ಉ.ಕ ಸುದ್ದಿಜಾಲ ವಿಜಯಪುರ :

ಚಡಚಣ ಪಟ್ಪಣಲ್ಲಿ ಎಸ್ ಬಿಐ ಬ್ಯಾಂಕ್ ದರೋಡೆ ಪ್ರಕರಣ ವಿಜಯಪುರ ಜಿಲ್ಲೆಯ ಮನಗೂಳಿ ಕೆನರಾ ಬ್ಯಾಂಕ್ ದರೋಡೆ ಬೆನ್ನಲ್ಲೇ. ಚಡಚಣ ಪಟ್ಟಣದಲ್ಲಿರೋ ಎಸ್ ಬಿಐ ಬ್ಯಾಂಕ್ ದರೋಡೆ…

ಮಹಾರಾಷ್ಟ್ರದತ್ತ ಖದೀಮರು ಎಸ್ಕೇಪ್ ಆಗಿರೋ ಹಿನ್ನೆಲೆ. ಕರ್ನಾಟಕ ಮಹಾರಾಷ್ಟ್ರ ಪೊಲೀಸರಿಂದ ದರೋಡೆಕೋರರಿಗಾಗಿ ತಲಾಶ್. ವಿಜಯಪುರ ಜಿಲ್ಲೆಯಲ್ಲಿ ನಾಲ್ಕು ತಿಂಗಳದೊಳಗೆ ಪ್ರತಿಷ್ಠಿತ ರಾಷ್ಟ್ರೀಕೃತ ಎರಡು ಬ್ಯಾಂಕ್ ದರೋಡೆ…

ಎ‌ಸ್ ಬಿಐ ಗ್ರಾಹಕರಲ್ಲಿ ಟೆನ್ಷನ್. ಮನಗೂಳಿಯಲ್ಲಿ ಮೇ 25ರಂದು 58ಕೆಜಿ ಚಿನ್ನಾಭರಣ,5ಲಕ್ಷ 30 ಸಾವಿರ ನಗದು ದೋಚಿದ್ದ ಖದೀಮರು. ಮನಗೂಳಿ ಬ್ಯಾಂಕ್ ದರೋಡೆ ಪ್ರಕರಣ ಭೇದಿಸಿದ್ದ ವಿಜಯಪುರ ಪೊಲೀಸರು. ಇದೀಗ ಚಡಚಣ ಪಟ್ಟಣದ ಎಸ್ ಬಿ ಐ ಬ್ಯಾಂಕ್ ದರೋಡೆ ಪ್ರಕರಣ ಪೊಲೀಸರಿಗೆ ಚಾಲೆಂಜ್…

ಚಡಚಣ ಎಸ್ ಬಿಐ ಬ್ಯಾಂಕ್ ನಲ್ಲಿ 1ಕೋಟಿ ನಗದು 12ರಿಂದ 13 ಕೆಜಿ ಚಿನ್ನಾಭರಣ ಕಳ್ಳತನ. ನಮ್ಮ ಚಿನ್ನಾಭರಣ ಹೋಗಿದೆಯಾ ಅನ್ನೋದರ ಬಗ್ಗೆ ಮಾಹಿತಿ ಪಡೆಯಲು ಬಂದ ಗ್ರಾಹಕರು. ಬ್ಯಾಂಕ್ ಲಾಕ್ ಮಾಡಿರುವ ಪೊಲೀಸರು…

ಬ್ಯಾಂಕ್ ಕಡೆಗೆ ಆಗಮಿಸುತ್ತಿರೋ ಗ್ರಾಹಕರು. ಸಿಬ್ಬಂದಿಗಾಗಿ ಕಾಯುತ್ತಿರುವ ಗ್ರಾಹಕರು. ಮತ್ತೊಂದು ಕಡೆ ಆರೋಪಿಗಳ ಪತ್ತೆಗೆ ಜಾಲ ಬೀಸಿರುವ ಪೊಲೀಸರು. ಮಹಾರಾಷ್ಟ್ರದ ವಿವಿಧ ಭಾಗಗಳಲ್ಲಿ ಆರೋಪಿಗಳಿಗಾಗಿ ತಲಾಶ್…

ಮಹಾರಾಷ್ಟ್ರದ ಹುಲಿಜಂತಿ ಗ್ರಾಮದ ಬಳಿ ದರೋಡೆಕೋರರ ಕಾರು ಅಪಘಾತ. ನಗದು ಚಿನ್ನಾಭರಣ ಸಾಗಿಸುತ್ತಿದ್ದ ಕಾರು ಕುರಿಗಳಿಗೆ ಡಿಕ್ಕಿ. ಬಳಿಕ ಕಾರು ಬಿಟ್ಟು ನಗದು ಚಿನ್ನಾಭರಣ ತೆಗೆದುಕೊಂಡು ದರೋಡೆಕೋರರು ಪರಾರಿ….