ಉ.ಕ ಸುದ್ದಿಜಾಲ ರಾಯಬಾಗ :
ಪ್ರಪಂಚದ ಬಗ್ಗೆ ಏನೊಂದೂ ಅರಿಯದ ಪುಟಾಣಿಯೊಬ್ಬ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ತನ್ನ ಹೆಸರನ್ನು ದಾಖಲಿಸಿಕೊಳ್ಳುವುದು ಸಾಮಾನ್ಯ ಸಾಧನೆಯಲ್ಲ ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ….
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಗ್ರಾಮೀಣ ಭಾಗದ ಟಿಕನಾಳ ತೋಟದ ನಿವಾಸಿ ಡಾ. ಅಜೀತ ಕೋಳಿಗುಡ್ಡ ಹಾಗೂ ಡಾ. ವಂದನಾ ಅಜೀತ್ ಕೋಳಿಗುಡ್ಡ ದಂಪತಿಗಳ ಮುದ್ದಿನ ಸುಪುತ್ರ ಈ ಎರಡು ವರ್ಷ ನಾಲ್ಕು ತಿಂಗಳ ಪ್ರಾಯದ ವಿಹಾನ ಅಜೀತ ಕೋಳಿಗುಡ್ಡ ನ ನೆನಪಿನ ಶಕ್ತಿ ಅಗಾಧವಾದುದು,
ವಾರದ ಹೆಸರು, ತಿಂಗಳ ಹೆಸರು, ಚಿತ್ರ ನೋಡಿ ವಿವಿಧ ಪ್ರಾಣಿಗಳ ಹೆಸರು, ವಿವಿಧ ಪಕ್ಷಿಗಳ ಹೆಸರು, ಹಣ್ಣುಗಳ ಹೆಸರು , ತರಕಾರಿಗಳ ಹೆಸರು, ವಾಹನಗಳ ಹೆಸರು, ವಿವಿದ ರೀತಿಯ ವೃತ್ತಿಗಳ ಹೆಸರು, ಬಣ್ಣಗಳು ,ಕನ್ನಡ ವರ್ಣಮಾಲೆಗಳನ್ನು ಹೇಳುವುದು,
ವಿವಿಧ ವಿಜ್ಞಾನಿಗಳ ಹೆಸರು, ವೈದ್ಯಕೀಯ ಉಪಕರಣಗಳನ್ನು ಗುರುತಿಸುವುದು, ಔಷಧಿಗಳನ್ನು ಗುರುತಿಸುವುದು ಮುಂತಾದ ವಿಷಯ ಕರಗತ ಮಾಡಿಕೊಂಡಿದ್ದರಿಂದ ಇದೀಗ ಈ ಬಾಲಕನ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲೆಯಾಗಿದೆ.
ಸಾಧನೆ ಮೂಲಕ ಕುಡಚಿಗೆ ಹೆಮ್ಮೆ ತಂದಿರುವ ವಿಹಾನ್ ನನ್ನು ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಅಭಿನಂದಿಸಿದ್ದಾರೆ.
