ಯಾದಗಿರಿ :

ಹೊಟೇಲ್‌ನಲ್ಲಿ ಊಟ ಮಾಡಿ ಬರುವ ವೇಳೆ ವಿದ್ಯುತ್ ತಂತಿ ತಗುಲಿ ಸಾವನಪ್ಪಿರುವ ಘಟನೆ ಯಾದಗಿರ ಜಿಲ್ಲೆಯ ಗುರುಮಠಕಲ ತಾಲೂಕಿನ ನಾರಾಯಣಪೇಟನ ಸಿಂಗಾರಂ ಕ್ರಾಸ್ ಬಳಿ ನಡೆದಿದೆ.

ಯಾದಗಿರ ಜಿಲ್ಲೆಯ ಗುರಮಿಠಕಲ್ ಪಟ್ಟಣದ ನಿವಾಸಿಗಳಾದ ವಂಶಿರಾಜ್ ಪತ್ತಿ (21) ಮತ್ತು ರವಿ ಹೂಗಾರ (22 )  ಸಾವನ್ನಪ್ಪಿದ ದುರ್ದೈವಿಗಳು. ಕೆಲಸದ ನಿಮಿತ್ಯ ಹೋಗಿ ನಾರಾಯಣಪೇಟನಲ್ಲಿರುವ ಹೋಟೆಲ್ ಒಂದರಲ್ಲಿ ಊಟ ಮುಗಿಸಿಕೊಂಡು ಬರುತ್ತಿರುವಾಗ ಹೋಟೆಲ್ ಮೇಲೆಯೇ ಹಾದು ಹೋದ ವಿದ್ಯುತ್ ತಂತಿ ತಗುಲಿದೆ.

ಗೆಳೆಯನನ್ನು ರಕ್ಷಿಸಲು ಹೋದ ಇನ್ನೊಬ್ಬ ಮಿತ್ರನಿಗೂ ವಿಧ್ಯುತ್ ತಗುಲಿ ಸಾವನ್ನಪ್ಪಿದ್ದಾರೆ. ಹೋಟೆಲ್ ಮಾಲೀಕ ಮತ್ತು ವಿದ್ಯುತ್ ಇಲಾಖೆಯ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎನ್ನಲಾಗಿದೆ. ಈ ಕುರಿತು  ನಾರಾಯಣಪೇಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

   ‌‌‌