ಉ.ಕ ಸುದ್ದಿಜಾಲ ಬೆಳಗಾವಿ :

ಬೈಕ್ ಮತ್ತು ಕಾರು ನಡುವೆ ಅಪಘಾತ ಬೈಕ್ ಸವಾರ ಸ್ಥಳದಲ್ಲೆ ಸಾವನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಯಕ್ಕೇರಿ ಗ್ರಾಮದ ಬಳಿ ನಡೆದಿದೆ.

ಬೈಕ ಸವಾರ ನರಗುಂದದಿಂದ ಮುನವಳ್ಳಿ ಕಡೆ ಸಂಚರಿಸುವಾಗ ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೆ ಸಾವನಪ್ಪಿದ್ದು, ಕಾರಿನ ಚಾಲಕ ಮುನವಳ್ಳಿಯಿಂದ. ಗದಗ ಕಡೆ ಪ್ರಯಾಣ ಬೆಳಸಿದ್ದ ಎನ್ನುವ ಮಾಹಿತಿ.

ಸವದತ್ತಿ ತಾಲೂಕಿನ‌ ಸಿಂದೋಗಿ ಗ್ರಾಮದ ಗುರುರಾಜ ನಡನಳ್ಳಿ (38) ಮೃತ ವ್ಯಕ್ತಿ. ಸವದತ್ತಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ. ಈ ಕುರಿತು ಸವದತ್ತಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌.