ಉ.ಕ ಸುದ್ದಿಜಾಲ ಹುಕ್ಕೇರಿ :

ದಾಖಲೆ ಇಲ್ಲದೆ ಅಕ್ರಮವಾಗಿ ಲಾರಿಯಲ್ಲಿ ಸಾಗಿಸುತ್ತಿದ್ದ ಸುಮಾರು 2.31 ಲಕ್ಷ ಮೌಲ್ಯದ 10 ಟನ್ ಪಡಿತರ ಅಕ್ಕಿಯನ್ನು ಎಫ್ ಎಸ್ ಟಿ ಹಾಗೂ ಪೊಲೀಸ ಅಧಿಕಾರಿಗಳು ವಶಕ್ಕೆ ಪಡೆದಿರುವ ಘಟನಟೆ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರದ ಚೆಕಪೊಸ್ಟ್ ದಲ್ಲಿ ನಡೆದಿದೆ.

ಚುನಾವಣೆಯ ಹಿನ್ನೆಲೆಯಲ್ಲಿ ಕರ್ನಾಟಕ ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಸಂಕೇಶ್ವರದ ಚೆಕ್ ಪೊಸ್ಟ್ ನಲ್ಲಿ ಎಫ್ ಎಸ್ ಟಿ ಹಾಗೂ ಪೊಲೀಸ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು

ಯಾವದೇ ದಾಖಲೆ ಇಲ್ಲದೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಲಾರಿ ಹಾಗೂ ಸುಮಾರು 2.31 ಲಕ್ಷ ಮೌಲ್ಯದ 10 ಟನ್ ಪಡಿತರ ಅಕ್ಕಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತು ಸಂಕೇಶ್ವರದ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಾಲಾಗಿದೆ.