ಉ.ಕ ಸುದ್ದಿಜಾಲ ಚಿಕ್ಕೋಡಿ :
ಕಬ್ಬು ಬಂಬಲ ಬೆಲೆ ಹೋರಾಟ ರಾಜ್ಯ ಸರ್ಕಾರದಿಂದ 3,600 ದರ ನಿಗಧಿ, ಆದರೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಜೈನಾಪೂರ ಗ್ರಾಮದಲ್ಲಿರುವ ಅಭಿನಂದನ ಹಾಗೂ ಉತ್ತಮ ಪಾಟೀಲ ಒಡೆತನದ ಸಕ್ಕರೆ ಕಾರ್ಖಾನೆ ಪ್ರತಿಟನ್ ಕಬ್ಬಿಗೆ 4,000 ದರ ಘೋಷಣೆ 2026-27ನೇ ಸಾಲಿನ ಹಂಗಾಮಿಗೆ ಪ್ರತಿ ಟನ್ ಕಬ್ಬಿಗೆ 4,000 ದರ ಘೋಷಣೆ ಮಾಡಿ ಪ್ರಕಟಣೆ ಹೊರಡಿಸಿದೆ.
ರಾಜ್ಯದ ಗಡಿ ಭಾಗದಲ್ಲಿರುವ ಅರಿಹಂತ ಸಕ್ಕರೆ ಕಾರ್ಖಾನೆ, ಪ್ರಸಕ್ತ 2026-27ನೇ ಸಾಲಿನ ಕಬ್ಬು ನುರಿಸುವ ಹಂಗಾಮಿಗೆ ಪ್ರತಿ ಟನ್ ಕಬ್ಬಿಗೆ ಒಟ್ಟು 4,000 ದರ ನೀಡಲು ನಿರ್ಧಾರ. ಕಬ್ಬು ಬೆಳೆಗಾರರಿಗೆ ಮೊದಲ ಕಂತಾಗಿ ಪ್ರತಿ ಮೆಟ್ರಿಕ್ ಟನ್ಗೆ ₹3,750 ನೀಡಲಾಗುವುದು.

ಕಬ್ಬು ನುರಿಸುವ ಹಂಗಾಮು ಮುಕ್ತಾಯವಾದ ನಂತರ ಎರಡನೇ ಕಂತಾಗಿ ₹50 ನೀಡಲಾಗುವುದು. ಸಕ್ಕರೆಯ ಮಾರಾಟ ದರ ಪ್ರತಿ ಕ್ವಿಂಟಾಲ್ಗೆ ₹50 ಹೆಚ್ಚಳವಾದಲ್ಲಿ ಮುಂದಿನ ಹಂಗಾಮು ಪ್ರಾರಂಭವಾಗುವ ಮೊದಲು ಮೂರನೇ ಕಂತಾಗಿ ಪ್ರತಿ ಟನ್ಗೆ ₹200 ನೀಡಲಾಗುವುದು.
ಈ ಮೂಲಕ ಒಟ್ಟು ಪ್ರತಿ ಮೆಟ್ರಿಕ್ ಟನ್ ಕಬ್ಬಿಗೆ ₹4,000 ದರ ಪಾವತಿಸಲಾಗುವುದು ಎಂದು ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ತಿಳಿಸಿದೆ.
