ಉ.ಕ ಸುದ್ದಿಜಾಲ ಹುಕ್ಕೇರಿ :
ಪಂಚಮಸಾಲಿ ಸಮುದಾಯ 2ಎ ವರ್ಗಕ್ಕೆ ಸೇರಿಸಬೇಕೆಂದು ಬಸವ ಮೃತ್ಯುಂಜಯ ಸ್ವಾಮೀಜಿಗಳ ನೇತೃತ್ವದಲ್ಲಿ ಹೋರಾಟ ನಡೆದಿದ್ದು, ಅಕ್ಟೋಬರ್ 21ರಂದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಪಂಚಮಸಾಲಿಯ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಜರುಗುವ ಸಮಾವೇಶದಲ್ಲಿ ಪಕ್ಕ್ಷಾತೀತವಾಗಿ ಪಂಚಮಸಾಲಿ ಸಮಾಜದ ನಾಯಕರು ಭಾಗಿಯಾಗುತ್ತಿದ್ದಾರೆ.
ಪಂಚಮಸಾಲಿ ಒಗ್ಗಟ್ಟು ಹಾಗೂ ಬೃಹತ್ ಪ್ರಮಾಣದಲ್ಲಿ ಹುಕ್ಕೇರಿ ಪಟ್ಟಣದಲ್ಲಿ ರ್ಯಾಲಿ ಆಯೋಜನೆ ಮಾಡಲಾಗಿದ್ದು, ರಾಜ್ಯದ ಗಮನ ಇವತ್ತು ಹುಕ್ಕೇರಿಯತ್ತ ನೆಟ್ಟಿದೆ ಬರುವ 21 ಕ್ಕೆ ನಾವು ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಕೊಡಲಸಂಗಮ ಜಯ ಮುತೃಂಜಯ ಸ್ವಾಮೀಜಿ ಹೇಳಿದ್ದಾರೆ.
ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳ ಮಾಡಲಾಗಿದೆ. ಆದರೆ, ನಮ್ಮನ್ನು ನಿರ್ಲಕ್ಷ ಮಾಡಿದ್ರಾ ಎಂಬ ಭಾವನೆ ಕಾಡುತ್ತಿದೆ. ವಿಧಾನಸೌಧ ಮುತ್ತಿಗೆ ಹಾಕುವ ಕುರಿತು ಅಂದು ನಾವು ನಿರ್ಧಾರ ಮಾಡ್ತಿವಿ, ಈಗಾಗಲೇ ಮುಖ್ಯಮಂತ್ರಿಗಳು ನಾಲ್ಕು ಬಾರಿ ಮಾತು ಕೊಟ್ಟು ತಪ್ಪಿದ್ದಾರೆ, ಹುಕ್ಕೇರಿ ಸಮಾವೇಶದ ಮೂಲಕ ಸರ್ಕಾರಕ್ಕೆ ಸಂದೇಶ ಮಾಡುತ್ತೆವೆ ಎಂದರು.
ಪಂಚಮಸಾಲಿ ಸಮಾಜದಲ್ಲಿ ನಿರ್ಧಾರಕ್ಕೆ ಸಮಾವೇಶ ಹುಕ್ಕೇರಿಯಲ್ಲಿ ನಡೆಯಲಿದೆ. 50 ರಿಂದ 60 ಸಾವಿರ ಸಂಖ್ಯೆಯಲ್ಲಿ ಜನ ಸೇರುತ್ತಾರೆ, ಅಡವಿಸಿದ್ದೇಶ್ವರ ದೇವಸ್ಥಾನದಿಂದ ರ್ಯಾಲಿ ಹೊರಟು ಸಮಾವೇಶ ಸ್ಥಳ ತಲುಪಲಿದೆ. 65 ರಿಂದ 70 ಹಳ್ಳಿಗಳಲ್ಲಿ ಹೋರಾಟದ ಸಭೆ ಮಾಡಿ ಜನರಿಗೆ ತಿಳಿ ಹೇಳಲಾಗಿದೆ.
ಹುಕ್ಕೇರಿ ಯಮಕನಮರಡಿ ಕ್ಷೇತ್ರದ ಹಳ್ಳಿಗಳಲ್ಲಿ ಸಭೆ ಮಾಡಲಾಗಿದೆ. ನಾಳಿನ ಸಮಾವೇಶದಲ್ಲಿ ನಮ್ಮ ಸಮುದಾಯದವರೇ ಇರಬೇಕು, ಸಮಾವೇಶದಲ್ಲಿ ಕೇವಲ ಪಂಚಮಸಾಲಿಯವರು ಇರಬೇಕು ಎಂದ ಸ್ವಾಮೀಜಿ, ಬೆಂಗಳೂರಿಗೆ 25 ಲಕ್ಷ ಜನ ಯಾವಾಗ ಹೋಗಬೇಕು. ವಿಧಾನಸೌಧಕ್ಕೆ ಯಾವಾಗ ಮುತ್ತಿಗೆ ಹಾಕಬೇಕು ಅಂತ 21 ನೇ ತಾರೀಕು ಘೋಷಣೆ ಮಾಡುತ್ತೆವೆ ಎಂದರು.
ಸಿಡಿ ಇದೆ ಎಂಬ ಇಟ್ಟುಕೊಂಡು ಸ್ವಾಮೀಜಿ ತೇಜೊವದೆ ಮಾಡುವ ಯತ್ನ ವಿಚಾರವಾಗಿ ಪ್ರತಿಕ್ರಿಯಿಸಿದ ಜಯಮೃತುಂಜಯ ಆನೆ ನಡೆದಿದ್ದೆ ದಾರಿ ಅಂತ ನಾವು ಒಳ್ಳೆಯ ಹೆಜ್ಜೆ ಇಟ್ಟಿದ್ದೆವೆ ಎಂದರು.