ಉ.ಕ ಸುದ್ದಿಜಾಲ ಉ.ಕನ್ನಡ :

ಸ್ನೇಹಿತನ ಜೊತೆ ಜೋಗನ ಹಕ್ಕಲು ಫಾಲ್ಸ್ ನೋಡಲೆಂದು ಹೋಗಿದ್ದ ಯುವಕ ಕಾಲು ಜಾರಿಬಿದ್ದು ನಾಪತ್ತೆಯಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.

ಇಲ್ಲಿನ ಶಿರಸಿ ತಾಲೂಕಿನ ಜೋಗನ ಹಕ್ಕಲು ಪಾಲ್ಸ್ ನಲ್ಲಿ ಈ ದುರಂತ ಸಂಭವಿಸಿದೆ. ಸೋಮನಹಳ್ಳಿ ಗ್ರಾಮದ ಪವನ್ ಗಣಪತಿ ಜೋಗಿ (24) ನಾಪತ್ತೆಯಾಗಿರುವ ಯುವಕ.

ಸ್ನೇಹಿತ ವಾಸುದೇವ್ ಜೊತೆ ಜಲಪಾತ ನೋಡಲೆಂದು ಹೋಗಿದ್ದ. ಜಲಪಾತದ ಬಳಿ ರಭಸವಾಗಿ ಹರಿಯುತ್ತಿದ್ದ ಹಳ್ಳವನ್ನು ದಾಟುವಾಗ ಕಾಲು ಜಾರಿ ಆಕಸ್ಮಿಕವಾಗಿ ಕೆಳಗೆ ಬಿದ್ದು, ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ.

ಘಟನಾ ಸ್ಥಳಕ್ಕೆ ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿದ್ದು, ಯುವಕನಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ.