ಉ.ಕ ಸುದ್ದಿಜಾಲ‌ ಧಾರವಾಡ :

ಧಾರವಾಡ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿ ಆತ್ಮಹತ್ಯೆ ಮಾಡಿಕೊಡಿದ್ದು ಬೆಡ್ ಶೀಟ್ ತುಂಡು ಬಳಸಿ ನೇಣಿಗೆ ಶರಣಾಗಿದ್ದಾನೆ.

ಕಳೆದ ಅಕ್ಟೋಬರ್ 14 ರಂದು ಧಾರವಾಡದ ಜಿಲ್ಲಾ ಆಸ್ಪತ್ರೆ ಬಳಿ ಮಹಿಳೆಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ವಿಚಾರಣಾಧೀನ ಕೈದಿ. ಆನಂದ ದುಧನಿ ಆತ್ಮಹತ್ಯೆ ಮಾಡಿಕೊಂಡು ವಿಚಾರಣಾಧೀನ ಕೈದಿಯಾಗಿಯಾಗಿದ್ದಾನೆ.

ಸವಿತಾ ಕಿತ್ತೂರು ಎಂಬ ಮಹಿಳೆಯನ್ನು, ಧಾರವಾಡದ ಸಿವಿಲ್ ಆಸ್ಪತ್ರೆ ಬಳಿ, ಕಳೆದ ಅ.14ರಂದು ತಡ ಸಂಜೆ ಆನಂದ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದ.

ಪ್ರಕರಣ ದಾಖಲು ಮಾಡಿಕೊಂಡಿದ್ದ ಉಪನಗರ ಠಾಣೆಯ ಪೊಲೀಸರು ಕೊಲೆ ನಡೆದ ಮೂರು ದಿನಗಳ‌ ನಂತರ ಆರೋಪಿ ಆನಂದನನ್ನು ಬಂಧಿಸಿದ್ದರು. ಠಾಣೆಯಯಲ್ಲಿ ವಿಚಾರಣೆ ಬಳಿಕ ಬಂಧಿತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು.

ಆದರೆ ಇಂದು ಮುಂಜಾನೆ  ಆನಂದ ಜೈಲಿನಲ್ಲೇ ಬೆಡ್‌ಶೀಟ್ ಹರಿದು ಅದರ ತುಂಡಿನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಘಟನೆಯ ಮಾಹಿತಿ ಮೇರೆಗೆ ಸ್ಥಳಕ್ಕೆ ಧಾರವಾಡ ಜಿಲ್ಲಾ ಕೇಂದ್ರ ಕಾರಾಗೃಹದ ಪೊಲೀಸ್ ಅಧಿಕಾರಿಗಳು ಹಾಗೂ ಉಪನಗರ ಠಾಣೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ಕೈಗೊಂಡಿದ್ದಾರೆ.