ಮಂಡ್ಯ :

ಮಂಡ್ಯದ ಮಳವಳ್ಳಿ ತಾಲ್ಲೂಕಿನ ದೇವಿಪುರ ಗ್ರಾಮದಲ್ಲಿ‌ ದಾಖಲೆ ನಿರ್ಮಿಸಿದ ಬಂಡೂರು ಟಗರು‌ ಸುಮಾರು 1 ಲಕ್ಷದ 91 ಸಾವಿರಕ್ಕೆ ಮಾರಟವಾಗುವ ಮೂಲಕ ದಾಖಲೆ ನಿರ್ಮಿಸಿದೆ.

ದೇವಿಪುರ ಗ್ರಾಮದ ಸಣ್ಣಪ್ಪ ಟಗರು ಮಾರಿದ ವ್ಯಕ್ತಿ. ಇವರು 2 ವರ್ಷದ ಹಿಂದೆ 1 ಲಕ್ಷದ 5 ಸಾವಿರಕ್ಕೆ ಬಂಡೂರು ಟಗರು ಖರೀದಿಸಿದ್ದರು. ಅದೇ ಟಗರನ್ನ ಇಂದು 1 ಲಕ್ಷದ 91 ಸಾವಿರಕ್ಕೆ ಖರೀದಿಸಿದ ಬಿದರಕೋಟೆ ಕೃಷ್ಣಪ್ಪ. ದೇವಿಪುರ ಸೇರಿದಂತೆ ನಾಲ್ಕೈದು ಗ್ರಾಮಗಳಲ್ಲಿ ಟಗರಿನ ಮೆರವಣಿಗೆ ಮಾಡಲಾಗಿದೆ. ಪೂಜೆ ಮಾಡಿ, ಹಾರ ಹಾಕಿ ಟಗರಿನ ಜೊತೆ ಮೆರವಣಿಗೆ ಹೊರಟ ದೇವಿಪುರ ಗ್ರಾಮಸ್ಥರು. ಮಾರಾಟದಲ್ಲಿ ದಾಖಲೆ ನಿರ್ಮಿಸಿದ ಟಗರು ನೋಡಲು ಆಗಮಿಸಿದ ಜನಗಳ ದಂಡು.