ಉ.ಕ ಸುದ್ದಿಜಾಲ ಬೆಳಗಾವಿ :

ಬೆಳಗಾವಿ ಚಳಿಗಾಲದ ಅಧಿವೇಶನದ ಮೂರನೇ ದಿನವು ಪ್ರತಿಭಟನೆ ಕಾವು ಶಕ್ತಿಸೌಧದ ಹೊರಗೆ ಮೂರನೇ ದಿನವು ಸಾಲು ಸಾಲು ಪ್ರತಿಭಟನೆಗಳು ಇಂದು 6 ಸಂಘಟನೆಗಳಿಂದ ಪ್ರತಿಭಟನೆ, 2 ಸಂಘಟನೆಗಳಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲಿವೆ.

ಅಖಿಲ ಕರ್ನಾಟಕ ರೈತ ಸಂಘದಿಂದ ಹೋರಾಟ, ರಾಜ್ಯದ ರೈತರ ಸಾಲ ಮನ್ನಾ ಮಾಡಬೇಕು, ಕರೆಗಳ ಒತ್ತುವರಿ ತೆರುವು ಮಾಡಬೇಕು. ಖಾನಾಪುರ ತಾಲೂಕಿನ ರೈತರಿಗೆ ಮಲಪ್ರಭಾ ನದಿಯಿಂದ ಏತ ನೀರಾವರಿ ಯೋಜನೆ ಕಲ್ಪಿಸಲು ಒತ್ತಾಯ.

ಕರ್ನಾಟಕ ರಾಜ್ಯ ನೇಕಾರರ ಸಂಘದಿಂದ ಹೋರಾಟ ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡ 46 ನೇಕಾರ ಕುಟುಂಬಗಳಿಗೆ 10 ಲಕ್ಷ ಪರಿಹಾರ ಕೊಡಬೇಕು. ನೇಕಾರರಿಗೂ ಕಟ್ಟಡ ಕಾರ್ಮಿಕರ ಮಾದರಿಯಲ್ಲಿ ಕಾರ್ಮಿಕ ಸೌಲಭ್ಯ ಒದಗಿಸಲು ಪ್ರತಿಭಟನೆ.

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ
ರಾಜ್ಯದಲ್ಲಿ ಸರ್ಕಾರಿ ಶಾಲೆಗಳನ್ನ ಮುಚ್ಚಬಾರದು. ಗಡಿ ಭಾಗದಲ್ಲಿ ಹೊಸ ಸರ್ಕಾರಿ ಶಾಲೆ ಆರಂಭಿಸಬೇಕು
ಕಿತ್ತೂರು, ಖಾನಾಪುರ ತಾಲೂಕುಗಳನ್ನ ಬೆಳಗಾವಿ ಲೋಕಸಭೆ ಗೆ ಸೇರಿಸಲು ಆಗ್ರಹ.

ಕರ್ನಾಟಕ ರಾಜ್ಯ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳ ಪ್ರತಿಭಟನೆ. ಖಾಸಗಿ ಐಟಿಐ ಕಾಲೇಜುಗಳ ಸಿಬ್ಬಂದಿಯನ್ನ ವೇತನಾನುದಾನಕ್ಕೆ ಒಳಪಡಿಸಲು ಒತ್ತಾಯ. ಭಾರತೀಯ ಕಿಸಾನ ಸಂಘದಿಂದ ಬರ ಪರಿಹಾರ ಒದಗಿಸಲು ಪ್ರತಿಭಟನೆ ನಡೆಯಲಿದೆ.