ಉ.ಕ ಸುದ್ದಿಜಾಲ ಅಥಣಿ :
ಅಖಾಡ್ ಇನ್ನು ರೆಡಿ ಇಲ್ಲಾ ಕುಸ್ತಿ ಆಡೋಕ್ ತಯಾರಿ ನಡೆಸವರೇ ಡಿಸಿಸಿ ಬ್ಯಾಂಕ್ ಚುನಾವಣೆ ವಿಚಾರವಾಗಿ ಜಿಲ್ಲೆಯಲ್ಲಿ ಭಾರಿ ಪೈಪೋಟಿ ನಡೆದಿದೆ. ಚುನಾವಣೆಗೂ ಮುನ್ನವೆ ನಾಯಕರು ತಮ್ಮ ಅಸ್ತಿತ್ವ ಕಾಯ್ದುಕೊಳ್ಳಲು ತಯಾರಿ ನಡೆಸಿದ್ದಾರೆ ಎಂದು ಅಥಣಿ ಶಾಸಕ ಲಕ್ಷ್ಮಣ ಸವದಿ ವ್ಯಂಗ್ಯವಾಡಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು ಇನ್ನು ಕುಸ್ತಿ ಅಖಾಡ್ ಇನ್ನು ಘೋಷಣೆ ಯಾಗಿಲ್ಲ ಅಷ್ಟರಲ್ಲೆ ಕುಸ್ತಿ ತಯಾರಿ ನಡೆಸಿದ್ದಾರೆ. ಡಿಸಿಸಿ ಬ್ಯಾಂಕ್ ಚುನಾವಣೆ ವಿಚಾರವಾಗಿ ಮಹಾರಾಷ್ಟ್ರದಲ್ಲಿ ನಡೆದ ಸಭೆ ವಿಚಾರ, ನಾವು ಧರ್ಮದ ಬಗ್ಗೆ ಚರ್ಚೆ ಮಾಡಿದ್ದೀವಿ.
ಜಾರಕಿಹೊಳಿ V/S ಕತ್ತಿ ಚುನಾವಣಾ ನಿಯೋಜನೆ ಕುರಿತು ಮಾತನಾಡಿದ ಸವದಿ ಇನ್ನು ಚುನಾವಣೆ ಘೋಷಣೆ ಆಗಿಲ್ಲ ಅಷ್ಟರಲ್ಲೆ ನಾನು ನೀನು ಅನ್ನೋದು ಸರಿಯಲ್ಲ, ಇನ್ನು ಚುನಾವಣೆ ಮುಂದಿದೆ ಎಲ್ಲ ನಾಯಕರು ಇನ್ನು ಚರ್ಚೆ ಮಾಡಲಿದ್ದೇವೆ ಚರ್ಚೆ ಬಳಿಕ ತೀರ್ಮಾನ ತಿಳಿಸುವೆ ಎಂದರು.
Vidio – ಇನ್ನು ಕುಸ್ತಿ ಅಖಾಡ್ ಇನ್ನು ಘೋಷಣೆ ಯಾಗಿಲ್ಲ ಅಷ್ಟರಲ್ಲೆ ಕುಸ್ತಿ ತಯಾರಿ ನಡೆಸಿದ್ದಾರೆ ಲಕ್ಷ್ಮಣ ಸವದಿ ವ್ಯಂಗ್ಯ?
