ಉ.ಕ ಸುದ್ದಿಜಾಲ ಕಾಗವಾಡ :
ಲಕ್ಷ್ಮಣ ಸವದಿ ನಂದು ನಲವತ್ತು ವರ್ಷದ ದೋಸ್ತಿ, ಸವದಿ ಪರ ಬ್ಯಾಟ್ ಬೀಸಿದ ಕಾಗವಾಡ ಶಾಸಕ ರಾಜು ಕಾಗೆ. ನಂದು ಅವರದು ಏನು ಭಿನ್ನಾಭಿಪ್ರಾಯ ಬಂದಿಲ್ಲ. ಅವರ ಕೆಲಸದಲ್ಲಿ ಅವರು ಇದ್ದಾರೆ ನಮ್ಮ ಕೆಲಸದಲ್ಲಿ ನಾವು ಇದ್ದೇವೆ.
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರ ಪಟ್ಟಣದಲ್ಲಿ ಪ್ರತಿಕ್ರಿಯೆ ನೀಡಿದ ರಾಜು ಕಾಗೆ ನಮ್ಮದು ಅವರದು ಫ್ಯಾಮಿಲಿ ರಿಲೇಷನ್ ಇದೆ. ಸವದಿ ವಿರುದ್ಧ ಹಲ್ಲೆ ಆರೋಪ ವಿಚಾರ. ಅದರ ಬಗ್ಗೆ ಮಾಹಿತಿ ಇಲ್ಲ ನನಗೆ ತಿಳಿದಿಲ್ಲ ಎಂದರು.
ಡಿಸಿಸಿ ಬ್ಯಾಂಕ್ ಬೆಳವಣಿಗೆ ವಿಚಾರಕ್ಕೆ ರಾಜು ಕಾಗೆ ಬೇಸರ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಹಾಗೂ ಶಾಸಕ ರಾಜು ಕಾಗೆ ಡಿಸಿಸಿ ಬ್ಯಾಂಕಿನಲ್ಲಿ ಬಣಗಳ ರಾಜಕೀಯ ನಡೆಯುತ್ತಿದೆ. ಆ ವಾತಾವರಣಕ್ಕೆ ನನಗೆ ಹೊಂದೋದಕ್ಕೆ ಆಗುತ್ತಿಲ್ಲ ಎಂದು ಬೇಸರ ನಾನು ನೇರ ನಿಷ್ಠುರ ರಾಜಕಾರಣಿ, ಸುಳ್ಳು ಪಳ್ಳು ಚಾಡಿ ಚುಚ್ಚಿ ಅಧಿಕಾರ ಹಿಡಿದವನಲ್ಲ
ನಿಂಗರಾಜ ಕರೆಣ್ಣವರ ಮೇಲೆ ಶಾಸಕ ಸವದಿ ಹಲ್ಲೆ ಆರೋಪ ವಿಚಾರ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಹಾಗೂ ಶಾಸಕ ರಾಜು ಕಾಗೆ ಪ್ರತಿಕ್ರಿಯೆ ನನ್ನ ಗಮನಕ್ಕೆ ಈ ವಿಚಾರ ಮಾಧ್ಯಮಗಳಿಂದ ಬಂದಿದೆ ಡಿಸಿಸಿ ಬ್ಯಾಂಕ್ ಸಿಬ್ಬಂದಿ ಜಗಳದಿಂದ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
ಸವದಿ ಮೆಲಿನ ಆರೋಪ ಶಾಸಕ ರಾಜು ಕಾಗೆ ತಳ್ಳಿಹಾಕಿದ್ದಾರೆ ನಾವು ಹಲ್ಲೆ ಮಾಡಿಲ್ಲ ಎಂದು ಶಾಸಕ ಸವದಿ ಸ್ಪಷ್ಟನೆ ನೀಡಿದ್ದಾರೆ ಎಲ್ಲಾ ಘಟನೆಯನ್ನು ನಾನು ಮಾಧ್ಯಮಗಳಲ್ಲಿ ನೋಡಿದ್ದೇನೆ ಡಿಸಿಸಿ ಬ್ಯಾಂಕ ಸಭೆಗೆ ಬರುವಂತೆ ಜನರಲ್ ಮ್ಯಾನೇಜರ್ ಸಂದೇಶ ನೀಡಿದರು. ನನಗೆ ಬರುವುದಾಗುವುದಿಲ್ಲ ಎಂದು ನಿನ್ನೆ ತಿಳಿಸಿದ್ದೆ ಈ ಘಟನೆ ಆಗಬಾರದಾಗಿತ್ತು
ಶಾಸಕ ಸವದಿ ಹಲ್ಲೆ ಮಾಡಿದರೆ ಅದು ಕೂಡ ತಪ್ಪು ರಾಜಕೀಯ ಶೇಡ್ಯಂತರದಿಂದ ಏನಾದ್ರೂ ಮಾಡಿದ್ರೆ ಕರೆಣ್ಣವರನರ ತಪ್ಪು ಮುಂದಿನ ದಿನದಲ್ಲಿ ಸಂಧಾನ ಮಾಡಿ ಮಾತುಕತೆ ಮಾಡಲಾಗುವುದು ಈ ವಿಚಾರವಾಗಿ ಸವದಿ ನಾನು ದೂರವಾಣಿ ಮುಖಾಂತರ ಮಾತನಾಡಿಲ್ಲ.
ಶಂಕರ ನಂದೇಶ್ವರ ವರ್ಗಾವಣೆ ಹಿನ್ನೆಲೆ ಎಲ್ಲ ಸ್ಥಳಿಯ ಸೊಸೈಟಿ ಮೆಂಬರ್ ಗಳು ನನನ್ನ ಭೇಟಿ ಮಾಡಿದ್ದರು. ನಾನು ಯಾವುದೇ ತರಹದ ತಪ್ಪು ಮಾತನಾಡಿಲ್ಲ ಕೆಲವು ಮಾಧ್ಯಮಗಳು ಸವದಿ ಪರ ಬ್ಯಾಟಿಂಗ್ ಎಂದು ಬಿಂಬಿಸುತ್ತಿದ್ದಾರೆ ನಾನು ಯಾರ ಪರವಾಗಿ ಮಾತನಾಡಿಲ್ಲ
ಜಾರಕಿಹೊಳಿ ಸವದಿ ಕುಟುಂಬಗಳ ನಡುವೆ ವೈಮನಸು ವಿಚಾರ, ನಾನು ಯಾರ ಪರವಾಗಿ ಇಲ್ಲ, ಬಣಗಳಲ್ಲಿ ಗುರುತಿಸಿಕೊಂಡಿಲ್ಲ. ರಾಜಕೀಯ ವೈಮನ್ಸುಗಳಿಂದ ನಾನು ದೂರ ನಿದ್ದೇನೆ ನಾನು ಸಾಮಾನ್ಯ ಓರ್ವ ಶಾಸಕ ನನಗೆ ಯಾವುದೇ ಸಚಿವ ಸ್ಥಾನವಾಗಲಿ ದೊಡ್ಡ ಹುದ್ದೆಯಾಗಲಿ ಸಿಕ್ಕಿಲ್ಲ ಇದರಿಂದ ನಾನು ಜನರ ಜೊತೆಗೆ ಬೆರೆತು ಸಾಮಾನ್ಯರಂತೆ ಇದ್ದೇನೆ. ಅಧಿಕಾರ ಆಸೆಗಾಗಿ ಚಾಡಿ ಚುಚ್ಚುವ ಕೆಲಸವನ್ನು ಮಾಡಿಲ್ಲ.
ಕಳೆದ 35 ವರ್ಷಗಳಿಂದ ಸವದಿ ಬಗ್ಗೆ ನನಗೆ ಯಾವುದೇ ವೈಮನಸ್ಸಿಲ್ಲ ನಾನು ಡಿಸಿಸಿ ಸ್ಪರ್ಧೆಯಿಂದಲೇ ಇಷ್ಟೆಲ್ಲ ಆಗಿತ್ತಿದೆ ಎಂದು ನನಗೆ ಬೇಜಾರಾಗಿದೆ ಡಿಸಿಸಿ ಬ್ಯಾಂಕ್ ವಿಚಾರನಲ್ಲಿ ಬಣ ರಾಜಕೀಯ ನಡೆಯುತ್ತಿದೆ ನನಗೆ ಈ ವಾತಾವರಣ ಹೊಂದುತ್ತಿಲ್ಲ ಯಾಕೆ ನಾನು ಇಲ್ಲಿ ಸ್ಪರ್ಧೆ ಮಾಡಿನೆಂದು ನನಗೆ ಬೇಸರ ಮೂಡಿಸುತ್ತಿದೆ ಬೆಳಗಾವಿ ಜಿಲ್ಲೆಯ ಕಾಗವಾಡದಲ್ಲಿ ಶಾಸಕ ರಾಜು ಕಾಗೆ ಹೇಳಿಕೆ.
ದೀರ್ಘಾವಧಿ ಸಿಎಂ ಆಗಿ ಸಿದ್ದರಾಮಯ್ಯ ದಾಖಲೆ ವಿಚಾರ, ನಮ್ಮವರೇ ಇದ್ದಾರೆ ಸಂತಸ ಈ ಅವಧಿ ಪೂರ್ಣ ಮಾಡಲಿ. ಮುಂದೆ ಇನ್ನು ಹತ್ತು ವರ್ಷ ಅವರೇ ಮುಖ್ಯಮಂತ್ರಿ ಆಗಿರಬೇಕು. ಜನಪರ ಒಳ್ಳೆಯ ಕೆಲಸ ಮಾಡಬೇಕು ಅನ್ನೋದೆ ನಮ್ಮ ಆಶಯ ಎಂದರು.
ಫೆಬ್ರುವರಿ ನಂತರ ಪವರ್ ಸೇರಿಂಗ್ ವಿಚಾರ ಯಾರು ಸಿಎಂ ಆಗಬೇಕು ಯಾರ ಬಣ ಅದರಲ್ಲಿ ನಾವಿಲ್ಲ. ಯಾರ ಪರವಾಗಿಯೂ ಇಲ್ಲ, ಯಾರ ವಿರೋಧ ಇಲ್ಲ ಎಂದರು.
ಬಜೆಟ್ ನಂತರ ಸಿಎಂ ಬದಲಾವಣೆ ವಿಚಾರ, ಅದು ದೊಡ್ಡವರಿಗೆ ಗೊತ್ತು ನಮಗೇನು ಗೊತ್ತಿಲ್ಲ ಎಂದ ಕಾಗೆ. ಬಜೆಟ್ ದಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಹೆಚ್ಚಿನ ಅನುದಾನ ಬಗ್ಗೆ ಕೇಳುತ್ತೇವೆ. ಬಸವೇಶ್ವರ ಏತ ನೀರಾವರಿ ವಿಚಾರ, ಕೆರೆ ತುಂಬುವ ಯೋಜನೆ, ಶಿಕ್ಷಣ ಆರೋಗ್ಯ ಬಗ್ಗೆ ಕೇಳುತ್ತೇವೆ.
ಉತ್ತರ ಕರ್ನಾಟಕ ಪ್ರತ್ಯಕ ರಾಜ್ಯ ವಿಚಾರ, ಕಲ್ಯಾಣ ಕರ್ನಾಟಕಕ್ಕೆ ಪ್ರತಿ ವರ್ಷ 5 ಸಾವಿರ ಕೋಟಿ ಕೊಡ್ತೀರಿ. ನಮ್ಮ ಕಿತ್ತೂರು ಕರ್ನಾಟಕ ಭಾಗಕ್ಕೂ ಕೊಡ್ರಿ. ನಮ್ಮಲಿ ಹೆಚ್ಚಿನ ಅಭಿವೃದ್ಧಿ ಆಗಲಿ. ನೀರಾವರಿ, ಶಿಕ್ಷಣ, ಆರೋಗ್ಯ ಜೊತೆಗೆ ನಿರುದ್ಯೋಗ ಸಮಸ್ಯೆ ಬಗೆ ಹರಿಯಬೇಕು.
ಅದಕ್ಕೆ ಕಿತ್ತೂರು ಕರ್ನಾಟಕಕ್ಕೆ ವಿಶೇಷ ಅನುದಾನ ಕೊಡಬೇಕು ಎಂಬ ಬೇಡಿಕೆ ಇದೆ. ಉತ್ತರ ಕರ್ನಾಟಕ ಪ್ರತ್ಯಕ ರಾಜ್ಯ ವಿಚಾರ ದಿ. ಉಮೇಶ್ ಕತ್ತಿ, ಯತ್ನಾಳ ಬಳಿಕ ನೀವು ಧ್ವನಿ ಎತ್ತಿದ್ರಿ. ನಾನು ರಾಜಕೀಯ ಲಾಭಕ್ಕಾಗಿ ಮಂತ್ರಿ ಆಸೆಮಾತನಾಡಿದ್ದೇನೆ. ಈ ಭಾಗದ ಪರಿಸ್ಥಿತಿ ಬಗ್ಗೆ ವಿಸ್ತಾರವಾಗಿ ಅಸೆಂಬ್ಲಿಯಲ್ಲಿ ಮಾತನಾಡಿದ್ದೇನೆ ಎಂದರು.
ಲಕ್ಷ್ಮಣ ಸವದಿ ನಂದು ನಲವತ್ತು ವರ್ಷದ ದೋಸ್ತಿ – ಸವದಿ ಪರ ಬ್ಯಾಟ್ ಬೀಸಿದ ಕಾಗವಾಡ ಶಾಸಕ ರಾಜು ಕಾಗೆ
