ಉ.ಕ ಸುದ್ದಿಜಾಲ ಬೆಳಗಾವಿ :
7 ಕೆಜಿ ಬೆಳ್ಳಿ ಆಭರಣ ಕಳ್ಳತನ ಮಾಡಿದ್ದ ಅಂತರ್ ರಾಜ್ಯ ಕಳ್ಳರ ಬಂಧನ. ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದ ಕಳ್ಳರನ್ನ ಒಂದೇ ವಾರದಲ್ಲಿ ಬಂಧಿಸಿದ ಪೊಲೀಸರು. ಕಿತ್ತೂರು ಪೊಲೀಸರ ಭರ್ಜರಿ ಕಾರ್ಯಾಚರಣೆ;ಚಿನ್ನಾಭರಣ ದೋಚಿದ್ದ ಖದೀಮರ ಬಂಧನ.
ಬೆಳಗಾವಿ ಜಿಲ್ಲೆಯ ಕಿತ್ತೂರು ಪಟ್ಟಣದ ಮಾನಜ್ಜ ಜ್ಯುವೆಲ್ಲರಿ ಅಂಗಡಿಯಲ್ಲಿ ನಡೆದಿದ್ದ ಘಟನೆ. ಕಳ್ಳತನ ಕುರಿತು ಪೊಲೀಸ್ ಠಾಣೆಗೆ ದೂರು ನೀಡಿದ್ದ ಜ್ಯವೇಲರಿ ಶಾಪ್ ಮಾಲೀಕ ಸುಬ್ರಮಣ್ಯ ಮಾರ್ತಾಂಡಪ್ಪ ಪತ್ತಾರ. ದೂರು ಆಧರಿಸಿ ಎಸ್ಪಿ ಕೆ ರಾಮರಾಜನ್ ಹಾಗೂ ಡಿವೈಎಸ್ ಪಿ ವೀರಯ್ಯ ಹಿರೇಮಠ ಮಾರ್ಗದರ್ಶನದಲ್ಲಿ ತಂಡ ರಚನೆ. ಚಿನ್ನಾಭರಣ ಅಂಗಡಿ ಕಳ್ಳತನ ಮಾಡಿದ್ದ 5 ಜನ ಅಂತರ್ ರಾಜ್ಯ ಕಳ್ಳರ ಬಂಧನ.

ರಾಜಸ್ಥಾನ ಮೂಲದ 4 ಜನ ಹಾಗೂ ಮಧ್ಯಪ್ರದೇಶ ಮೂಲದ ಒಬ್ಬ ಆರೋಪಿ ಅರೆಸ್ಟ್. 7 ಕೆಜಿ ಬೆಳ್ಳಿ ಆಭರಣಗಳನ್ನು ಎಸ್ಕೇಪ್ ಮಾಡಿದ್ದ ಖದೀಮರು. ಜ್ಯುವೇಲರಿ ಶಾಪ್ ನ ಶೆಟರ್ಸ್ ಕೀಲಿ ಮುರಿದು ಬೆಳ್ಳಿಯ ಆಭರಣಗಳ ಎಸ್ಕೇಪ್ ಮಾಡಿದ್ದ ಆರೋಪಿಗಳು. ಆರೋಪಿಗಳ ವಿರುದ್ದ ರಾಜಸ್ಥಾನ ಹಾಗೂ ಮಧ್ಯಪ್ರದೇಶ ವಿವಿಧ ಠಾಣೆಗಳಲ್ಲಿ ದೂರು ದಾಖಲು.
ನಾರಸಿಂಗ್, ದಿಲೀಪಸಿಂಗ್,ಲೋಕೇಶ ಮೇಗವಾಲ, ನರೇಂದ್ರ ಗುಜ್ಜರ, ರಾಜಸ್ಥಾನದವರು, ಅರ್ಜುನಸಿಂಗ್ ಮಧ್ಯಪ್ರದೇಶದ ಆರೋಪಿಗಳು. ಆರೋಪಿಗಳಿಂದ 17 ಲಕ್ಷ ರೂ ಮೌಲ್ಯದ 7 ಕೆಜಿ ಬೆಳ್ಳಿಯ ಆಭರಣ, ಕೃತ್ಯಕ್ಕೆ ಉಪಯೋಗಿಸಿದ ಕಾರು ಸೇರಿ 22 ಲಕ್ಷ ಕಿಮ್ಮತ್ತಿನ ವಸ್ತುಗಳ ವಶಕ್ಕೆ. ಆರೋಪಿಗಳನ್ನ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಪೊಲೀಸರು.
ಸಿಪಿಐ ಶಿವಾನಂದ ಗುಡಗನಟ್ಟಿ,ಪಿಎಸ್ ಐ ಭರತ,ಹಂಪಣ್ಣವರ, ಸಿಬ್ಬಂದಿಗಳ ಕಾರ್ಯಕ್ಕೆ ಎಸ್ಪಿ ಶ್ಲಾಘನೆ. ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ.
