ಅಥಣಿ:

ಹಸುಗಳು ಒಂದು ಅಥವಾ ಎರಡು ಕರುಗಳಿಗೆ ಜನ್ಮ ನೀಡಿರುವುದನ್ನು ಕೇಳಿರುತ್ತೇವೆ ನೋಡಿರುತ್ತೇವೆ. ಆದರೆ, ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನಲ್ಲಿ ಒಂದು ಜವಾರಿ (ಕಿಲಾರಿ ಆಕಳು) ಹಸು ಮೂರು ಕರುಗಳಿಗೆ ಜನ್ಮ ನೀಡಿ ಅಚ್ಚರಿ ಮೂಡಿಸಿದೆ.

ಅಥಣಿ ತಾಲೂಕಿನ ಖಿಳೇಗಾಂವ್ ಗ್ರಾಮದ ಕುಮಾರ್ ಸದಾಶಿವ ತಗಲಿ ಎಂಬ ರೈತನಿಗೆ ಸೇರಿದ ಹಸು ಆರೋಗ್ಯಕರ ಜವಾರಿ ಆಕಳು ಮೂರು ಕರುಗಳಿಗೆ ಜನ್ಮ ನೀಡಿದ್ದು ಅಪರೂಪವಾಗಿದೆ. ಒಂದು ಹೆಣ್ಣಗಾರ ಮ್ತತೇರಡು ಹೋರಿಗಳನ್ನು ನೀಡಿದ್ದು ರೈತರ ಮೊಗದಲ್ಲಿ ಖುಷಿ ವ್ಯಕ್ತವಾಗಿದೆ. ಇದೇ ಮೊದಲ ಬಾರಿಗೆ ಸುತ್ತಮುತ್ತ ಎಲ್ಲಿ ಕೂಡಾ ಹಸು ಮೂರು ಕರ ಹಾಕಿದ್ದನ್ನು ನೋಡಿಲ್ಲ ಇದೇ ಮೊದಲ ಬಾರಿಗೆ ಹಸು ಒಂದು ಮೂರು ಕರ ಹಾಕುವುದರ ಮೂಲಕ‌ ಅಚ್ಚರಿ‌ ಮೂಡಿಸಿದೆ‌ ಎನ್ನುತ್ತಾರೆ ಸ್ಥಳೀಯರು.