ಉ.ಕ ಸುದ್ದಿಜಾಲ ಸವದತ್ತಿ :
ಪ್ರೀತಿಸಿ ಮದುವೆಯಾಗಿದ್ದಾಕೆಯ ಕಥೆಯನ್ನೇ ಮುಗಿಸಿದ ಪೊಲೀಸಪ್ಪ. ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದ ರಾಮಸೈಟ್ ದಲ್ಲಿ ಘಟನೆ. ನಾಲ್ಕೈದು ದಿನದ ಹಿಂದೆ ಕೊಲೆಯಾಗಿದ್ದ ಬಸ್ ಕಂಡಕ್ಟರ್. ಪ್ರೀತಿಸಿ ಮದುವೆಯಾಗಿದ್ದಾಕೆಯ ಜೀವವನ್ನೇ ತೆಗೆದ ಪೊಲೀಸ್ ಪೇದೆ.
ಕಾಶಮ್ಮ ನೆಲ್ಲಿಗಣಿ (34) ಗಂಡನಿಂದಲೇ ಕೊಲೆಯಾದ ಸರ್ಕಾರಿ ಬಸ್ ಕಂಡಕ್ಟರ್. ಪೊಲೀಸ್ ಪೇದೆ ಸಂತೋಷ್ ಕಾಂಬಳೆಯಿಂದ ಕೃತ್ಯ. 13ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಕಾಶಮ್ಮ ಸಂತೋಷ. ಮದುವೆ ಬಳಿಕ ಹೆಂಡತಿ ಮೇಲೆ ಸಂಶಯ ಪಟ್ಟುಕೊಂಡು ಕಿರುಕುಳ. ಪತ್ನಿಗೆ ಟಾರ್ಚರ್ ನೀಡುವುದು ದೈಹಿಕ ಹಲ್ಲೆ ಮಾಡ್ತಿದ್ದ ಸಂತೋಷ್.
ಇದರಿಂದ ಬೇಸತ್ತು ಗಂಡನ ಸಹವಾಸ ಬಿಟ್ಟು ತವರು ಮನೆ ಸೇರಿದ್ದ ಕಾಶಮ್ಮ. ಬಳಿಕ ಸವದತ್ತಿ ಡಿಪೋಗೆ ವರ್ಗಾವಣೆ ಮಾಡಿಸಿಕೊಂಡು ಬಂದಿದ್ದ ಕಾಶಮ್ಮ. ಇದಾದ ಬಳಿಕ ವಿವಾಹ ವಿಚ್ಛೇದನಕ್ಕೆ ಬೈಲಹೊಂಗಲ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಕೆ.
ತವರು ಮನೆಯಲ್ಲೂ ಇರದೇ ಸವದತ್ತಿ ಪಟ್ಟಣದಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದ ಕಾಶಮ್ಮ. ಏಪ್ರಿಲ್ 5, 2025ರಂದು ನ್ಯಾಯಾಲಯದಿಂದ ವಿಚ್ಚೇದನ ಕೂಡ ಪಡೆದಿದ್ದ ಕಾಶಮ್ಮ. ಇದಾದ ಬಳಿಕವೂ ಹೆಂಡತಿಗೆ ಕರೆ ಮಾಡಿ ಬೈಯ್ಯವುದು ನಿಂದಿಸುತ್ತಿದ್ದ ಸಂತೋಷ.
ಅಕ್ಟೋಬರ್ 13ರಂದು ಸಂಜೆ ಎಂಟು ಗಂಟೆಗೆ ಕಾಶಮ್ಮನ ಬಳಿ ಹೋಗಿ ಗಲಾಟೆ. ಪತ್ನಿಯ ಕತ್ತು ಕೊಯ್ದು ಹೊಟ್ಟೆಗೆ ಇರಿದು ಮೂರು ಬಾರಿ ಕೊಚ್ಚಿ ಕೊಲೆ. ಬಳಿಕ ಅಲ್ಲಿಂದ ಎಸ್ಕೇಪ್ ಆಗಿದ್ದ ಪಾಪಿ ಗಂಡ ಸಂತೋಷ್. ಮೂರು ದಿನದ ಬಳಿಕ ದುರ್ವಾಸನೆ ಬಂದು ಪೊಲೀಸರಿಗೆ ಮಾಹಿತಿ.
ಸ್ಥಳೀಯರಿಂದ ಸವದತ್ತಿ ಪೊಲೀಸರಿಗೆ ಕೊಲೆಯ ಮಾಹಿತಿ. ಕೊಲೆ ಕೇಸ್ ದಾಖಲಿಸಿಕೊಂಡು ಸವದತ್ತಿ ಪೊಲೀಸರ ತನಿಖೆ. ಪರಾರಿಯಾದ ಆರೋಪಿ ಸಂತೋಷನನ್ನ ಬಂಧಿಸಿದ ಪೋಲಿಸರು.
ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದ ನಿವಾಸಿ. ಹದಿಮೂರು ವರ್ಷದ ಹಿಂದೆ ಕಾಗವಾಡದ ಸಂತೋಷ್ ಕಾಂಬ್ಳೆ ಎಂಬಾತನ ಪ್ರೀತಿಸಿ ಮದುವೆಯಾಗಿದ್ದ ಈಕೆ ಮೊನ್ನೆ ಅಂದ್ರೇ ಅಕ್ಟೋಬರ್ 13 ರಂದು ಬರ್ಬರವಾಗಿ ಕೊಲೆಯಾಗಿ ಹೋಗಿದ್ದಳು. ಹತ್ಯೆಯಾದ ನಾಲ್ಕು ದಿನದ ಬಳಿಕ ಆಕೆ ಸಾವಿನ ವಿಚಾರ ಹೊರ ಬಂದಿತ್ತು.
ಬಾಡಿಗೆ ಮನೆ ಮಾಡಿ ಒಂಟಿಯಾಗಿ ಜೀವನ ಮಾಡ್ತಿದ್ದ ಈಕೆ ಅಂದು ಕೂಡ ಕಂಡಕ್ಟರ್ ನೌಕರಿ ಮುಗಿಸಿ ರಾತ್ರಿ ಮನೆಗೆ ವಾಪಾಸ್ ಆಗಿದ್ದಳು. ಇದಾದ ಬಳಿಕ ನಾಲ್ಕು ದಿನ ಎಲ್ಲಿಯೂ ಕಾಣಿಸದಾಕೆ ಬಳಿಕ ಹೆಣವಾಗಿಯೇ ಪತ್ತೆಯಾಗಿದ್ದಳು. ಮನೆಯಿಂದ ದುರ್ವಾಸನೆ ಬಂದ ಬಳಿಕ ಅಕ್ಕಪಕ್ಕದ ನಿವಾಸಿಗಳು ಪೊಲೀಸರಿಗೆ ವಿಚಾರ ಮುಟ್ಟಿಸಿದ್ರೂ.
ಸ್ಥಳಕ್ಕೆ ಬಂದು ನೋಡಿದ ಪೊಲೀಸರಿಗೆ ಆಕೆ ಸತ್ತು ನಾಲ್ಕು ದಿನ ಆಗಿದೆ ಅನ್ನೋದು ಗೊತ್ತಾಗಿತ್ತು. ಶವವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿ ಬಳಿಕ ಕಾಶಮ್ಮ ತವರು ಮನೆ ಕಡೆಯಿಂದ ಕೊಲೆ ಕೇಸ್ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದರು.
ಈ ವೇಳೆ ಗೊತ್ತಾಗಿದ್ದು ಆಕೆಯನ್ನ ಸಾಯಿಸಿದ್ದುಬ ಬೇರೆ ಯಾರು ಅಲ್ಲಾ ಬದಲಿಗೆ ಆಕೆಯನ್ನ ಮದುವೆ ಮಾಡಿಕೊಂಡಿದ್ದ ಗಂಡನೇ ಅನ್ನೋದು ಗೊತ್ತಾಗಿತ್ತು. ಕೂಡಲೇ ಆತನನ್ನ ಹುಡುಕುವ ಪ್ರಯತ್ನ ಮಾಡಿದ್ರೂ ಪೋನ್ ಬಂದ್ ಮಾಡಿಕೊಂಡು ಪರಾರಿಯಾಗಿದ್ದ…
ಇನ್ನೂ ಕೊಲೆ ಕೇಸ್ ದಾಖಲಿಸಿಕೊಂಡು ಸವದತ್ತಿ ಠಾಣೆ ಪೊಲೀಸರು ಆರೋಪಿ ಸಂತೋಷ್ ಕಾಂಬ್ಳೆಗೆ ನಿರಂತರ ಶೋಧ ನಡೆಸಿ ಕಡೆಗೂ ಊರು ಬಿಟ್ಟು ಸಂಬಂಧಿಕರ ಮನೆ ಸೇರಿದವನನ್ನ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೂ ಆತನನ್ನ ಬಂಧಿಸಿ ವಿಚಾರಣೆ ನಡೆಸಿದಾಗ ತಾನೇ ಪತ್ನಿಯನ್ನ ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದು ಅಂತಾ ಒಪ್ಪಿಕೊಂಡಿದ್ದಾನೆ.
ಐದು ತಿಂಗಳ ಹಿಂದೆ ಅಂದ್ರೇ ಏಪ್ರಿಲ್ 5ರಂದು ಬೈಲಹೊಂಗಲ ಕೋರ್ಟ್ ನಲ್ಲಿ ವಿಚ್ಚೇದನ ಆಗಿರುತ್ತೆ. ಇಲ್ಲಿ ಹತ್ತು ವರ್ಷದ ಮಗುವನ್ನ ತಾಯಿ ಸಾಕಬೇಕು ಅಂತಾನೂ ಆಗಿರುತ್ತೆ. ಯಾವಾಗ ಮಗನೂ ತನ್ನೊಟ್ಟಿಗೆ ಇರಿಸಿಕೊಳ್ಳಲು ಆಗಲಿಲ್ಲ ಅನ್ನೋದು ಈತನ ತಲೆಯಲ್ಲಿ ಘಾಡವಾದ ಆಲೋಚನೆಗೆ ಕಾರಣವಾಯಿತೋ ಆಗ ಕಾಶಮ್ಮ ಕಥೆ ಮುಗಿಸಿದ್ರೇ ಎಲ್ಲಾ ಸರಿ ಹೋಗುತ್ತೆ ಅಂದುಕೊಳ್ಳುತ್ತಾನೆ.
ಅದರಂತೆ ಅ.13 ಆಕೆಯ ಡ್ಯೂಟಿ ಮುಗಿಯುವವರೆಗೂ ಬಸ್ ನಿಲ್ದಾಣದಲ್ಲಿ ಕಾದು ಬಳಿಕ ಆಕೆಯನ್ನ ಮನೆ ವರೆಗೂ ಹಿಂಬಾಲಿಸಿಕೊಂಡು ಹೋಗಿ ಮಗ ತನ್ನೊಟ್ಟಿಗೆ ಇರ್ತಾನೆ ತನಗೆ ಒಪ್ಪಿಸು ಅಂತಾ ಕೇಳಿದ್ದಾನೆ. ಇದಕ್ಕೆ ಕಾಶಮ್ಮ ಒಪ್ಪಿಲ್ಲ ಇದರಿಂದ ಕೆರಳಿದ ಪಾಪಿ ಪತ್ನಿಯನ್ನ ಅಲ್ಲೇ ಕಥೆ ಮುಗಿಸಿ ಎಸ್ಕೇಪ್ ಆಗಿದ್ದ.
ಇನ್ನೂ ಮಗ ಹತ್ತು ವರ್ಷದನಿದ್ದು ಆತನನ್ನ ತಾಯಿ ಮನೆಯಲ್ಲಿ ಬಿಟ್ಟಿರುತ್ತಾಳೆ. ಇದರಿಂದ ಆ ದಿನ ಮಗ ಕೂಡ ಮನೆಯಲ್ಲಿ ಇರಲಿಲ್ಲ ಪತ್ನಿ ಕೊಂದು ಪರಾರಿಯಾದವ ಕಡೆಗೂ ಪೊಲೀಸರ ಬಲೆಗೆ ಬಿದ್ದು ಇದೀಗ ಕಂಬಿ ಎನಿಸುತ್ತಿದ್ದಾನೆ…
ಇನ್ನೂ ಆಕೆಯ ಕೊಲೆ ಮಾಡುವ ಎಂಟು ತಿಂಗಳ ಮೊದಲು ಪಾಪಿ ಸಂತೋಷ್ ಆಕೆ ಮೇಲೆ ಹಲ್ಲೆ ಮಾಡಿರುತ್ತಾನೆ. ನಿಪ್ಪಾಣಿ ಠಾಣೆಯಲ್ಲಿ ಕರ್ತವ್ಯ ನಿರ್ವಣೆ ಮಾಡ್ತಿದ್ದವ ಅಂದು ಪತ್ನಿ ಮೇಲೆ ಹಲ್ಲೆ ಮಾಡಿ ಡ್ಯೂಟಿಯಿಂದ ಅಮಾನತು ಆಗಿರುತ್ತಾನೆ.
ಜೊತೆಗೆ ಇಲಾಖೆ ವತಿಯಿಂದ ತನಿಖೆ ಕೂಡ ಎದುರಿಸುತ್ತಿರುತ್ತಾನೆ. ಕೆಲಸ ಇಲ್ಲಾ ಜೊತೆಗೆ ಪತ್ನಿ ಕೂಡ ಬಿಟ್ಟು ಹೋದ್ಲೂ ಇದೀಗ ಮಗ ಕೂಡ ತನ್ನ ಪಾಲಿಗೆ ಸಿಗಲಿಲ್ಲ ಅಂದುಕೊಂಡವ ಕಡೆಗೆ ಹೆಂಡತಿಯನ್ನ ಕೊಂದು ತಾನು ಜೈಲು ಸೇರಿದ್ದಾನೆ. ಪತ್ನಿ ಮಸಣ ಸೇರಿದ್ರೇ ಪಾಪಿ ಗಂಡ ಜೈಲುಪಾಲಾಗಿದ್ದು ಆದ್ರೆ ಹತ್ತು ವರ್ಷದ ಮಗ ಬೀದಿಪಾಲಾಗಿದ್ದು ದುರಂತವೇ ಸರಿ…