ಉ.ಕ ಸುದ್ದಿಜಾಲ ಬೆಳಗಾವಿ :
ಮನಿ ಡಬ್ಲಿಂಗ್ ಹೆಸರಿನ ಮೋಸ ಕ್ಕೆ ಯತ್ನ ನಾಲ್ವರು ಅರೇಸ್ಟ್ – ಬೆಳಗಾವಿ ಸಿಸಿಬಿ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ. 3 ಕೋಟಿ ನಗದು ಹಣ ಕೊಟ್ಟರೇ 5 ಕೋಟಿ ಅಕೌಂಟ್ ಗೆ ಹಾಕ್ತಿವಿ ಎಂದು ಮೋಸ.
ಬೆಳಗಾವಿ ಟಿಳಕವಾಡಿಯ ಶಾಂತಿ ನಗರದ ಮನೆ ಮೇಲೆ ದಾಳಿ. ಮನಿ ಡಬ್ಲಿಂಗ್ ನಲ್ಲಿ ತೊಡಗಿದ್ದ ಆರೋಪಿಗಳು ಲಾಕ್. 3 ಕೋಟಿಗೆ 5 ಕೋಟಿ ಕೊಡ್ತಿನಿ ಎಂದಿದ್ದ ಶಿವಲಿಂಗಯ್ಯ ಗಣಾಚಾರಿ, ಸಾಗರ ಕಿಳ್ಳಿಕೇತ, ವಿನಾಯಕ ನೋಕರೆ ಗ್ಯಾಂಗ್
ಈ ಗ್ಯಾಂಗ್ ಗೆ ಮೋಸ ಮಾಡಲು ಶಿವಾನಂದ ಮುನವಳ್ಳಿ ಯತ್ನ 3 ಕೋಟಿ ನಗದು ಹಣ ಇದೇ ಎಂದು ನಂಬಿಸಿ ಮೋಸ ಮಾಡಲು ಯತ್ನ. ಅಸಲಿ 500 ರುಪಾಯಿ ನೋಟುಗಳನ್ನ ಮೇಲಿಟ್ಟು ಕೆಳಗೆ ನಕಲಿ ಇಟ್ಟು ನಂಬಿಸಲು ಯತ್ನ. ಮಕ್ಕಳು ಆಟಕ್ಕೆ ಬಳುಸುವ ಚಿಲ್ಡ್ರನ್ ನೋಟ್ ಇಟ್ಟಿದ್ದ ಆರೋಪಿ ಶಿವಾನಂದ.
ನಕಲಿ 3 ಕೋಟಿ ತೋರಿಸಿ 5 ಕೋಟಿ ಆನ್ಲೈನ್ ಟ್ರಾನ್ಸಪರ್ ಮಾಡಿಸಿಕೊಳ್ಳಲು ಯತ್ನ. ಅಸಲಿ ನಕಲಿ ಹೆಸರಿನಲ್ಲಿ ಮನಿ ಡಬ್ಲಿಂಗ್ ಮಾಡಿದ್ದ ನಾಲ್ವರು ಜೈಲುಪಾಲು. ಆರೋಪಿಗಳಿಂದ 5000 ಸಾವಿರ ನಗದು, 5 ಮೊಬೈಲ್, ನಕಲಿ ಬ್ಯಾಂಕ್ ಸ್ಟೇಟಮೆಂಟ್ ಕಾಪಿ, ಏರ್ ಪಿಸ್ತೂಲ್ ಜಪ್ತಿ. ಬೆಳಗಾವಿ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
