣೆಗೆ ಆಗಮಿಸಿ ತನ್ನ ಪತಿ ಸಂತೋಷ ಅಶೋಕ ಪಾಟೀಲ ಇವರು ವೃತ್ತಿಯಲ್ಲಿ ನ್ಯಾಯವಾದಿ ಇದ್ದು, ನ್ಯಾಯಾಲಯಕ್ಕೆ ಹೋಗುವಾಗ ಅಪಹರಣಗೊಂಡಿರುವುದಾಗಿ ದೂರು ನೀಡಿದರು. ಪ್ರಕರಣವನ್ನು ಅಪರಾಧ ಸಂಖ್ಯೆ 123/2025 ರಂತೆ ಬಿಎನ್‌ಎಸ್ ಕಲಂ 137(2) ಅಡಿಯಲ್ಲಿ ದಾಖಲಿಸಲಾಗಿತ್ತು.

ಬೆಳಗಾವಿ ಎಸ್‌ಪಿ ಭೀಮಾಶಂಕರ ಗುಳೇದ ಹಾಗೂ ಹೆಚ್ಚುವರಿ ಎಸ್‌ಪಿ ಬೆಳಗಾವಿ, ಅಥಣಿಯ ಡಿವೈಎಸ್‌ಪಿ ಅವರ ಮಾರ್ಗದರ್ಶನದಲ್ಲಿ, ತನಿಖಾಧಿಕಾರಿ ಬಿ.ಎಸ್‌. ಮಂಟೂರ ನೇತೃತ್ವದ ತಂಡವು ತ್ವರಿತ ತನಿಖೆ ಆರಂಭಿಸಿ, ನಾಪತ್ತೆಯಾದವನಿಗಾಗಿ ಹುಡುಕಾಟ ಆರಂಭಿಸಲಾಗಿತ್ತು.

2025 ರ ಏಪ್ರಿಲ್ 29ರಂದು, ಸಂತೋಷ ಪಾಟೀಲ ಸವಸುದ್ದಿಯಿಂದ ದ್ವಿಚಕ್ರ ಮೇಲೆ ರಾಯಬಾಗಕ್ಕೆ ಹೊರಡುತ್ತಿದ್ದಾಗ, ಆರೋಪಿಗಳು ಕಾರು ಮೂಲಕ ತಡೆದು ಸಂತೋಷನ್ನು ಅಪಹರಿಸಿದರು. ನಂತರ, ಅವರನ್ನು ರಾಮನಗರ ಮೂಲಕ ಉತ್ತರ ಕನ್ನಡದ ಜೋಯಿಡಾ ತಾಲೂಕಿನ ಗಣೇಶಗುಡಿಗೆ ಕರೆದೊಯ್ದು, ತಲವಾರದಿಂದ ತಲೆಗೆ ಹೊಡೆದು ಹತ್ಯೆಗೈದು, ಮೃತದೇಹದ ಗುರುತು ಪತ್ತೆಯಾಗದಂತೆ ಮೈಮೇಲೆ ಪೆಟ್ರೋಲ್ ಸುರಿದು ಸುಟ್ಟು ಹಾಕಿದ್ದರು.

ಸಂತೋಷ ಪತ್ನಿಯ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ನ್ಯಾಯವಾದಿ ಶಿವಗೌಡ ತನ್ನ ಸಹಚರರಿಗೆ 14 ಲಕ್ಷ ರೂ. ಸುಪಾರಿ ಆಮಿಷ ನೀಡಿ ಕೊಲೆ ನಡೆಸಿರುವುದು ಸ್ಪಷ್ಟವಾಗಿದೆ. ಕೊಲೆ ನಡೆಸಿದ ಸ್ಥಳದಲ್ಲಿ ಪತ್ತೆಯಾದ ಮೂಳೆಗಳ ಡಿಎನ್‌ಎ ಪರೀಕ್ಷೆಯಲ್ಲಿ, ಅವು ಸಂತೋಷ ಪಾಟೀಲ ಅವರದ್ದೇ ಎಂದು ದೃಢಪಟ್ಟಿದೆ.

ಕೊಲೆ ಪ್ರಕರಣದಲ್ಲಿ ನ್ಯಾಯವಾದಿಯಾದ ಶಿವಗೌಡ ಬಸಗೌಡ ಪಾಟೀಲ, ಭರತ ಕಲ್ಲಪ್ಪ ಕೋಳಿ, ಕಿರಣ ವಸಂತ ಕೆಂಪವಾಡೆ, ಸುರೇಶ ಭೀಮಪ್ಪ ನಂದಿ, ಉದಯಕುಮಾರ ಮುಶೆನ್ನವರ, ಸಂಜಯಕುಮಾರ ಹಳಬನ್ನವರ, ರಾಮು ದಂಡಾಪೂರೆ, ಮಂಜುನಾಥ ತಳವಾರ ಎಂಬುವರನ್ನು ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಆರೋಪಿ ನಂ. 4 ಮಹಾವೀರ ಸುಭಾಸ ಹಂಜೆ ಹಾಗೂ ಆರೋಪಿ ನಂ.10 ನಾಗರಾಜ ಪರಸಪ್ಪ ನಾಯಕ ತಲೆಮರೆಸಿಕೊಂಡಿದ್ದು, ಇವರಿಬ್ಬರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ರಾಯಬಾಗ ಪೊಲೀಸರ ಈ ಮಿಂಚಿನ ಕಾರ್ಯಾಚರಣೆಗೆ ಬೆಳಗಾವಿ ಎಸ್‌ಪಿ ಭೀಮಾಶಂಕರ ಗುಳೇದ ಹಾಗೂ ಸಾರ್ವಜನಿಕರಿಂದಲೂ ಶ್ಲಾಘನೆ ವ್ಯಕ್ತವಾಗಿದೆ.