ಉ.ಕ ಸುದ್ದಿಜಾಲ ಅಥಣಿ :

ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹಾಗೂ ಅವರ ಸುಪುತ್ರ ಚಿದಾನಂದ ಸವದಿ ವಿರುದ್ಧ ಡಿಸಿಸಿ ಬ್ಯಾಂಕ್ ಯುನಿಯನ್ ಅಧ್ಯಕ್ಷನ ಮೇಲೆ ಹಲ್ಲೆ ಮಾಡಿದ ಆರೋಪ‌ ಕೇಳಿ ಬಂದಿದೆ. ಹಲ್ಲೆಗೊಳಗಾದ ಉದ್ಯೋಗಿ ನೇರವಾಗಿ ಸವದಿ ಹಾಗೂ ಅವರ ಸುಪುತ್ರನ ಮೇಲೆ ಆರೋಪ ಮಾಡ್ತಿದ್ದರೆ ಆ ಆರೋಪವನ್ನು ಸವದಿ ತಳ್ಳಿ ಹಾಕಿದ್ದಾರೆ.

ಬೆಳಗಾವಿ ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿ ತಲೆಗೆ ಗಂಭೀರ ಗಾಯ ಮಾಡಿಕೊಂಡು ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿ ನಿಂಗರಾಜ್ ಕರೆಣ್ಣವರ ಈತ ಬೆಳಗಾವಿ ಡಿಸಿಸಿ ಬ್ಯಾಂಕ್ ವರ್ಕರ್ ಯುನಿಯನ್ ಅಧ್ಯಕ್ಷ ನಿನ್ನೆ ಅಥಣಿಯಲ್ಲಿರುವ ಮಾಜಿ ಡಿಸಿಎಂ ಸವದಿ ಮನೆಗೆ ಯುನಿಯನ್ ಅಧ್ಯಕ್ಷ ನಿಂಗರಾಜ್ ತೆರಳಿದ್ದರು ಇದೇ ವೇಳೆ ಗಲಾಟೆಯಾಗಿದೆ ಸವದಿ ಹಾಗೂ ಅವರ ಸುಪುತ್ರ ಚಿದಾನಂದ ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಅಂತ ನಿಂಜರಾಜ್ ಕರೆಣ್ಣವರ್ ನೇರವಾಗಿ ಸವದಿ ಹಾಗೂ ಸವದಿ ಪುತ್ರನ ಮೇಲೆ ಆರೋಪ ಮಾಡಿದ್ದಾರೆ. ಅಲ್ಲದೆ ಅವರ ಮೇಲೆ ಕ್ರಮಕ್ಕೆ ಆಗ್ರಹಿಸಿರುವ ನಿಂಗರಾಜ್ ರಕ್ತಸಿಕ್ತವಾಗಿಯೇ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ..

ಇನ್ನು ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಲಕ್ಷ್ಮಣ ಸವದಿ ನಿಂಗರಾಜ್ ಅವರ ಆರೋಪವನ್ನು ತಳ್ಳಿ‌ ಹಾಕಿದ್ದಾರೆ. ಡಿಸಿಸಿ ಬ್ಯಾಂಕ್ ವರ್ಕರ್ ಯುನಿಯನ್ ವಿಚಾರವಾಗಿಯೇ ಅವರಲ್ಲಿಯೇ ಸಮಸ್ಯೆಗಳಿವೆ. ಅದೇ ವಿಚಾರವಾಗಿ ನಮ್ಮ‌ ಮನೆಗೆ ಅವರು ಇಂದು ಚರ್ಚೆ ಮಾಡಲು ಬಂದಿದ್ದರು.

ಅದನ್ನ ನಮ್ಮ ಮುಂದೆ ಚರ್ಚೆ ಮಾಡಬೇಡಿ ಅದನ್ನ ನೀವೆ ಮಾತನಾಡಿಕೊಂಡು ಬಗೆಹರಿಸಿಕೊಳ್ಳಿ ಎಂದು ಹೇಳಿದ್ದೆನೆ. ಹೊರಗಡೆ ಶ್ರೀಕಾಂತ್ ಆಲಗೂರು ಎಂಬ ನಮ್ಮ ಕಾರ್ಯಕರ್ತ ಇದ್ದ ನಿಮ್ಮ ವಿಚಾರ ಇಲ್ಲಿಗ್ಯಾಕೆ ತಂದಿದ್ದಿರಿ ಅಂತ ಕೇಳಿದ್ದಾನೆ. ಆ ಸಂದರ್ಭದಲ್ಲಿ ಅವರವರ ನಡುವೆ ನೂಕಾಟ ತಳ್ಳಾಟ ನಡೆದಿದೆ. ಇದು ಅವರಿಬ್ಬರ ಗಲಾಟೆ ಅದಕ್ಕೂ ನಮಗೂ ಸಂಬಂಧವಿಲ್ಲ ಎಂದು ಸವದಿ ಹೇಳಿದ್ದಾರೆ.

ಇನ್ನು‌ ನಿಮ್ಮ ಮೇಲೆ ಯಾಕೆ ಆರೋಪ ಮಾಡ್ತಿದ್ದಾರೆ ಎಂಬ ಪ್ರಶ್ನೆಗೆ ನನ್ನ ಮೇಲೆ ಆರೋಪ ಮಾಡು ಅಂತ ಯಾರಾದರೂ ಹೇಳಿರಬಹುದು ಅದಕ್ಕೆ ನನ್ನ ಮೇಲೆ ಆರೋಪ ಮಾಡಿದ್ದಾರೆ. ತನಿಖೆಯಾಗಿ ಸತ್ಯಾಂಶ ಹೊರ‌ಬರಲಿ ಎಂದು ಸವದಿ ಹೇಳಿದ್ದಾರೆ.

ಇನ್ನು ಘಟನೆ ನಡೆಯುತ್ತಿದ್ದಂತೆ DCC ಬ್ಯಾಂಕ್ ಸಿಬ್ಬಂದಿ ಬ್ಯಾಂಕ್ ಬಂದ ಮಾಡಿ ಕರೆಣ್ಣವರ ಬೆಂಬಲಕ್ಕೆ ನಿಂತಿದ್ದು ತಪ್ಪಿತಸ್ಥರ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಪೊಲೀಸರ ಜೋತೆಯೆ ವಗ್ವಾದ ನಡೆಸಿದ್ದಾರೆ. ಘಟನೆಗೆ ರಾಜಕೀಯ ಕೂಡ ಎಂಟ್ರಿ ಕೊಟ್ಟಿದ್ದು ಅಥಣಿ ಸರ್ಕಾರಿ ಆಸ್ಪತ್ರೆಗೆ ಮಾಜಿ ಶಾಸಕ ಮಹೇಶ್ ಕುಮಟಳ್ಳಿ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.

ಇನ್ನೂ ಹೆಚ್ಚಿನ‌ ಚಿಕಿತ್ಸೆಗೆ ಬೆಳಗಾವಿ ಖಾಸಗಿ ಆಸ್ಪತ್ರೆಗೆ ನಿಂಗರಾಜ್ ಕರೆಣ್ಣವರ ದಾಖಲು ಮಾಡಲಾಗಿದೆ. ನಿನ್ನೆ ಸಂಜೆ ಹೊತ್ತಿಗೆ ಅಥಣಿ ಪ್ರಮುಖ ರಸ್ತೆ ಬಂದ ಮಾಡಿದ ಡಿಸಿಸಿ ಬ್ಯಾಂಕ ಸಿಬ್ಬಂಧಿಗಳು ನಮ್ಮ ಅಧ್ಯಕ್ಷನಿಗೆ ನ್ಯಾಯ ಸಿಗುವವರೆಗೂ ಹೋರಾಟ‌ ಮಾಡತ್ತಿವಿ ಎಂದು ಆಕ್ರೋಶ ವ್ಯಕ್ತಪಡಿಸಿದ ಬಳಿಕ ಅಥಣಿ ಪೋಲಿಸ್ ಠಾಣೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ನಿನ್ನೆ ಡಿಸಿಸಿ ಬ್ಯಾಂಕ್ ಲೇಬರ್ ಯೂನಿಯನ್ ಅಧ್ಯಕ್ಷ ನಿಂಗಪ್ಪ ಕರೆಣ್ಣವರ್ ಆರೋಗ್ಯ ವಿಚಾರಣೆ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೇಬ ಜೋಲ್ಲೆ ಹಾಗೂ ನಿರ್ದೇಶಕರಿಂದ ಆರೋಗ್ಯ ವಿಚಾರಣೆ ಬೆಳಗಾವಿ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹ ಭೇಟಿ ಬಳಿಕ ಮಾದ್ಯಮಗಳಿಗೆ ಅಣ್ಣಾಸಾಹೇಬ ಜೋಲ್ಲೆ ಪ್ರತಿಕ್ರಿಯೆ ಹಲ್ಲೆಗೆ ಕಾರಣ ಏನು ಅಂತ ಗೊತ್ತಾಗಿಲ್ಲ, ಈ ರೀತಿ ಹಲ್ಲೆ ಮಾಡುವುದು ಸರಿಯಲ್ಲ ಎಂದರು.

ಒಟ್ಟಿನಲ್ಲಿ ಘಟನೆಯು ಸವದಿಯವರ ಮನೆಯಲ್ಲಿಯೇ ಆಗಿದ್ದು ಅವರ ಮನೆಯ ಸಿಸಿಟಿವಿಯೇ ಈ ಘಟನೆಗೆ ಸಾಕ್ಷಿ ಹೇಳಬೇಕಿದೆ. ಒಂದು ಕಡೆ ಹಲ್ಲೆಗೊಳಗಾದ ನಿಂಗರಾಜ್ ಸವದಿ ಹಾಗೂ ಅವರ ಪುತ್ರನ ಮೇಲೆ ನೇರವಾಗಿ ಆರೋಪ ಮಾಡ್ತಿದ್ರೆ ಇತ್ತ ಆ ಆರೋಪವನ್ನು ಸವದಿ ತಳ್ಳಿ ಹಾಕಿದ್ದಾರೆ. ಸಧ್ಯ ಪೊಲೀಸರ ತನಿಖೆಯಿಂದಲೇ ಸತ್ಯಾಂಶ ಎನು ಎನ್ನುವುದು ಹೊರ ಬರಬೇಕಿದೆ.