ಉ.ಕ ಸುದ್ದಿಜಾಲ ವಿಜಯಪುರ :

ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ‌ ಚಿಮ್ಮಲಗಿ 2  ಗ್ರಾಮದ ಅರಳೆಲೆ ಕಟ್ಟಿಮನಿ ಹಿರೇಮಠದ ಪಿಠಾಧೀಪತಿ ನೀಲಕಂಠ ಸ್ವಾಮೀಜಿ‌ ಲಿಂಗೈಕ್ಯರಾಗಿದ್ದಾರೆ.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಚಿಮ್ಮಲಗಿ‌ 2 ಗ್ರಾಮದ ಶ್ರೀ ನೀಲಕಂಠ ಸ್ವಾಮೀಜಿ‌ (92) ಲಿಂಗೈಕ್ಯರಾಗಿದ್ದು, ಇಂದು  ಸಾಯಂಕಾಲ‌ 4ಗಂಟೆಗೆ ನಡೆಯಲಿರುವ ಸ್ವಾಮೀಜಿಗಳ ಅಂತ್ಯಕ್ರಿಯೆ.

ಚಿಮ್ಮಲಗಿ 2 ಗ್ರಾಮದಲ್ಲಿ ನಡೆಯಲಿರುವ ಅಂತ್ಯಕ್ರಿಯೆ.ಶ್ರೀಗಳ ಅಗಲಿಕೆಗೆ ಜಿಲ್ಲೆಯ ಮಠಾಧೀಶರ, ರಾಜಕಾರಣಿಗಳ, ಗಣ್ಯರ  ಸಂತಾಪ ಸೂಚಿಸಿದ್ದಾರೆ. 15 ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸ್ವಾಮೀಜಿ..

ನಿನ್ನೆ ರಾತ್ರಿ ನೀಲಕಂಠ ಶಿವಾಚಾರ್ಯ ಸ್ವಾಮೀಜಿ ಲಿಂಗೈಕ್ಯ ಚಿಮ್ಮಲಗಿ, ಯಂಭತ್ನಾಳ, ವಿಜಯಪುರದಲ್ಲಿ ಶಾಖಾ ಮಠ ಹೊಂದಿರುವ ಶ್ರೀ. ವರ್ಷಗಳ ಹಿಂದಷ್ಟೇ ಮಠಕ್ಕೆ ರೇಣುಕಾ ದೇವರನ್ನು ಮುಂದಿನ ಪೀಠಾಧಿಪತಿ ಅಂತ ನೇಮಿಸಿದ್ದ ಶ್ರೀ…

1999 – 2000ರಲ್ಲಿ 13 ತಿಂಗಳು ಮೌನಾನುಷ್ಠಾನ ಕೈಗೊಂಡು ಭಕ್ತರ ಪ್ರೀತಿಗೆ ಪಾತ್ರರಾಗಿದ್ದ ನೀಲಕಂಠ ಶಿವಾಚಾರ್ಯ ಸ್ವಾಮೀಜಿ.